ದ.ಕ.ಜಿಲ್ಲಾ ಪುತ್ತೂರು ತಾಲೂಕಿನ ಕೋಡಿಂಬಾಡಿಯ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಜುಲೈ 14 ರಂದು ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧದ ಅಗತ್ಯದ ಮಾಹಿತಿ ನೀಡಲಾಯಿತು. ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ, ಪತ್ರಿಕಾ ವರದಿಗಾರ ರಾಯಿ ರಾಜಕುಮಾರ ಮೂಡುಬಿದಿರೆಯವರು ಮಾಹಿತಿ ನೀಡಿ, ಜೀವಿಗಳಲ್ಲಿ ತಿಳುವಳಿಕೆ ಹೊಂದಿರುವ ಮನುಷ್ಯನೇ ನೀರಿನ ಸಂಗ್ರಹ, ಸಂರಕ್ಷಣೆ ಮಾಡುವ ಅಗತ್ಯ. ಎಸೆಯುವ ಪ್ಲಾಸ್ಟಿಕ್ ನಿಂದಾಗಿ ತಿನ್ನುವ ಉಪ್ಪಿನಲ್ಲಿ ಕೂಡಾ 0.07 ಶೇಕಡಾ ಪ್ಲಾಸ್ಟಿಕ್ ಅಂಶ ಅಡಗಿರುವ ಬಗ್ಗೆ ವೈಜ್ಞಾನಿಕ ಮಾಹಿತಿ ಹಂಚಿಕೊಂಡರು. ಪ್ಲಾಸ್ಟಿಕ್ ನ್ನು ಪ್ರತ್ಯೇಕವಾಗಿರಿಸಿ ಪುನರ್ಬಳಕೆಗೇ ನೀಡ ಬೇಕಾದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.
ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ಸ್ವಾಗತಿಸಿದರು. ಶಿಕ್ಷಕಿ ಪಾವನ ವಂದಿಸಿದರು.