ನೆಕ್ಸಸ್ ಶಾಂತಿನಿಕೇತನ್ ಮತ್ತು ನೆಕ್ಸಸ್ ವೈಟ್ ಫೀಲ್ಡ್, ಬೆಂಗಳೂರುಗಳಲ್ಲಿ ಸ್ಟೇಷನ್ ಗಳ ಉದ್ಘಾಟನೆ, ಪ್ರಮುಖ ಭಾರತೀ ನಗರಗಳಲ್ಲಿ ವಿಸ್ತರಣೆ
ಬೆಂಗಳೂರು ಭಾರತದ ಮುಂಚೂಣಿಯ ಬ್ಯಾಟರಿ-ಸ್ವಾಪಿಂಗ್ ಪರಿಹಾರಗಳ ಪೂರೈಕೆದಾರ ಇಂಡೊಫಾಸ್ಟ್ ಎನರ್ಜಿಯು ಭಾರತದ ಮೊದಲ ರೀಟೇಲ್ ಆರ್.ಇ.ಐ.ಟಿ. ನೆಕ್ಸಸ್ ಸೆಲೆಕ್ಟ್ ಮಾಲ್ಸ್ ಜೊತೆಯಲ್ಲಿ ಸಹಯೋ ಹೊಂದಿದ್ದು ಶಾಪಿಂಗ್ ಮಾಲ್ ಗಳ ಒಳಗಡೆ ಬ್ಯಾಟರಿ ಸ್ವಾಪಿಂಗ್ ಪರಿಹಾರಗಳನ್ನು ಪ್ರಾರಂಭಿಸಲಿದ್ದು ಇದು ಪ್ರತಿನಿತ್ಯದ ನಗರ ಮೂಲಸೌಕರ್ಯದೊಂದಿಗೆ ಸುಸ್ಥಿರ ಮೊಬಿಲಿಟಿಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.
ಈ ಸಹಯೋಗವು ಬೆಂಗಳೂರಿನ ನೆಕ್ಸಸ್ ಶಾಂತಿನಿಕೇತನ್ ಮತ್ತು ನೆಕ್ಸಸ್ ವೈಟ್ ಫೀಲ್ಡ್ ಗಳಲ್ಲಿ ಎರಡು ಕ್ವಿಕ್ ಇಂಟರ್ಚೇಂಜ್ ಸ್ಟೇಷನ್ಸ್ (ಕ್ಯೂಐಎಸ್) ಉದ್ಘಾಟನೆ ಮಾಡುತ್ತಿದ್ದು ನೆಕ್ಸಸ್ ಸೆಲೆಕ್ಟ್ ಮಾಲ್ ಗಳಲ್ಲಿ ಮೊದಲ ಬ್ಯಾಟರಿ ಸ್ವಾಪಿಂಗ್ ಮೂಲಸೌಕರ್ಯವಾಗಿದೆ. ಈ ಉಪಕ್ರಮವನ್ನು ಚಂಡೀಗಢ, ದೆಹಲಿ ಎನ್.ಸಿ.ಆರ್., ಹೈದರಾಬಾದ್ ಮತ್ತು ಪುಣೆಗಳಂತಹ ನಗರಗಳಲ್ಲಿ ವಿಸ್ತರಿಸಲಾಗುತ್ತದೆ.
ಬ್ಯಾಟರಿ ಸ್ವಾಪಿಂಗ್ ಅನ್ನು ಹೆಚ್ಚಿನ ಜನಸಂದಣಿ ಇರುವ ರೀಟೇಲ್ ತಾಣಗಳಲ್ಲಿ ಅಳವಡಿಸುವ ಈ ಸಹಯೋಗವು ವೇಗದ, ಹೆಚ್ಚು ಲಭ್ಯವಿರುವ ಇವಿ ಎನರ್ಜಿ ಪರಿಹಾರಗಳನ್ನು ಸಂಚರಿಸುವವರು, ಗಿಗ್ ಕೆಲಸಗಾರರು, ಡೆಲಿವರಿ ಪಾಲುದಾರರು ಮತ್ತು ಫ್ಲೀಟ್ ಆಪರೇಟರ್ ಗಳಿಗೆ ಒದಗಿಸುವ ಮೂಲಕ ಸ್ವಚ್ಛ ಮೊಬಿಲಿಟಿಯನ್ನು ಪ್ರತಿನಿತ್ಯದ ಗ್ರಾಹಕ ಪ್ರಯಾಣದಲ್ಲಿ ತಡೆರಹಿತವಾಗಿ ಅನುಷ್ಠಾನಗೊಳಿಸುತ್ತದೆ.
