ಹೆಬ್ರಿ : ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಹೆಬ್ರಿ ಕಾರ್ಕಳ ಇದರ ವತಿಯಿಂದ ಇದೇ ನವಂಬರ್ 19 ರಂದು ಹೆಬ್ರಿಯ ಚೈತನ್ಯ ಸಭಾಭವನದಲ್ಲಿ 3 ಗಂಟೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನದ ಸಂಭ್ರಮಾಚರಣೆಯ ಸಲುವಾಗಿ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ ಹೇಳಿದರು.
ಅವರು ಹೆಬ್ರಿಯ ಚೈತನ್ಯ ಸಭಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ನಿವೃತ್ತ ತಹಶೀಲ್ಧಾರ್ ಶಾಂತಾರಾಮ ಚಿಪ್ಣೂಣಕರ್, ವಕೀಲ ಹೆಬ್ರಿ ಶೇಖರ ಮಡಿವಾಳ್ ಕಾರ್ಕಳ, ಮುಖಂಡರಾದ ಮುನಿಯಾಲು ಗೋಪಿನಾಥ ಭಟ್, ಶುಭದ್ ರಾವ್ ಕಾರ್ಕಳ, ಉದ್ಯಮಿ ಪ್ರವೀಣ್ ಬಲ್ಲಾಳ್ ಹೆಬ್ರಿ, ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ, ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಕಾರ್ಯದರ್ಶಿ ದೀಪಾ ಭಂಡಾರಿ, ಕೋಶಾಧಿಕಾರಿ ಜನಾರ್ಧನ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಜೇಶ ಭಂಡಾರಿ, ಎಚ್.ವಾದಿರಾಜ ಶೆಟ್ಟಿ, ನವೀನ್ ಕೆ ಅಡ್ಯಂತಾಯ, ಸುಕುಮಾರ್ ಮುನಿಯಾಲ್, ಗೋಪಿನಾಥ ಭಟ್ ಮುನಿಯಾಲು, ಮೋಹನದಾಸ ನಾಯಕ್ ಶಿವಪುರ, ಜಗದೀಶ ಹೆಗ್ಡೆ ಕಡ್ತಲ, ಜಗನ್ನಾಥ ಕುಲಾಲ್ ಶಿವಪುರ, ಬೈಕಾಡಿ ಮಂಜುನಾಥ ರಾವ್ ಶಿವಪುರ, ಪ್ರಕಾಶ ಪೂಜಾರಿ ಮಾತಿಬೆಟ್ಟು, ಜಾನ್ ಟೆಲ್ಲಿಸ್ ಅಜೆಕಾರು ಮತ್ತು ವೇದಿಕೆಯ ಅಜೀವ ಸದಸ್ಯರು ಭಾಗವಹಿಸುವರು.
ಅಭಿನಂದನೆ : ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಉಡುಪಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿ ಚಾರ ಹೆರ್ಗಲ್ಲು ಸುಜನ್ ಶೆಟ್ಟಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿವಿಧ ಕ್ಷೇತ್ರಗಳ ಸಾಧಕರಾದ ಸಾಹಿತಿ ಬಿಪಿನ್ ಚಂದ್ರಪಾಲ್ ನಕ್ರೆ, ಚಾರ ಪ್ರದೀಪ್ ಹೆಬ್ಬಾರ್, ಡಾ. ಗೋಪಾಲ ಪೂಜಾರಿ ಶಿವಪುರ, ಹೆಬ್ರಿ ಅನಂತಪದ್ಮನಾಭ ಫ್ರೆಂಡ್ಸ್ ನ ಶೇಖರ್ ಶೇರಿಗಾರ್ ಹೆಬ್ರಿ, ಮಾವಿನಕಟ್ಟೆ ಶಂಕರ ಶೆಟ್ಟಿ ಮುನಿಯಾಲು, ವೀಣಾ ಆರ್ ಭಟ್, ಸಮಾಜ ಸೇವಕರಾದ ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್, ಸಮಾಜಸೇವಕ ಎಚ್.ಜನಾರ್ಧನ್ ಹೆಬ್ರಿ, ಮಹಾಬಲ ನಾಯ್ಕ್ ಬೇಳಂಜೆ, ಕ್ರೀಡಾ ಸಾಧಕ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ, ಶಿಕ್ಷಕ ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ ಸಹಿತ ಹಲವರಿಗೆ ಅಭಿನಂದನೆ ನಡೆಯಲಿದೆ ಎಂದು ನೀರೆ ಕೃಷ್ಣ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಹೆಬ್ರಿ ಕಾರ್ಕಳದ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಜೇಶ ಭಂಡಾರಿ, ಎಚ್.ವಾದಿರಾಜ ಶೆಟ್ಟಿ, ನವೀನ್ ಕೆ ಅಡ್ಯಂತಾಯ, ಸುಕುಮಾರ್ ಮುನಿಯಾಲ್, ಮೋಹನದಾಸ ನಾಯಕ್ ಶಿವಪುರ, ಜಗನ್ನಾಥ ಕುಲಾಲ್ ಶಿವಪುರ, ಭೂನ್ಯಾಯ ಮಂಡಳಿ ಸದಸ್ಯ ರಾಘವೇಂದ್ರ ನಾಯ್ಕ್ ಇಂದಿರಾನಗರ ಉಪಸ್ಥಿತರಿದ್ದರು.
