ಬೆಂಗಳೂರು: ಇಂಡಿಯನ್ ರೇಸಿಂಗ್ ಫೆಸ್ಟಿವಲ್ 3 ನೇ ಸುತ್ತಿನ ಸ್ಪರ್ಧೆಯು ಕೊಯಮತ್ತೂರಿನ ಕರಿಮೋಟಾರ್ ಸ್ಪೀಡ್ ವೇಯಲ್ಲಿ ಸಂಪನ್ನಗೊಂಡಿದೆ. ಚಿತ್ರನಟ ಸುದೀಪ್ ನೇತೃತ್ವದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ತೃತೀಯ ಸ್ಥಾನ ಪಡೆದು ಕಮಾಲ್ ಮಾಡಿತು. ಚಾಲಕ ರುಹಾನ್ ಅಲ್ವಾ ಅತ್ಯುತ್ತಮ ಪ್ರದರ್ಶನ ನೀಡಿದರು.
ಇಂಡಿಯನ್ ರೇಸಿಂಗ್ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್ ಶಿಪ್ ಫಾರ್ಮುಲಾ ಎಲ್.ಜಿ.ಬಿ.4 ನ ಒಳಗೊಂಡ ಜೆಕೆ ಟೈರ್ ಇಂಟರ್ ನ್ಯಾಷನಲ್ ಚಾಂಪಿಯನ್ ಶಿಪ್ ಕ್ರೀಡಾಭಿಮಾನಿಗಳನ್ನು ರೋಮಾಂಚನಗೊಳಿಸಿತು.
ಗೋವಾ ಏಸಸ್ ಜೆಎ ರೇಸಿಂಗ್ ನ ರೌಲಾಹೈಮನ್ ಎರಡನೇ ಸುತ್ತಿನಲ್ಲಿ ಜಯ ಸಾಧಿಸಿದರು.
2ನೇ ದಿನದ ಇಂಡಿಯನ್ ರೇಸಿಂಗ್ ಡ್ರೈವರ್ ಬಿ ರೇಸ್ ನಲ್ಲಿನ ಮಾಡಿದ ಸಾಧನೆ ಎಲ್ಲರ ಗಮನ ಸೆಳೆಯಿತು.
ಉತ್ತಮ ಪ್ರತಿಭೆ ಮತ್ತು ಅಂತರರಾಷ್ಟ್ರೀಯ ಅನುಭವಿ ರೇಸರ್ ಗಳು ಒಂದಾಗಿ ಪೈಪೋಟಿ ನೀಡಿದರು.
ಸ್ಪೀಡ್ ಮನ್ಸ್ ದೆಹಲಿಯ ತಂಡದ ಮಾಲೀಕ ನಟ ಅರ್ಜುನ್ ಪೂರ್ಟ್ರ್ಯಾಕ್ಸೈಡ್ ನಲ್ಲಿ ಹಾಜರಿದ್ದು ಪಂದ್ಯ ವೀಕ್ಷಿಸಿದರು. ಯುನೈಟೆಡ್ ಕಿಂಗ್ ಡಮ್ ನ ಗೋವಾ ಏಸಸ್ ಎಂ ರೇಸಿಂಗ್ ನ ರೌಲಾ ಹೈಮನ್ 26:46.480 ಸಮಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಎರಡನೇ ಗೆಲುವು ಸಾಧಿಸಿದರು.
ಟ್ರ್ಯಾಕ್ ನ 16 ತಿರುವುಗಳನ್ನು ನಿಖರತೆ ಮತ್ತು ನಿಯಂತ್ರಣದಿಂದ ನಿಭಾಯಿಸಿದ 29 ವರ್ಷದ ಹೈಮನ್ ಅತ್ಯತ್ತಮ ಪ್ರದರ್ಶನ ನೀಡಿ, ದೆಹಲಿಯ ಶಹಾನ್ ಅಲಿ ಮೊಹ್ಸಿನ್ ಅವರನ್ನು ಹಿಮ್ಮೆಟ್ಟಿಸಿದರು.
ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಮೂರನೇ ಸ್ಥಾನ ಪಡೆದುಕೊಂಡಿತು.
ಫಲಿತಾಂಶ
- ರೌಲಾ ಹೈಮನ್ (ಗೋವಾಏಸೆಸ್ ಎಂ ರೇಸಿಂಗ್) – 26:46.480
- ಶಹಾನ್ ಅಲಿಮೊಹ್ಸಿನ್ (ಸ್ಪೀಡ್ಡೀಮನ್ ದಹಲಿ) – 26:52.937
- ರುಹಾನ್ ಅಲ್ವಾ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು) – 26:57.632