ಈ ಸಹಯೋಗದ ಕುರಿತು ಇಂಡೊಫಾಸ್ಟ್ ಎನರ್ಜಿಯ ಸಿಇಒ ಅನಂತ್ ಬದ್ಜಜತ್ಯ, “ನೆಕ್ಸಸ್ ಸೆಲೆಕ್ಟ್ ಮಾಲ್ಸ್ ಜೊತೆಯಲ್ಲಿ ನಮ್ಮ ಸಹಯೋಗವು ಹೇಗೆ ನಗರ ನೂಲಸೌಕರ್ಯವು ವಿದ್ಯುಚ್ಛಾಲಿತ ವಾಹನಗಳ ವೇಗವಾದ ಅಳವಡಿಕೆಗೆ ಬೆಂಬಲಿಸಬಹುದು ಎನ್ನುವುದರಲ್ಲಿ ಮಹತ್ತರ ಬದಲಾವಣೆ ತಂದಿದೆ. ನಮ್ಮ ಅತ್ಯಾಧುನಿಕ ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನ ನೇರವಾಗಿ ಹೆಚ್ಚಿನ ಜನಸಂದಣಿ ಇರುವ ರೀಟೇಲ್ ತಾಣಗಳಲ್ಲಿ ಅಳವಡಿಸುವ ಮೂಲಕ ನಾವು ಅನುಕೂಲಕರ ಅನುಭವ ನೀಡುವುದಲ್ಲದೆ ನಾವು ಎಲೆಕ್ಟ್ರಿಕ್ ಮೊಬಿಲಿಟಿಯು ಕೋಟ್ಯಂತರ ಖರೀದಿದಾರರು ಮತ್ತು ಸಂಚರಿಸುವವರಿಗೆ ಪ್ರಯತ್ನರಹಿತ ಮತ್ತು ಅವಿಭಾಜ್ಯ ಅಂಗವಾಗುವ ಇಕೊಸಿಸ್ಟಂ ಸೃಷ್ಟಿಸುತ್ತಿದ್ದೇವೆ ಮತ್ತು ಅವು ವೃದ್ಧಿಸುತ್ತಿರುವ ಕೊನೆಯ ಹಂತದ ಡೆಲಿವರಿ ಸಿಸ್ಟಗೆ ಪೂರಕವಾಗಿದೆ. ನಾವು ನೆಕ್ಸಸ್ ಸೆಲೆಕ್ಟ್ ಮಾಲ್ಸ್ ಮೊದಲ ಸ್ವಾಪಿಂಗ್ ಪಾಲುದಾರರಾಗಲು ಹೆಮ್ಮೆ ಪಡುತ್ತೇವೆ ಮತ್ತು ಅವರ ವಿಸ್ತಾರ ಜಾಲದ ಯಶಸ್ವಿ ವಿಸ್ತರಣೆಯನ್ನು ನಿರೀಕ್ಷೆ ಮಾಡುತ್ತಿದ್ದೇವೆ. ಈ ಸಹಯೋಗವು ಬ್ಯಾಟರಿ ಸ್ವಾಪಿಂಗ್ ಮಾಡಲು ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದು ಇದು ನಗರ ಸಾರಿಗೆಗೆ ಸೂಕ್ತ ಆಯ್ಕೆ ಮತ್ತು ಸುಸ್ಥಿರ ಮೊಬಿಲಿಟಿಗೆ ಭಾರತದ ಪರಿವರ್ತನೆಯನ್ನು ವಿಸ್ತರಿಸಲು ಅಗತ್ಯವಾಗಿದೆ” ಎಂದರು
ಇಂಡೊಫಾಸ್ಟ್ ಎನರ್ಜಿಯ ಆಟೊಮೇಟೆಡ್ ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನವು ಇವಿ ಬಳಕೆದಾರರಿಗೆ ಬ್ಯಾಟರಿಗಳನ್ನು ಕ್ಷಣಗಳಲ್ಲಿ ಬದಲಾಯಿಸಲು ನೆರವಾಗುತ್ತಿದ್ದು ದೀರ್ಘ ಚಾರ್ಜಿಂಗ್ ಅವಧಿ ಮತ್ತು ರೇಂಜ್ ಆತಂಕ ನಿವಾರಿಸುತ್ತವೆ. ಈ ಪರಿಹಾರವು ಹಲವು ವಾಹನ ಬಗೆಗಳನ್ನು ಸಾಮಾನ್ಯ ಬ್ಯಾಟರಿ ಪ್ಲಾಟ್ ಫಾರಂನಲ್ಲಿ ಬೆಂಬಲಿಸುತ್ತಿದ್ದು ಇದು ನಗರ ಪರಿಸರಗಳಲ್ಲಿ ಕಾರ್ಯ ನಿರ್ವಹಿಸುವ ಎಲೆಕ್ಟ್ರಿಕ್ ದ್ವಿಚ್ಕರ ವಾಹನಗಳು ಮತ್ತು ತ್ರಿಚಕ್ರ ವಾಹನಗಳಿಗೆ ಪರಿಣಾಮಕಾರಿಯಾಗಿಸಿದೆ.