…….
250 ಕ್ಕೂ ಹೆಚ್ಚು ಅಕ್ರಮಸಕ್ರಮ ಅರ್ಜಿಗಳು ವಿಲೇವಾರಿಗೆ ಬಾಕಿ : ಅರಣ್ಯ ಇಲಾಖೆಯ ಸಮಸ್ಯೆ.
ಹೆಬ್ರಿ ತಾಲ್ಲೂಕಿನ ಹೆಬ್ರಿ ಮತ್ತು ನಾಡ್ಪಾಲು ಗ್ರಾಮದ ಜಂಟಿ ಸರ್ವೆಗೆ ತಹಶೀಲ್ಧಾರ್ ಮತ್ತು ಅರಣ್ಯ ಇಲಾಖೆಗೆ ಮನವಿ.
ಹೆಬ್ರಿ : ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಹೆಬ್ರಿ ಕಾರ್ಕಳ ಇದರ ಸಾಮಾಜಿಕ ಹೊಣೆಗಾರಿಕೆ ಹಿನ್ನಲೆಯಲ್ಲಿ ಹೆಬ್ರಿ ತಾಲ್ಲೂಕಿನ ಹೆಬ್ರಿ ಮತ್ತು ನಾಡ್ಪಾಲು ಗ್ರಾಮದ ಅಕ್ರಮ ಸಾಗುವಳಿದಾರರಿಗೆ ತಮ್ಮ ಜಮೀನುಗಳ ಪಟ್ಟಾ ಹಕ್ಕುಪತ್ರ ಪಡೆಯಲು ಕಾನೂನು ಸಮಸ್ಯೆಯಾಗಿದ್ದು ಹೆಬ್ರಿ ಮತ್ತು ನಾಡ್ಪಾಲು ಗ್ರಾಮದ ಜಂಟಿ ಸರ್ವೆಯನ್ನು ನಡೆಸಿ ಹಕ್ಕುಪತ್ರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು ಇದೇ ನವಂಬರ್ 19 ರಂದು ಹೆಬ್ರಿ ತಹಶೀಲ್ಧಾರ್ ಮತ್ತು ಅರಣ್ಯ ಇಲಾಖೆಗೆ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸಲಾಗುತ್ತದೆ ಎಂದು ಎಂದು ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ ತಿಳಿಸಿದರು.
ನಾಡ್ಪಾಲು ಗ್ರಾಮದಲ್ಲಿ 150 ಮತ್ತು ಹೆಬ್ರಿ ಗ್ರಾಮದ 100 ಕ್ಕಿಂತ ಹೆಚ್ಚಿನ ಅಕ್ರಮಸಕ್ರಮದಲ್ಲಿ ಸಲ್ಲಿಸಿದ ಅರ್ಜಿ ನಮೂನೆ 50,53 ಮತ್ತು 57ರ ಫಲಾನುಭವಿಗಳಿಗೆ ಅರಣ್ಯಮತ್ತು ಕಂದಾಯ ಇಲಾಖೆಯ ಭೂಮಿಯನ್ನು ಜಂಟಿ ಸರ್ವೆ ನಡೆಸಿ ಪಟ್ಟಾ ಪತ್ರವನ್ನು ದೊರಕುವಂತೆ ಆದೇಶ ನೀಡುವಂತೆ ನೀರೆ ಕೃಷ್ಣ ಶೆಟ್ಟಿ ಮನವಿ ಮಾಡಿದ್ದಾರೆ.
