ವರದಿ ರಾಯಿ ರಾಜ ಕುಮಾರ
ಬೆಳುವಾಯಿ ಕೆಸರಗದ್ದೆಯಲ್ಲಿ ಕಾರ್ಯಾಚರಿಸುತ್ತಿರುವ ಸ್ಪೂರ್ತಿ ಬಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರದಿಂದ ನಡೆಸಲ್ಪಡುವ ಸ್ಪೂರ್ತಿ ಕಲಾ ಸಂಭ್ರಮ 2025 ಅನಿವಾರ್ಯ ಕಾರಣಗಳಿಂದ ಜನವರಿ ಮೂರನೇ ತಾರೀಕಿನಂದು ನಡೆಯಲಿದೆ. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಧನಂಜಯ ರನ್ನು ಸ್ಪೂರ್ತಿರತ್ನ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಗುವುದು. ಅಂದು ಇಡೀ ದಿನ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳು. ಈ ನಡುವೆ ಆಹಾರ ಮೇಳ , ಹಳ್ಳಿ ಸೊಗಡು ಸಂಭ್ರಮ, ಉಡುಪಿ ಕೈಮಗ್ಗ ಸೀರೆಗಳ ಸಂಭ್ರಮ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಹಾಗೂ ಸಾಂಸ್ಕೃತಿಕ ಸಂಭ್ರಮಗಳ ಮೂಲಕ ಜನಮನವನ್ನು ರಂಜಿಸಲಿದೆ ಎಂದು ವ್ಯವಸ್ಥಾಪಕ ಪ್ರಕಾಶ್ ಜೆ ಶೆಟ್ಟಿಗಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.
.

