ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ ಉದ್ಘಾಟನಾ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿ ಕೇಶವ ಬಂಗೇರ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕನಿಗೆ ಉತ್ತಮ ಸ್ಥಾನಮಾನವಿದೆ. ಆದರೆ ಉತ್ತಮ ನಾಯಕನ ಆಯ್ಕೆಯಾಗಬೇಕಾದರೆ ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಯಾವುದೇ ಆಮಿಷಕ್ಕೆ ಒಳಗಾಗದೆ ಸೂಕ್ತ ವ್ಯಕ್ತಿಗೆ ಕಡ್ಡಾಯವಾಗಿ ಮತ ಚಲಾಯಿಸಬೇಕು. ವಿದ್ಯಾರ್ಥಿಗಳು ತಮ್ಮಲ್ಲಿ ಜ್ಞಾನ ತುಂಬುತ್ತಿದ್ದಂತೆ ಅಹಂ ಪಟ್ಟು ಎದೆಯುಬ್ಬಿಸಿ ನಡೆಯದೆ ಗೊನೆಬಿಟ್ಟ ಬಾಳೆಯಂತೆ ವಿಧೇಯತೆ ಯಿಂದ ಭಾಗಬೇಕು . ಇದು ನಿಮ್ಮ ಜೀವನದ ಬೆಳಗು ಜಾವ ಎನ್ನುವುದನ್ನು ಅರಿತು ಚೆನ್ನಾಗಿ ಕಲಿತು ವಿದ್ಯಾರ್ಥಿಗಳು ತಮ್ಮ ಉತ್ತಮವಾದ ಅನನ್ಯತೆಯನ್ನ ಬಿಟ್ಟು ಹೋಗಬೇಕು . ಭಗತ್ ಸಿಂಗ್ ನನ್ನು ಪ್ರೇರಣೆಯಾಗಿ ಪಡೆದುಕೊಂಡು ಛಲದಿಂದ ಬದುಕುವುದನ್ನು ಕಲಿಯಿರಿ ಎಂದರು.
ಸಿಎನ್ ಎಸ್ ಎಂ ಸರಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಪ್ರಕಾಶ್ ಭಟ್ ಅವರು ಮಾತನಾಡಿ , ವಿದ್ಯಾರ್ಥಿಗಳು ಅಂಕದ ಜೊತೆ ಜ್ಞಾನ ಮತ್ತು ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ನಾಯಕನಾದವನು ಮಾನವೀಯತೆ, ಧ್ಯೇಯ, ತಾಳ್ಮೆ ,ಧೈರ್ಯ, ಆತ್ಮವಿಶ್ವಾಸ ಮತ್ತು ಉತ್ತಮ ಸಂವಹನ ಕಲೆಯನ್ನು ತನ್ನಲ್ಲಿ ಬೆಳೆಸಿಕೊಳ್ಳಬೇಕು ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿರುವ ಅಮೃತ ಭಾರತಿ ಟ್ರಸ್ಟ್ ನ ಸದಸ್ಯರಾದ ಬಿ. ಗಣೇಶ್ ಕಿಣಿ ಬೆಳ್ವೆ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ವಿದ್ಯಾರ್ಥಿಗಳು ಸುಸಂಸ್ಕೃತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು . ಸಜ್ಜನರ ಆದರ್ಶವನ್ನು ಪಾಲಿಸಬೇಕು ಎಂದರು. ಪ್ರಾಂಶುಪಾಲರಾದ ಪ್ರಕಾಶ್ ಜೋಗಿ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜೇಶ್ ನಾಯಕ್ ಟ್ರಸ್ಟ್ ವಿಶ್ವಸ್ಥರಾದ ಬಾಲಕೃಷ್ಣ ಮಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು ಟ್ರಸ್ಟ್ ನ ಕಾರ್ಯದರ್ಶಿಗಳಾದ ಗುರುದಾಸ್ ಶೆಣೈ , ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಸತೀಶ್ ಪೈ , ವಿದ್ಯಾಲಯದ ಅಧ್ಯಕ್ಷರಾದ ಶೈಲೇಶ್ ಕಿಣಿ, ಟ್ರಸ್ಟಿಗಳಾದ ಯೋಗೀಶ್ ಭಟ್, ವಿಷ್ಣುಮೂರ್ತಿ ನಾಯಕ್, ಲಕ್ಷ್ಮಣ್ ಭಟ್ , ಹಾಸ್ಟೆಲ್ ಕಮಿಟಿಯ ಸದಸ್ಯರಾದ ರಾಮಕೃಷ್ಣ ಆಚಾರ್ಯ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ್ ಶೆಟ್ಟಿ, ಸಮಿತಿ ಸಂಯೋಜಕರಾದ ದತ್ತಾನಂದ್, ಚಂದ್ರಹಾಸ್ , ಉಪನ್ಯಾಸಕರು , ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನ್ನಪೂರ್ಣ ನಿರೂಪಿಸಿ, ಸೃಷ್ಟಿ ಕೆ . ಪೂಜಾರಿ ಸ್ವಾಗತಿಸಿ ಅನುಷಾ ನಾಯಕ್ ಅತಿಥಿಗಳ ಪರಿಚಯ ಮಾಡಿದರು. ಧೃತಿ ಎಸ್ ಪೂಜಾರಿ ಸಮಿತಿಯ ಪದಾಧಿಕಾರಿಗಳು ಮತ್ತು ಸಂಯೋಜಕರ ಪಟ್ಟಿ ವಾಚಿಸಿದರು. ಸಮಿತಿ ಅಧ್ಯಕ್ಷ ಆದಿತ್ಯ ಶೆಟ್ಟಿ ವಂದಿಸಿದರು.