ಇನಾಯತ್ ಆರ್ಟ್ ಗ್ಯಾಲರಿ :- ಚಿತ್ರಕಲಾ ಸ್ಪರ್ಧೆ ಬಹುಮಾನ ವಿತರಣಾ ಮತ್ತು ಅಭಿನಂದನಾ ಸಮಾರಂಭ

0
25

ಉಡುಪಿ ಇನಾಯತ್ ಆರ್ಟ್ ಗ್ಯಾಲರಿ ಇದರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ನಡೆದ ಉಡುಪಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪದಾ೯ ಕಾರ್ಯಕ್ರಮದ ಬಹುಮಾನ ವಿತರಣಾ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಗ್ಯಾಲರಿಯ ಅವರಣದಲ್ಲಿ ಇಂದು ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸ್ಥಾಪಕರಾದ ವಿಶ್ವನಾಥ್ ಶೆಣಿೈ, ಮಕ್ಕಳಿಗೆ ಎಳವಿಯಲ್ಲಿಯೇ ಕಲೆಯ ಬಗ್ಗೆ ಅಭಿಮಾನ ಮೂಡಿಸಿದಾಗ ಮುಂದೆ ಅವರು ಉತ್ತಮ ಕಲಾವಿದರಾಗಲು ಸಾಧ್ಯ ಈ ನಿಟ್ಟಿನಲ್ಲಿ ನಡೆದ ಈ ಕಾರ್ಯಕ್ರಮ ಅಭಿನಂದನೀಯ ಎಂದರು.
ಈ ಸಂದರ್ಭದಲ್ಲಿ ಲಲಿತ ಕಲಾ ಅಕಾಡೆಮಿಯ ಸಹಸದಸ್ಯ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಛಾಯಾಚಿತ್ರಗ್ರಾಹಕ ಆಸ್ಟ್ರೋಮೋಹನ್ ಮತ್ತು ವ್ಯಂಗ್ಯ ಚಿತ್ರ ಕಲಾವಿದರ ಸಂಘದಿಂದ ಜೀವಮಾನದ ಸಾಧನೆಗಾಗಿ ಪುರಸ್ಕಾರ ಪಡೆದ ಜೀವನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ನಗದು ಸಹಿತ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಇನಾಯತ್ ಆರ್ಟ್ ಗ್ಯಾಲರಿಯ ಮುಖ್ಯಸ್ಥರಾದ ಲಿಯಾಖತ್ ಅಲಿ ಅತಿಥಿಗಳನ್ನು ಸ್ವಾಗತಿಸಿದರು.
ಸಂಸ್ಥೆಯ ಕಾರ್ಯಕಾರಿ ಸಮಿತಿಯ ಯು.ಜೆ ದೇವಾಡಿಗ, ಅನಂತ್ ಶೇಟ್, ಮೋಹನ್ ಕೃಷ್ಣ, ನರಸಿಂಹಮೂರ್ತಿ ಮಣಿಪಾಲ, ರಫೀಕ್ ತೋನ್ಸೆ ಮುಂತಾದವರು ಸಹಕರಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ವಂದಿಸಿದರು

LEAVE A REPLY

Please enter your comment!
Please enter your name here