ವಿಷಯ ಸಂಪದೀಕರಣ ಕಾರ್ಯಾಗಾರ ಉದ್ಘಾಟನೆ
ಉಡುಪಿ: ಶಿಕ್ಷಕರು ಬದಲಾಗುವ ತರಗತಿ ಸನ್ನಿವೇಶಗಳಿಗೆ ಒಗ್ಗಿಕೊಳ್ಳುವ ಮತ್ತು ತರಗತಿಯನ್ನು ಸಂತಸದಾಯಕವಾಗಿ ಇರಿಸಿಕೊಳ್ಳುವ ಸಲುವಾಗಿ ಪುನಶ್ಚೇತನ ವಿಷಯ ಸಂಪದೀಕರಣ ಅತ್ಯಂತ ಪೂರಕವಾಗಿದೆ. ಶಾಲಾ ದಿನಗಳನ್ನು ಹೊರತುಪಡಿಸಿ ಭಾನುವಾರದ ರಜೆಯಲ್ಲಿಯೂ ವಿದ್ಯಾರ್ಥಿಗಳಿಗಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ವೃತ್ತಿ ಬದ್ಧತೆಗೆ ಸಾಕ್ಷಿ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಪ್ರೌಢಶಾಲೆಯ ಕನ್ನಡ ಶಿಕ್ಷಕರು ಉಳಿದೆಲ್ಲಾ ಶಿಕ್ಷಕರಿಗೆ ಮಾದರಿ ಎಂಬುದಾಗಿ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಳದ ಧರ್ಮದರ್ಶಿ ವಿಜಯ ಬಲ್ಲಾಳ್ ಹೇಳಿದರು.
ಅವರು ಆ 24 ರಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಶ್ರೀ ಮಹಾಕಾಳಿ ದೇವಳದ ಸಂಪೂರ್ಣ ಸಹಕಾರದಲ್ಲಿ ಉಡುಪಿ ಜಿಲ್ಲಾ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ವತಿಯಿಂದ ನಡೆದ ವಿಷಯ ಸಂಪದೀಕರಣ ಕಾರ್ಯಾಗಾರವನ್ನು ಭವಾನಿ ಮಂಟಪದಲ್ಲಿ ಉದ್ಘಾಟನೆ ಮಾಡಿ ಮಾತುಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪಿ. ವಿ. ಆನಂದ ಸಾಲಿಗ್ರಾಮ ವಹಿಸಿದ್ದರು. ಈ ಸಂದರ್ಭದಲ್ಲಿ ನೂತನ ಡಿಡಿಪಿಐ ಲೋಕೇಶ್ ಸಿ ಮತ್ತು ಪದೋನ್ನತಿ ಹೊಂದಿ ಡಯಟ್ ಪ್ರಾಂಶುಪಾಲರಾದ ಅಶೋಕ್ ಕಾಮತ್ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನಾಟಕ ರಂಗದ ನಿರ್ದೇಶಕ ಶ್ರೀಪಾದ ಭಟ್ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಸಂಘದ ಕಾರ್ಯದರ್ಶಿ ಶೇಡಿಮನೆ ರಾಜೀವ ಪೂಜಾರಿ ಸ್ವಾಗತಿಸಿ, ಕಾರ್ಕಳ ತಾಲೂಕು ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಜಾಲ್ಸೂರು ಗಣೇಶ್ ನಿರೂಪಿಸಿ ವಂದಿಸಿದರು.
ಬಳಿಕ ಕನ್ನಡದಲ್ಲಿ ಎಲ್ ಬಿ ಎ ಮತ್ತು ಎಫ್ ಎಲ್ ಎನ್ ಹಾಗೂ ಕನ್ನಡ ಪಠ್ಯದಲ್ಲಿ ನಾಟಕ ಅಂಶ ಎಂಬ ವಿಷಯಗಳ ಕುರಿತು ಕಾರ್ಯಗಾರ, ಶಿಕ್ಷಕಿಯರಿಂದ ಪಠ್ಯ ಆಧಾರಿತ ತಾಳಮದ್ದಲೆ ನಡೆಯಿತು.