ವರದಿ ರಾಯಿ ರಾಜ ಕುಮಾರ
ಮಂಗಳೂರಿನ ಕನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್ನಿಕಲ್ ಆಕ್ಟಿವಿಟಿ ಸೆಲ್ ಹಾಗೂ CSE, ISE, AI & ML, ECE, CSD ಮತ್ತು CSBS ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ “ಇನ್ನೋವೇಷನ್ ಶೋಕೆಸ್: ಮೇಜರ್ ಪ್ರಾಜೆಕ್ಟ್ ಎಕ್ಸಿಬಿಷನ್–2025” ಮತ್ತು “ಸಿಥೇರಿಯನ್–2025: 24-ಗಂಟೆಗಳ ಹ್ಯಾಕಥಾನ್” ಕಾರ್ಯಕ್ರಮಗಳು ನವೆಂಬರ್ 22 ಮತ್ತು 23, 2025 ರಂದು ಜರುಗಿತು.
ಉದ್ಘಾಟನಾ ಸಮಾರಂಭವು ಡಾ. ಪಿ. ದಯಾನಂದ ಪೈ – ಪಿ. ಸತೀಶ್ ಪೈ ಸಭಾಂಗಣದಲ್ಲಿ ನೆಡೆಯಿತು. ಮುಖ್ಯ ಅತಿಥಿ ಡಾ. ನಿರಂಜನ್ ಯು. ಸಿ., ಅಡ್ಜಂಕ್ಟ್ ಪ್ರೊಫೆಸರ್, MIT ಮಣಿಪಾಲ, ಅವರು ಶಿಕ್ಷಣದಲ್ಲಿನ 3Aಗಳ — Accessibility, Availability ಮತ್ತು Physical Proximity — ಅಗತ್ಯತೆಯನ್ನು ವಿವರಿಸಿದರು. ವಿದ್ಯಾರ್ಥಿಗಳು ತಂತ್ರಜ್ಞಾನ ಜ್ಞಾನದಲ್ಲಿ ಸದಾ ಮುನ್ನಡೆದು, ಉದ್ಯಮಶೀಲತೆ ಮತ್ತು ಶ್ರಮದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. . ಸುಶಾಂತ್ ಸಿಂಗ್, ಟೆಕ್ನಿಕಲ್ ಸೆಕ್ರೆಟರಿ, ಸ್ವಾಗತ ಭಾಷಣ ಮಾಡಿದರು.
ಪ್ರಾಜೆಕ್ಟ್ ಎಕ್ಸಿಬಿಷನ್‌ನಲ್ಲಿ 122 ಅಂತಿಮ ವರ್ಷದ ಪ್ರಾಜೆಕ್ಟ್‌ಗಳನ್ನು ಕೈಗಾರಿಕಾ ಪರಿಣಿತರು ಮೌಲ್ಯಮಾಪನ ಮಾಡಿದರು. Robosoft, Allegion, Stellium, Novigo Solutions, Durgasoft ಸೇರಿದಂತೆ ಅನೇಕ ಪ್ರಮುಖ ಸಂಸ್ಥೆಗಳ ಎಂಜಿನಿಯರ್‌ಗಳು ಹಾಗೂ ವಿಶ್ಲೇಷಕರು ಮೌಲ್ಯಮಾಪಕರಾಗಿ ಭಾಗವಹಿಸಿದ್ದರು.
ಹ್ಯಾಕಥಾನ್ ಭಾಗವಾಗಿ IoT, Cyber Security, Agentic AI ಮತ್ತು Full Stack Development ಎಂಬ ನಾಲ್ಕು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಅಧಿವೇಶನಗಳನ್ನು ಏರ್ಪಡಿಸಲಾಗಿತ್ತು. CodeZyng, Kakunje Software, HACFY, Kyndryl Solutions ಮತ್ತು Krishitantra ಸಂಸ್ಥೆಗಳ ತಜ್ಞರು ತರಬೇತಿ ಹಾಗೂ ಮಾರ್ಗದರ್ಶನ ನೀಡಿದರು. ಒಟ್ಟು 237 ವಿದ್ಯಾರ್ಥಿಗಳು ಹ್ಯಾಕಥಾನ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಹ್ಯಾಕಥಾನ್ ಸಮಾರೋಪ ಸಮಾರಂಭವು ನವೆಂಬರ್ 23 ರಂದು ಜರುಗಿತು. ಡಾ. ಉದಯಕುಮಾರ ಕೆ. ಶೆಣೈ, ಡೀನ್, ಪ್ರಾಚಾರ್ಯರು Dr. ನಾಗೇಶ್ ಹೆಚ್. ಆರ್. ವೇದಿಕೆಯಲ್ಲಿದ್ದರು.
ಕಾರ್ಯಕ್ರಮ ಸಂಯೋಜನೆ ಡಾ. ರಕ್ಷಿತ್ ಎಂ. ಡಿ. ಮತ್ತು ಡಾ. ಗುರುದೇವ ಎಸ್. ಹಿರೇಮಠ. ಒಟ್ಟಾರೆ, ಸುಮಾರು 700 ವಿದ್ಯಾರ್ಥಿಗಳು ಭಾಗವಹಿಸಿದ್ದರು.
.

