ಮಂಗಳೂರು: ನಗರದ ಕರ‍್ದಬ್ಬು ಬಾರಗೇಶ್ವರ ದೇವಸ್ಥಾನ ಮತ್ತು ಶ್ರೀ ನಾಗಕನ್ನಿಕಾ ಕ್ಷೇತ್ರ ಕುದ್ಕೋರಿಗುಡ್ಡೆ ಇಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಪ್ರದೇಶಾಭಿವೃದ್ದಿ ನಿಧಿಯಿಂದ ನಿರ್ಮಿಸಲ್ಪಟ್ಟ
ಮೇಲ್ಛಾವಣಿ ಘಟಕ ವನ್ನು ಐವನ್ ಡಿಸೋಜಾರವರವರು ಉದ್ಘಾಟಿಸಿ ಎಲ್ಲಾ ಧರ್ಮದ ಜನರ ಸೇವೆ ಮತ್ತು ಮೂಲಭೂತ ಸೌರ‍್ಯವನ್ನು ಒದಗಿಸಿಕೊಡುವುದು ಸರಕಾರದ ಕರ್ತವ್ಯ. ಸರಕಾರ ಸಮಾಜದ ಎಲ್ಲಾ ಧರ್ಮದ ಜನರ ಏಳಿಗೆಯನ್ನು ಬಯಸುತ್ತದೆ. ಮತ್ತು ಶಾಂತಿ ಮತ್ತು ನೆಮ್ಮದಿಯ ಜೀವನವನ್ನಾಗಿಸುವುದು ಸರಕಾರದ ಮೊದಲ ಆದ್ಯತೆಯಾಗಿದೆ. ಎಂದರು. ದೇವಸ್ಥಾನದ ನಾಗಕನ್ನಿಕಾ ಕ್ಷೇತ್ರದ ಮೇಲ್ಛಾವಣಿ ಘಟಕದ ಬೇಡಿಕೆಯನ್ನು ಈಡೇರಿಸಲು ಐವನ್ ಡಿʼಸೋಜಾ ಇವರು ಶ್ರಮಪಟ್ಟದನ್ನು ಸ್ಥಳೀಯರು ಶ್ಲಾಘಿಸಿದರು ಮತ್ತು ಕೂಡಲೇ ಸ್ಪಂದಿಸಿದಕ್ಕೆ ಅಭಿನಂದನೆ ಸಲ್ಲಿಸಿದರು.
ದೇವಸ್ಥಾನದ ಪ್ರಮುಖರಾದ ವಿಜಯ ಕುಮಾರ್, ಅರ್ಚಕರು ನವೀನ್ ಕುಮಾರ್, ಗುರಿಕಾರ ನಾರಾಯಣ, ಮಾಜಿ ಮನಪಾ ಸದಸ್ಯರಾದ ವಿಜಯಲಕ್ಷ್ಮಿ, ಬಾಸ್ಕರ್ ರಾವ್, ಕಾಂಗ್ರೆಸ್ ನಾಯಕರಾದ ಜೇಮ್ಸ್ ಪ್ರವೀಣ್, ಗ್ಯಾರಂಟಿ ಸಮಿತಿಯ ಸದಸ್ಯರಾದ ಪ್ರಶಾಂತ್ ಕುದುಕೋರಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.

