ಮಲ್ಲಿಕಟ್ಟೆ : ಲಿಯೋ ಜಿಲ್ಲಾ 317D ವತಿಯಿಂದ “ಪ್ರೇರಣಾ – ಲಿಯೋ PST ಸ್ಕೂಲಿಂಗ್ 2025-26” ಕಾರ್ಯಕ್ರಮವನ್ನು ಭಾನುವಾರ ಲಯನ್ಸ್ ಸೇವಾ ಮಂದಿರ, ಮಲ್ಲಿಕಟ್ಟೆ ಇಲ್ಲಿ ನಡೆಸಲಾಯಿತು. ಜಿಲ್ಲಾ ಲಿಯೋ ಅಧ್ಯಕ್ಷೆ ಲಿಯೋ ಲಯನ್ ಶ್ರೀನಿಧಿ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, “ಧ್ವನಿ” ಎಂಬ ವಾರ್ಷಿಕ ಥೀಮ್‌ನಡಿ ಲಿಯೋಗಳು ತಂಡಭಾವನೆ, ಶಿಸ್ತು ಮತ್ತು ಸೇವಾಭಾವನೆಯೊಂದಿಗೆ ಸಮಾಜ ಬದಲಾವಣೆಯ ನಿಜವಾದ ನಾಯಕರಾಗಬೇಕೆಂದು ಪ್ರೇರಣೆ ನೀಡಿದರು.
ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್ ಲಯನ್ ಕುಡ್ಪಿ ಅರವಿಂದ ಶೆಣೈ ಉದ್ಘಾಟಿಸಿದರು. ಅವರು ತಮ್ಮ ಹಾರೈಕೆಯಲ್ಲಿ “ಸಮಯಪಾಲನೆ, ಶಿಸ್ತು ಮತ್ತು ಸೇವಾಭಾವನೆ – ಈ ಮೂರು ಗುಣಗಳು ಪ್ರತಿಯೊಬ್ಬ ಲಿಯೋ ನ ಭವಿಷ್ಯದ ಶ್ರೇಷ್ಠ ನಾಯಕನಾಗಿಸುತ್ತವೆ” ಎಂದು ಹೇಳಿದರು. ಈ ಸಂದೇಶವು ಕಾರ್ಯಕ್ರಮದ ಪ್ರಮುಖ ಭಾಗವಾಗಿ ಲಿಯೋಗಳಲ್ಲಿ ಸೇವಾಭಾವನೆಯನ್ನು ಮತ್ತಷ್ಟು ಉತ್ತೇಜಿಸಿತು.
ಕಾರ್ಯಕ್ರಮದ ಗಣ್ಯ ಅತಿಥಿಗಳಾದ ಭಾರತಿ (IPDG), ಮೆಲ್ವಿನ್ ಡಿ’ಸೋಜಾ (PDG), ರೊನಾಲ್ಡ್ ಗೊಮ್ಸ್ (PDG), ಗೋವರ್ಧನ್ ಶೆಟ್ಟಿ (1st VDG), ವೆಂಕಟೇಶ್ ಹೆಬ್ಬಾರ್ (ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ಪೈರ್), ಪಿ.ವಿ. ಅನಿಲ್ ಕುಮಾರ್ (ಲಯನ್ಸ್ ಕ್ಲಬ್ ಮಂಗಳೂರು ಹೈಲ್ಯಾಂಡ್), ಯಶವಂತ್ ಪೂಜಾರಿ (ಲಯನ್ಸ್ ಕ್ಲಬ್ ಮಂಗಳಾದೇವಿ), ರಾಜೇಶ್ (ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ) ಮತ್ತು ಕವನ್ ರಾಜ್ ಕುಬೇವೂರು (PDLP) ಲಿಯೋಗಳಿಗೆ ಹೃದಯಸ್ಪರ್ಶಿ ಶುಭಾಶಯಗಳನ್ನು ಹಂಚಿದರು. ಅವರು ಯುವ ಶಕ್ತಿಯ ಮಹತ್ವವನ್ನು ಸ್ಮರಿಸಿ, “ಲಿಯೋಗಳ ಉತ್ಸಾಹ ಮತ್ತು ಸೇವಾಭಾವನೆ ನಮ್ಮ ಲಯನ್ಸ್ ಕುಟುಂಬಕ್ಕೆ ಹೆಮ್ಮೆ. ಪ್ರತಿಯೊಂದು ಯೋಜನೆಯೂ ಸಮಾಜದಲ್ಲಿ ಪ್ರೇರಣೆಯ ಅಲೆ ಎಬ್ಬಿಸಲಿ” ಎಂದು ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಲಿಯೋ ತಂಡದ chairperson ರಶ್ಮಿ ಕರ್ಕೇರ( DLC ), ಸ್ವರೂಪ ಶೆಟ್ಟಿ ಮತ್ತು ಡಾ. ಡೆನಿಸ್ ರೊಡ್ರಿಗ್ಸ್ (ಸಲಹೆಗಾರರು), ಡಾ. ರಂಜಿತಾ ಶೆಟ್ಟಿ (ಮಾರ್ಗದರ್ಶಕಿ), ಪವನ್ ದೇವಾಡಿಗ (ಕಾರ್ಯದರ್ಶಿ), ಶಿಖಾ ಸುಶೀಲ್ (ಖಜಾಂಚಿ), ಸೇರಿದಂತೆ ಎಲ್ಲಾ ಜಂಟಿ ಕಾರ್ಯದರ್ಶಿಗಳು, ಖಜಾಂಚಿಗಳು ಹಾಗೂ ವಿವಿಧ ವಿಭಾಗದ ಸಂಯೋಜಕರು ಭಾಗವಹಿಸಿದರು. ಎಲ್ಲರೂ ಸೇರಿ ಈ ವರ್ಷದ ಲಿಯೋ ಚಟುವಟಿಕೆಗಳನ್ನು ಮತ್ತಷ್ಟು ಸಬಲಗೊಳಿಸುವ ಭರವಸೆ ನೀಡಿದರು.

“ಪ್ರೇರಣಾ – Where Passion Meets Purpose” ಎಂಬ ಘೋಷವಾಕ್ಯದಡಿ ನಡೆದ ಈ PST ಸ್ಕೂಲಿಂಗ್ , ಸಹಕಾರ, ನಾಯಕತ್ವ ಮತ್ತು ಸೇವಾಭಾವನೆ ಎಂಬ ಸಂದೇಶವನ್ನು ಹರಡುತ್ತಾ, ಲಿಯೋ ಜಿಲ್ಲಾ 317D ಯ ಹೊಸ ಅಧ್ಯಾಯಕ್ಕೆ ಪ್ರೇರಕ ಚಾಲನೆ ನೀಡಿತು. ಲಿಯೋಗಳು ಹೃದಯದಲ್ಲಿ ಸೇವಾಭಾವನೆ ಇಟ್ಟುಕೊಂಡು ತಂಡಭಾವನೆಯೊಂದಿಗೆ ಮುಂದುವರಿದರೆ, ಅವರು ಭವಿಷ್ಯದ ಸಮಾಜ ಬದಲಾವಣೆಯ ನಿಜವಾದ ನಾಯಕರಾಗುತ್ತಾರೆ ಎಂಬ ಸಂದೇಶವನ್ನು ಈ ಕಾರ್ಯಕ್ರಮವು ಯಶಸ್ವಿಯಾಗಿ ಸಾರಿತು.