ಮಹಿಳಾ ಸಮಾಜ, ನಿಟ್ಟೆ ಗ್ರಾಮ ಪಂಚಾಯತ್,ದೀಪ ಸಂಜೀವಿನಿ ಒಕ್ಕೂಟ, ಸಮುದಾಯ ಆರೋಗ್ಯ ಕೇಂದ್ರ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ತ್ರೀ ಶಕ್ತಿ ಗುಂಪುಗಳು ಇವುಗಳ ಜಂಟಿ ಆಶ್ರಯದಲ್ಲಿ ದಿನಾಂಕ 10-3-2026 ರಂದು ಪಂಚಾಯತ್ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಯಿತು.
ಮಹಿಳಾ ಸಮಾಜ ಹಾಗೂ ದೀಪ ಸಂಜೀವಿನಿ ಒಕ್ಕೂಟದ ಅಧ್ಯಕ್ಷ ರಾದ ಶ್ರೀಲತಾ ಶರ್ಮಾ ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು. ಶಶಿಕಲಾ ,ರಾಜ್ಯೋತ್ಸವ ಪ್ರಶಸ್ತಿ ವಿಜೇತೆ, ನಿವೃತ್ತ ಶಿಕ್ಷಕಿ ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು.
ನಿಟ್ಟೆ ಪಂಚಾಯತ್ ನ ಆಡಳಿತಾಧಿಕಾರಿ ಶ್ರೀ ಶ್ರೀನಿವಾಸ ರಾವ್ ಮಾತನಾಡಿ ಮಹಿಳೆಯರು ಸ್ವ ಉದ್ಯೋಗದ ಜೊತೆಗೆ ಕೌಶಲ್ಯಾಭಿವೃದ್ಧಿ ಕಡೆಗೆ ಗಮನ ಹರಿಸಬೇಕು ಎಂದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಮಹಿಳಾ ದೌರ್ಜನ್ಯ ದ ಬಗ್ಗೆ ಮಾತನಾಡಿದರು.
ಸಂಗಮ ಸಂಜೀವಿನಿ ಒಕ್ಕೂಟ ಕಾರ್ಕಳದ ಅಧ್ಯಕ್ಷೆ ರೇವತಿ ಮಾತನಾಡಿ ಮಾತೃ ಮತ್ತು ಮಾತೃಭೂಮಿಯ ಋಣವನ್ನು ನಾವು ತೀರಿಸಬೇಕಾಗಿದೆ ಎಂದರು. ಮಹಿಳೆಯರ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಬಗ್ಗೆ ಆರೋಗ್ಯ ಮಾಹಿತಿಯನ್ನು ಶೈಲಜಾ ಭಟ್ ಕೊಟ್ಟರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ವಾರ್ತಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಟ್ಟೆ ವಲಯದ ಮೇಲ್ವಿಚಾರಕಿ ಶಾಂಭವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಸಮಾಜದ ಕಾರ್ಯದರ್ಶಿ ಪ್ರಮೀಳಾ ಹಾಗೂ ದೀಪ ಸಂಜೀವಿನಿಯಯ ಕಾರ್ಯದರ್ಶಿ ಜ್ಯೋತಿಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಮಾ ನಿರೂಪಣೆ ಮಾಡಿದ ಈ ಕಾರ್ಯಕ್ರಮದಲ್ಲಿ ರಶ್ಮಿ ಶೆಟ್ಟಿ ಧನ್ಯವಾದ ಗೈದರು .