ನೆಕ್ಸಸ್ ಸೆಲೆಕ್ಟ್ ಮಾಲ್ ಇ.ಎಸ್.ಜಿ. ಮತ್ತು ಬಿಸಿನೆಸ್ ಎಕ್ಸೆಲೆನ್ಸ್ ಹಿರಿಯ ವಿಪಿ, ಭಾರತದ ಮೊದಲ ರೀಟೇ್ ಆರ್.ಇ.ಐಟಿ.ಯಾಗಿ ನೆಕ್ಸಸ್ ಸೆಲೆಕ್ಟ್ ಮಾಲ್ಸ್ ಮಾಲ್ ಗಳನ್ನು ಭವಿಷ್ಯ ಸನ್ನದ್ಧ ಇಕೊಸಿಸ್ಟಂಗಳನ್ನಾಗಿ ಮರು ರೂಪಿಸುತ್ತಿದೆ. ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನ ಸ್ಟೇಷನ್ ಗಳನ್ನು ಮೊದಲ ಬಾರಿಗೆ ಪರಿಚಯಿಸುತ್ತಿರುವುದು ಸುಸ್ಥಿರತೆಯನ್ನು ಪ್ರತಿನಿತ್ಯದ ಸ್ಥಳಗಳಲ್ಲಿ ಅಳವಡಿಸುವಲ್ಲಿ ಅರ್ಥಪೂರ್ಣ ಹೆಜ್ಜೆಯಾಗಿದೆ. ಈ ಉಪಕ್ರಮವು ಕೊನೆಯ ಹಂತದ ಮೊಬಿಲಿಟಿಯನ್ನು ಬೆಂಬಲಿಸುವುದಲ್ಲದೆ ನಮ್ಮ ಮಾಲ್ ಗಳಿಗೆ ಭೇಟಿ ನೀಡುವ ಕೋಟ್ಯಂತರ ಸಂದರ್ಶಕರಿಗೆ ಹಸಿರು ಆಯ್ಕೆಗಳನ್ನು ಕಾಣುವ, ಲಭ್ಯ ಮತ್ತು ಪ್ರಾಯೋಗಿಕವಾಗಿಸುತ್ತದೆ” ಎಂದರು.
ಈ ಸಹಯೋಗವು ಇಂಡೊಫಾಸ್ಟ್ ಎನರ್ಜಿಯ ಬ್ಯಾಟರಿ-ಅಸ್-ಎ ಸರ್ವೀಸ್ (ಬಿಎಎಎಸ್) ಮಾದರಿಯಲ್ಲಿ ಮರು ದೃಢೀಕರಿಸಿದ್ದು ಇವಿ ಮೂಲಸೌಕರ್ಯವನ್ನು ಪ್ರತಿನಿತ್ಯದ ಗ್ರಾಹಕ ಟಚ್ ಪಾಯಿಂಟ್ ಗಳನ್ನು ಅಳವಡಿಸಿಕೊಂಡಿದೆ ಮತ್ತು ಮುಂದಿನ ಮೂರು ವರ್ಷಗಖಲ್ಲಿ 40+ ಭಾರತೀಯ ನಗರಗಳಿಗೆ 10,000 ಬ್ಯಾಟರಿ ಸ್ವಾಪಿಂಗ್ ಸ್ಟೇಷನ್ ಗಳನ್ನು ಅಳವಡಿಸುವ ಮಹತ್ವಾಕಾಂಕ್ಷೆ ಹೊಂದಿದ್ದು ಭಾರತದ ಪರಿವರ್ತನೆಯನ್ನು ಸುಸ್ಥಿರ ನಗರ ಮೊಬಿಲಿಟಿಯಾಗಿಸುತ್ತದೆ.
Home Uncategorized ಇಂಡೊಫಾಸ್ಟ್ ಎನರ್ಜಿ ಮತ್ತು ನೆಕ್ಸಸ್ ಸೆಲೆಕ್ಟ್ ಮಾಲ್ಸ್ ನಿಂದ ಮೊಟ್ಟಮೊದಲ ಶಾಪಿಂಗ್ ಮಾಲ್ ಗಳಲ್ಲಿ ಬ್ಯಾಟರಿ-ಸ್ವಾಪಿಂಗ್...

