ದಕ್ಷಿಣ ಕನ್ನಡ ಜಿಲ್ಲಾ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು ರಾಮಾಂಜನೇಯ ದೇವಸ್ಥಾನದ ಮುಂಭಾಗ ರಾಜ್ಯ ಹೆದ್ದಾರಿಯಿಂದ ಪರಾರಿಬೆಟ್ಟು ಉಜ್ಜಿಮಾರು ಸಂಪರ್ಕ ರಸ್ತೆಯ ಮೊದಲ ಹಂತದ ಕಾಮಗಾರಿಯನ್ನು ಉದ್ಘಾಟಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್ ಅವರು ಉದ್ಘಾಟನೆಗಳು ಜನರಿಗೆ ಅನುಕೂಲವಾಗುವ ಸಂಪರ್ಕ ರಸ್ತೆಯನ್ನು ಮಾಡುವುದಕ್ಕೆ ನಮ್ಮ ಮೊದಲ ಆದ್ಯತೆ ಇದೆ.

ಇದರಿಂದಾಗಿ ಜನರ ದಿನನಿತ್ಯದ ಬದುಕಿಗೆ ಬಹಳಷ್ಟು ಸಹಕಾರಿಯಾಗುವುದಕ್ಕೆ ಸಾಧ್ಯ ಇದೆ. ವಾಹನಗಳ ಓಡಾಟಕ್ಕೂ ಕೂಡ ಇದರಿಂದ ಸುಲಭ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಜೆಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಂದಾಳುಗಳು, ಬಿಜೆಪಿ ಮುಖಂಡರುಗಳು, ಕಾರ್ಯಕರ್ತರುಗಳು ಹಾಗೂ ಕೆಲವು ಅಧಿಕಾರಿಗಳು ಹಾಜರಿದ್ದರು.
ವರದಿ ರಾಯಿ ರಾಜ ಕುಮಾರ