ಮಂಗಳೂರು ಮಾರ್ಚ್ 07 : ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಆಶ್ರಯದಲ್ಲಿ ಶೈಕ್ಷಣಿಕ ಕಾರ್ಯಗಾರವು ಸಂಘದ ಡಾ| ಎ.ವಿ. ರಾವ್ ಸಭಾಂಗಣದಲ್ಲಿ ತಾ.06.03.2026 ರಂದು ಸಂಘದ ಅಧ್ಯಕ್ಷ ಡಾ| ಸದಾನಂದ ಪೂಜಾರಿ ನೇತೃತ್ವದಲ್ಲಿ ಜರಗಿತು.
ಡಾ। ಸದಾನಂದ ಪೂಜಾರಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸದಸ್ಯರು ಮತ್ತು ಅತಿಥಿಗಳನ್ನು ಸ್ವಾಗತಿಸಿ ಈ ಶೈಕ್ಷಣಿಕ ಕಾರ್ಯಗಾರವನ್ನು ಸಂಸ್ಥೆಯ ಸದಸ್ಯರ ನಿರಂತರ ವೈದ್ಯಕೀಯ ಶಿಕ್ಷಣ ಅಂಗವಾಗಿ ಆಯೋಜಿಸಲಾಗಿದೆ” ಎಂದು ನುಡಿದು ಸದಸ್ಯರು ಇದರ ಸದುಪಯೋಗವನ್ನು ಪಡೆಯಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ| ತಿಮ್ಮಯ್ಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿ ಡಾ| ಅನಿಮೇಶ್ ಜೈನ್ ಸಂಪಾದಕ್ವದ ಸಂಘದ ವಾರ್ತಾಗೃಹ ಪತ್ರಿಕೆ “ಮೆಡಿಲೋರ್”ನ್ನು ಅನಾವರಣಗೊಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ನಗರದ ಎ.ಜೆ. ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರ ತಜ್ಞ ಡಾ| ರಾಘವೇಂದ್ರ ನಾಯಕ್‌ರವರು ಮೂತ್ರ ಪಿಂಡ ಮತ್ತು ಹೃದ್ರೋಗ ಶಾಸ್ತ್ರದಲ್ಲಿ ಇತ್ತೀಚಿಗಿನ ಬೆಳವಣಿಗೆಗಳು, ಪರಿಕಲ್ಪನೆಗಳು ಮತ್ತು ಚಿಕಿತ್ಸಾ ವಿಧಿವಿಧಾನಗಳ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು.
ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ತಜ್ಞ ಡಾ| ಪ್ರದೀಪ್ ಪಿರೇರಾರವರು ಹೃದಯ ಆಘಾತ, ವೈಪಲ್ಯ ಸಂದರ್ಭದಲ್ಲಿ ತುರ್ತು ನಿರ್ವಹಣೆ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು.
ಮುಂಬಯಿ ನಗರದ ಹಿಂದುಜಾ ಆಸ್ಪತ್ರೆಯ ಅರ್ಬುದಾ ರೋಗ ಶಸ್ತ್ರ ಚಿಕಿತ್ಸಕ ಡಾ| ಮುರದ ಲಾಲ ಅವರು ತಮ್ಮ ಹವ್ಯಾಸಿ ಸಾಹಸಮಯ ವೃತ್ತಿಯ ಅಂಗವಾಗಿ 42 ದಿನ ಅವಧಿಯ ಅದ್ಭುತ 29000 ಅಡಿ ವಿಶ್ವದ ಅತಿ ಎತ್ತರದ ಮೌಂಟ್ ಎವೆರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಪರ್ವತಾರೋಹಣದ ಬಗ್ಗೆ ಹಾಗೂ ಅವರು ಈ ಸಂದರ್ಭದಲ್ಲಿ ಎದುರಿಸಿದ ಭಯಾನಕ ಸಮಸ್ಯೆ ಗಂಭೀರ ಸನ್ನಿವೇಶವನ್ನು ಸಾಕ್ಷ್ಯಧಾರಿತ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮದ ಮೂಲಕ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ್ದ ಅನುಪಮ ಸೇವೆ ಮತ್ತು ಪರ್ವತಾರೋಹಣದಲ್ಲಿ ಸಾಧಿಸಿದ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.
.
ವೇದಿಕೆಯಲ್ಲಿ ಸಂಘದ ಕೋಶಾಧಿಕಾರಿ ಡಾ| ಜುಲಿಯನ್ ಸಲ್ದಾನ ಉಪಸ್ಥಿತರಿದ್ದರು. ನಗರದ ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿಗೆ ಆಯ್ಕೆಯಾದ ಡಾ| ಸತೀಶ್ ರಾವ್ ಅವರನ್ನು ಅಭಿನಂದಿಸಲಾಯಿತು. ಸಂಘದ ಚುನಾಯಿತ ಅಧ್ಯಕ್ಷ ಡಾ| ಉಲ್ಲಾಸ್ ಶೆಟ್ಟಿ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಡಾ| ಪ್ರಕಾಶ್ ಹರಿಶ್ಚಂದ್ರ ವಂದಿಸಿದರು.
ವರದಿ : ಎಂ.ವಿ. ಮಲ್ಯ

