ತುಳುನಾಡು : ಜಗತ್ತಿನಲ್ಲಿ ಅದೆಂಥ ಮೂರ್ಖ, ಅವಿವೇಕಿ ವ್ಯಕ್ತಿಗಳು ಇದ್ದಾರೋ ಆ ಜಗದೊಡೆಯನೇ ಬಲ್ಲ ಅಥವಾ ಆತನಿಗೂ ನಿಲುಕಲಸಾಧ್ಯ
ಈ ಘಟನೆ ಆಶ್ಚರ್ಯವಾದರೂ ಸತ್ಯ, ಸಾಮಾನ್ಯನಾಗಿ ಅಡಿಕೆ ಮರ ಏರುವುದನ್ನು ಕಂಡಿದ್ದೇವೆ, ಸಾರ್ವಜನಿಕರು ವಿದ್ಯುತ್ ಕಂಬ ಏರುವುದನ್ನು ಕಾಣಲು ಸಾಧ್ಯವಿಲ್ಲ ಆದರೆ ಇಲ್ಲೊಬ್ಬ ಭೂಪ ಕಂಗು ಏರುವ ಬದಲು ವಿದ್ಯುತ್ ಕಂಬವೇರಿದ್ದಾನೆ
ಈ ಮೇಲೆ ಕಾಣಿಸುವ ಚಿತ್ರ ತುಳುನಾಡು ವಾರ್ತೆ ಪತ್ರಿಕೆಗೆ ದೊರಕಿದ್ದು ಈ ಬಗ್ಗೆ ಈತನ ವಿವರ ಹುಡುಕಿದಾಗ ಈತ ಮೂಡುಬಿದಿರೆ ತಾಲೂಕು, ಶಿರ್ತಾಡಿ ಪಂಚಾಯತ್ ವ್ಯಾಪ್ತಿಯ ಮೂಡುಕೋಣಾಜೆ ಗ್ರಾಮ ವ್ಯಾಪ್ತಿಯ ಕುಂಟಲ ಪಾಡಿ ನಿವಾಸಿ ಸದಾನಂದ ಎಂದು ತಿಳಿದುಬಂದಿದೆ ಈತ ಎಲ್ಲಿ ಯಾವಾಗ ವಿದ್ಯುತ್ ಕಂಬ ಏರಿದ್ದಾನೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ
ತುಳುನಾಡು ವಾರ್ತೆ ಪತ್ರಿಕೆಯ ಸಾರ್ವಜನಿಕ ವಿನಂತಿ ಏನೆಂದರೆ ಯಾವುದೇ ಕಾರಣಕ್ಕೂ ವಿದ್ಯುತ್ ಕಂಬ ಏರುವುದು ಅಪರಾಧ ಮತ್ತು ಅಪಾಯ, ಯಾರೂ ಕೂಡ ಯಾವುದೇ ಸಂದರ್ಭದಲ್ಲಿಯೂ ವಿದ್ಯುತ್ ಕಂಬ ಏರುವ ಸಾಹಸಕ್ಕೆ ಹೊರಡದಿರಿ ಏಕೆಂದರೆ ಇದು ನಿಮ್ಮ ಜೀವಕ್ಕೆ ಮುಳುವಾದಿತು ನಿಮ್ಮ ಸುತ್ತ ಯಾವುದೇ ವಿದ್ಯುತ್ ಸಮಸ್ಯೆ ಇದ್ದರೆ ದಯವಿಟ್ಟು ವಿದ್ಯುತ್ ಇಲಾಖೆಯ ಗಮನಕ್ಕೆ ತನ್ನಿ, ಇಲಾಖೆಯ ಸಿಬ್ಬಂದಿಗಳ ಮುಖಾಂತರ ಸರಿಪಡಿಸಿ, ಅದು ಬಿಟ್ಟು ನೀವೇ ರಿಪೇರಿಗೆ ಹೊರಟರೆ ವಿದ್ಯುತ್ ತಂತಿಯಲ್ಲಿ ಹರಿಯುವ ಪ್ರಖರ ವಿದ್ಯುತ್ ನಿಮ್ಮ ಜೀವಕ್ಕೆ ಅಪಾಯ ತಂದಿತು ಜೋಕೆ ಕಂಗು ಏರುವ ಬದಲು ವಿದ್ಯುತ್ ಕಂಬ ಏರಬೇಡಿ, ನಿಮ್ಮನ್ನೇ ನಂಬಿದ ನಿಮ್ಮ ಕುಟುಂಬಕ್ಕೆ ಆಪತ್ತು ತಂದೊಡ್ಡ ಬೇಡಿ ಇದು ಪತ್ರಿಕೆಯ ಕಳಕಳಿಯ ಪ್ರಾರ್ಥನೆ

