ಮಂಗಳೂರು ನಗರದ ನಾಗಕನ್ನಿಕಾ ಕ್ಷೇತ್ರದ ಮೇಲ್ಛಾವಣಿ ಮತ್ತು ಅರದಳ ಮೇಲ್ಛಾವಣಿ ಉದ್ಘಾಟನೆ

0
23

ಮಂಗಳೂರು ನಗರದ ಕೋರ್ದಬ್ಬು ಬಾರಗೇಶ್ವರ ದೇವಸ್ಥಾನಮತ್ತು ಶ್ರೀ ನಾಗಕನ್ನಿಕಾ ಕ್ಷೇತ್ರ ಕುದ್ಕೋರಿಗುಡ್ಡೆ ಇಲ್ಲಿ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರ ಪ್ರದೇಶಾಭಿವೃದ್ದಿ ನಿಧಿಯಿಂದ ನಿರ್ಮಿಸಲ್ಪಟ್ಟ ಮೇಲ್ಛಾವಣಿ ಘಟಕ ವನ್ನು ಐವನ್‌ ಡಿಸೋಜಾರವರವರು ಉದ್ಘಾಟಿಸಿ ಎಲ್ಲಾ ಧರ್ಮದ ಜನರ ಸೇವೆ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸಿಕೊಡುವುದು ಸರಕಾರದ ಕರ್ತವ್ಯವಾಗಿದೆ. ಸರಕಾರ ಸಮಾಜದ ಏಲ್ಲಾ ವರ್ಗದ ಜನರ ಏಳಿಗೆಯನ್ನು ಬಯಸುತ್ತದೆ. ಮತ್ತು ಶಾಂತಿ ಮತ್ತು ನೆಮ್ಮದಿಯ ಜೀವನವನ್ನಾಗಿಸುವುದು ಸರಕಾರದ ಮೊದಲ ಆದ್ಯತೆಯಾಗಿದೆ.ಎಂದು ಮೇಲ್ಛಾವಣಿ ಘಟಕವನ್ನು ಉದ್ಘಾಟಿಸುತ್ತಾ ಮಾತನಾಡಿದರು ಈ ಸಂದರ್ಭದಲ್ಲಿ ಕೋರ್ದಬ್ಬು ಬಾರಗೇಶ್ವರ ದೇವಸ್ಥಾನದ ನಾಗಕನ್ನಿಕಾ ಕ್ಷೇತ್ರದ ಮೇಲ್ಛಾವಣಿ ಘಟಕದ  ಬೇಡಿಕೆಯನ್ನು ಈಡೇರಿಸಲು ಐವನ್‌ ಡಿʼಸೋಜಾ ಇವರು ಶ್ರಮಪಟ್ಟದನ್ನು ಸ್ಥಳೀಯರು ಶ್ಲಾಘಿಸಿದರು ಮತ್ತು ಕೂಡಲೇ ಸ್ಪಂದಿಸಿದಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರಾದ ವಿಜಯ ಕುಮಾರ್, ಆರ್ಚಕರು ನವೀನ್ ಕುಮಾರ್, ಗುರಿಕಾರ ನಾರಾಯಣ, ಮಾಜಿ ಮನಪಾ ಸದಸ್ಯರಾದ ವಿಜಯಲಕ್ಷ್ಮಿ, ಬಾಸ್ಕರ್ ರಾವ್, ಕಾಂಗ್ರೆಸ್ ನಾಯಕರಾದ ಜೇಮ್ಸ್ ಪ್ರವೀಣ್, ಗ್ಯಾರಂಟಿ ಸಮಿತಿಯ ಸದಸ್ಯರಾದ ಪ್ರಶಾಂತ್ ಕುದುಕೋರಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here