ಪರಭಾದಿತ ಅರಣ್ಯ ಪ್ರದೇಶವಿದ್ದಲ್ಲಿ, ಅದಕ್ಕೆ ಹೊಂದಿಕೊಂಡಿರುವ ಸರ್ವೆ ನಂಬ್ರಗಳಲ್ಲಿ ಗೊಂದಲಗಳಿದ್ದರೆ ಕಂದಾಯ ಇಲಾಖೆಯಿಂದ ಪ್ರಸ್ತಾವನೆಯನ್ನು ನಿಯಮನುಸಾರ ಮುಂದಿನ ಕ್ರಮಕ್ಕಾಗಿ ಅರಣ್ಯ ಇಲಾಖೆಗೆ ಕಳುಹಿಸುವಂತೆ ರಾಜ್ಯದ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಈಗಾಗಲೇ ನಿರ್ದೇಶನ ನೀಡಿದ್ದಾರೆ ಎಂದು ನೀರೆ ಕೃಷ್ಣ ಶೆಟ್ಟಿಯವರು ತಿಳಿಸಿದರು.
ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮದ ಸರ್ವೆ ನಂಬ್ರ 126ರಲ್ಲಿ 28205 ಎಕರೆ, ಹೆಬ್ರಿ ಗ್ರಾಮದ ಸರ್ವೆ ನಂಬ್ರ 210ರಲ್ಲಿ 2238 ಎಕರೆ ಸೇರಿ ಒಟ್ಟು 30343 ಎಕರೆ ವಿಸ್ತೀರ್ಣವಿದೆ. ಆದರೆ ಹೆಬ್ರಿ ವಲಯದ ಅರಣ್ಯ ದಾಖಲೆಗಳ ಪ್ರಕಾರ 26653 ಎಕರೆ ಮಾತ್ರ ಅರಣ್ಯ ಪ್ರದೇಶವಾಗಿದ್ದು ಉಳಿಕೆಯ 1550 ಎಕರೆಗೂ ಹೆಚ್ಚಿನ ಕಂದಾಯ ಅನಾಧೀನ ಭೂಮಿಗಳು 2 ಸರ್ವೆ ನಂಬರ್‌ಗಳಲ್ಲಿ ಅಡಕವಾಗಿದೆ.
ಹೆಬ್ರಿ ತಾಲ್ಲೂಕಿನ ಹೆಬ್ರಿ ಮತ್ತು ನಾಡ್ಪಾಲು ಗ್ರಾಮದ ಸರ್ವೆ ನಂಬರ್ ಗಳ ಜಮೀನುಗಳನ್ನು ಜಂಟಿ ಸರ್ವೆ ನಡೆಸಿದರೆ ಅರಣ್ಯ ಇಲಾಖೆಯ ತಾಂತ್ರಿಕ ಸಮಸ್ಯೆಗಳಿಂದ 50-60 ವರ್ಷಗಳಿಂದ ಸಾಗುವಾಳಿ ಮಾಡಿಕೊಂಡು ತಮ್ಮ ಜಾಗದ ಹಕ್ಕುಪತ್ರಕ್ಕಾಗಿ ಎದುರು ನೋಡುತ್ತಿರುವ ಮನೆಮಂದಿಗೆ ನ್ಯಾಯ ದೊರೆಯುವ ಮೂಲಕ ಬಡ ಕೃಷಿಕರಿಗೆ ಶೀಘ್ರವಾಗಿ ಅಕ್ರಮಸಕ್ರಮ ಕಾಯ್ದೆಯಂತೆ ಪಟ್ಟಾ ಪತ್ರ ನೀಡಲು ಅವಕಾಶವಿದೆ. ಕೂಡಲೇ ಕ್ರಮ ಕೈಗೊಳ್ಳುವಂತೆ ನೀರೆ ಕೃಷ್ಣ ಶೆಟ್ಟಿಯವರು ಒತ್ತಾಯಿಸಿದ್ದಾರೆ.

