ಭಾರತ-ಪಾಕ್ ಸೇನಾ ಸಂಘರ್ಷ: ಆಂಧ್ರ ಪ್ರದೇಶದ ವೀರ ಯೋಧ ಹುತಾತ್ಮ

0
507


ಭಾರತ-ಪಾಕಿಸ್ತಾನ ನಡುವೆ ನಡೆಯುತ್ತಿರುವ ಸೇನಾ ಸಂಘರ್ಷದಲ್ಲಿ ಭಾರತೀಯ ಸೇನೆಯ ವೀರ ಯೋಧ ಮೂದ್ ಮುರಳಿ ನಾಯ್ಕ್ ಹುತಾತ್ಮರಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಗೋರಂಟ್ಲ ಮಂಡಲದ ಪುದಗುಂಡ್ಲಪಲ್ಲಿ ತಾಂಡಾದಲ್ಲಿ ದುಃಖದ ಮಡುಗಟ್ಟಿದೆ. ಸುಮಾರು 23 ವರ್ಷ ವಯಸ್ಸಿನ ಮುರಳಿ ನಾಯ್ಕ್ ಅವರು ಡಿಸೆಂಬರ್ 2022 ರಲ್ಲಿ ಸೇನೆಗೆ ಸೇರಿದ್ದರು ಮತ್ತು AV (OPR) ಟ್ರೇಡ್ ಅಡಿಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು (ARMY NO : A3451489H) ಮುರಳಿ ನಾಯಕ್ ಬಡತನದ ಹಿನ್ನೆಲೆಯಿಂದ ಬಂದವರು. ಅವರ ಪೋಷಕರಾದ ಎಂ. ಜ್ಯೋತಿಬಾಯಿ ಮತ್ತು ಎಂ. ಶ್ರೀರಾಮ್ ನಾಯ್ಕ್,ದಿನಗೂಲಿ ಕಾರ್ಮಿಕರು. ಅವರ ತ್ಯಾಗ ಗ್ರಾಮಕ್ಕೆ ಅಪಾರ ಹೆಮ್ಮೆ ಮತ್ತು ಆಳವಾದ ದುಃಖವನ್ನು ತಂದಿದೆ.

ದುರಂತ ಸುದ್ದಿ ತಿಳಿದ ಸಚಿವೆ ಸವಿತಾ ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ರಾಜ್ಯ ಸರ್ಕಾರದ ಪರವಾಗಿ ರೂ. 5 ಲಕ್ಷ ಆರ್ಥಿಕ ನೆರವನ್ನು ನೀಡಿದರು.

ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹುತಾತ್ಮ ಯೋಧನ ಪೋಷಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕುಟುಂಬದ ಪರ ರಾಜ್ಯ ಸರ್ಕಾರ ದೃಢವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ. “ಧೈರ್ಯ ಕಳೆದುಕೊಳ್ಳಬೇಡಿ; ಆಂಧ್ರ ಪ್ರದೇಶದ ಸರ್ಕಾರ ಮತ್ತು ಜನರು ನಿಮ್ಮೊಂದಿಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದು, ಹೆಚ್ಚಿನ ನೆರವು ಮತ್ತು ದೀರ್ಘಾವಧಿಯ ಬೆಂಬಲದ ಭರವಸೆ ನೀಡಿದ್ದಾರೆ.
ಹುತಾತ್ಮರಾದ ವೀರಯೋಧನಿಗೆ ಶ್ರದ್ಧಾಂಜಲಿಯಾಗಿ ಗೋರಂಟ್ಲದ ಪ್ರಮುಖ ವೃತ್ತದಲ್ಲಿ ಮುರಳಿ ನಾಯ್ಕರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಸಚಿವೆ ತಿಳಿಸಿದರು. ಪ್ರತಿಮೆ ಸ್ಥಾಪನೆಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ.

ಸಕಲ ಸೇನಾ ಗೌರವಗಳೊಂದಿಗೆ ನಾಳೆ ಹುತಾತ್ಮರ ಅಂತಿಮ ಸಂಸ್ಕಾರ ನಡೆಯಲಿದೆ. ಸೇನೆಯ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಗೌರವ ಸಲ್ಲಿಸಲು ರಾಜ್ಯದ ಅಧಿಕಾರಿಗಳು ಹಾಜರಾಗಲಿದ್ದಾರೆ.

LEAVE A REPLY

Please enter your comment!
Please enter your name here