ಸೆ.12ರಂದು ಭಾರತೀಯ ಜ್ಞಾನ ಪರಂಪರಾ ಅಂತಾರಾಷ್ಟ್ರೀಯ ಸಮ್ಮೇಳನ; ಪರ್ಯಾಯ ಪುತ್ತಿಗೆ ಮಠಾಧೀಶರಿಂದ ಮಾಹಿತಿ

0
153

ಉಡುಪಿ: ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥೆ (ಐಕೆಎಸ್​) ವಿಭಾಗ ಮತ್ತು ಕರ್ನಾಟಕ ಸಂಸತ ವಿಶ್ವವಿದ್ಯಾಲಯ ಮತ್ತು ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಜ್ಞಾನ ಮಂಡಲೋತ್ಸವ ನಿಮಿತ್ತ ರಾಜಾಂಗಣದಲ್ಲಿ ಸೆ. 12ರಂದು ಬೆಳಿಗ್ಗೆ 9.30ಕ್ಕೆ ಭಾರತೀಯ ಜ್ಞಾನ ಪರಂಪರೆಯ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತಿರ್ಥಶ್ರೀಪಾದರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪುತ್ತಿಗೆ ಮಠದ ಆಸ್ಥಾನ ವಿದ್ವಾಂಸ, ಅಮೇರಿಕಾದ ನಿವಾಸಿ ಕೇಶವ್​ ರಾವ್​ ತಾಡಿಪತ್ರಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ವಿನಯ್​ ಹೆಗ್ಡೆ ವಹಿಸಲಿದ್ದಾರೆ. ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್​. ಮೂಡಿತ್ತಾಯ, ಕರ್ನಾಟಕ ಸಂಸತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಹಲ್ಯಾ ಎಸ್​., ಡಿಆರ್​ಡಿಒ ವಿಜ್ಞಾನಿ ಪದ್ಮಶ್ರೀ ಡಾ. ಪ್ರಹ್ಲಾದ್​ ರಾಮ್​ ರಾವ್​, ಹಿರಿಯ ಸಂಶೋಧಕ ವಿದ್ವಾಂಸ ಪ್ರೊ. ಶ್ರೀಪತಿ ತಂತ್ರಿ, ಪ್ರಸಿದ್ಧ ವಿದ್ವಾಂಸ ಗೋಪೀನಾಥಾಚಾರ್​ ಗಲಗಲಿ, ಸಂಶೋಧಕ ಡಾ.ಸುದರ್ಶನ್​ ಮೂರ್ತಿ, ಸಂಶೋಧಕ ವಿದ್ವಾಂಸ ಡಾ.ಲಕ್ಷಿ$್ಮ ಮೂರ್ತಿ, ಡಾ. ಗುರುಪ್ರಸಾದ್​, ದುಬೈನ ಲೆಕ್ಕ ಪರಿಶೋಧಕ ಮುರಳೀಧರ ತಂತ್ರಿ, ನಿಟ್ಟೆ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಡಾ.ಗೋಪಾಲ್​ ಮೊಗೆರಾಯ, ನಿಟ್ಟೆ ಇಂಜನಿಯರಿಂಗ್​ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ನಿರಂಜನ್​ ಎನ್​. ಚಿಪ್ಳೂನ್ಕರ್​ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಮಾರೋಪ ಕಾರ್ಯಕ್ರಮ
ಸಾಯಂಕಾಲ 4.30ಕ್ಕೆ ಪರ್ಯಾಯ ಉಭಯಶ್ರೀಪಾದರ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕ ಸಂಸತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಹಲ್ಯಾ ಎಸ್​. ಅಧ್ಯಕ್ಷತೆ ವಹಿಸಲಿದ್ದಾರೆ. ಆಯುರ್ವೇದ ಸಂಶೋಧಕ ವಿದ್ವಾಂಸ ಡಾ. ತನ್ಮಯ ಗೋಸ್ವಾಮಿ, ಅಮೇರಿಕಾದ ಶ್ರೀಕೃಷ್ಣರಾಜ್​ ಆರ್​, ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ. ಶ್ರೀರಮಣ ಐತಾಳ್​, ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ಪ್ರಾಚಾರ್ಯ ಡಾ. ದೇವಿದಾಸ್​ ಎಸ್​. ನಾಯಕ್​ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಈ ಸಮ್ಮೇಳನದಲ್ಲಿ ದೇಶ-&ವಿದೇಶಗಳಿಂದ 50ಕ್ಕೂ ಹೆಚ್ಚಿನ ಪ್ರಬಂಧಗಳು ಮಂಡನೆಯಾಗಲಿವೆ. ಆನ್​ ಲೈನ್​ ಮೂಲಕ 50ಕ್ಕೂ ಹೆಚ್ಚಿನ ವಿದ್ವಾಂಸರು ಪ್ರಬಂಧವನ್ನು ಮಂಡಿಸುತ್ತಾರೆ. ಆಯ್ದ ಪ್ರಬಂಧಗಳನ್ನೊಳಗೊಂಡ ಜ್ಞಾನಭಾರತಮ್​ ಪುಸ್ತಕ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ವಾದಿರಾಜ ಸಂಶೋಧನಾ ಕೇಂದ್ರದ ನಿರ್ದೇಶಕ ಗೋಪಾಲಾಚಾರ್ಯ, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಎಂ. ಪ್ರಸನ್ನ ಆಚಾರ್ಯ, ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥೆ ನಿರ್ದೇಶಕ ಡಾ.ಸುಧೀರ್​ ರಾಜ್​ ಕೆ., ಎಂಬಿಎ ವಿಭಾಗದ ನಿರ್ದೇಶಕ ಸುಧೀರ್​ ಎಂ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here