ಮುಂದಿನ ಭವಿಷ್ಯಕ್ಕಾಗಿ ಹೂಡಿಕೆ ಬಹು ಮುಖ್ಯ : ಪ್ರೊ.ಈಶ್ವರ ಪಿ.

0
100

ಪ್ರಸ್ತುತ ದಿನಗಳಲ್ಲಿ ಗಳಿಸಿದ ಆದಾಯದಲ್ಲಿ ಮಿತವಾಗಿ ವ್ಯಯಿಸಿ ಮುಂದಿನ ಜೀವನಕ್ಕಾಗಿ ಹೂಡಿಕೆ ಯನ್ನು ಮಾಡುವುದು ಬಹುಮುಖ್ಯ ಎಂದು ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಈಶ್ವರ ಪಿ. ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗವು ಆಯೋಜಿಸಿದ ಫಿನ್ಕ್ವೆಸ್ಟ್ ಇವೆಂಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇವತ್ತು ಕಡಿಮೆ ವೆಚ್ಚದಲ್ಲಿ ದೈನಂದಿನ ಜೀವನವನ್ನು ನಿರ್ವಹಿಸುವ ಕಲೆಯನ್ನು ಹೆಚ್ಚಿಸಿಕೊಳ್ಳಬೇಕು. ಹಾಗೂ ವ್ಯಕ್ತಿಯ ನಡತೆ ಮತ್ತು ಮನೋಭಾವವು ಆದಾಯ, ಖರ್ಚು-ವೆಚ್ಚ ಮತ್ತು ಹೂಡಿಕೆಯನ್ನು ನಿರ್ಧರಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಹಣಕಾಸಿನ ನಿರ್ವಹಣೆಯನ್ನು ಶಿಸ್ತು ಬದ್ಧವಾಗಿ ಯೋಚಿಸಿಕೊಳ್ಳಬೇಕು. ಹಾಗೂ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅನಿಶ್ಚಿತತೆಗಳನ್ನು ಎದುರಿಸಲು ಹೂಡಿಕೆಯು ಅತ್ಯಮೂಲ್ಯವಾಗಿದೆ ಎಂದು ಹೇಳಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಪ್ರೊ. ವೇದವ ಪಿ, ಪ್ರೊ.ಪರಮೇಶ್ವರ ಮತ್ತು ವಾಣಿಜ್ಯ ಸಂಘದ ಸ್ಟಾಫ್ ಕೊ-ಆರ್ಡಿನೇಟರ್ ಗುರುರಾಜ್ ಪಿ. ಮತ್ತು ವೈಶಾಲಿ ಕೆ. ಉಪಸ್ಥಿತರಿದ್ದರು.
ಫಿನ್ಕ್ವೆಸ್ಟ್ ಇವೆಂಟ್ಫೈನ್ ವಿಜೇತರಾದ ಪ್ರಥಮ ಮತ್ತು ದ್ವಿತೀಯ ತಂಡಗಳಿಗೆ ಟ್ರೋಫಿ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.

ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ರಶ್ಮಿತಾ ಆರ್. ಕೋಟ್ಯಾನ್, ಸಿ. ಲಹರಿ ಮತ್ತು ರಮ್ಯ ರಾಮಚಂದ್ರ ನಾಯಕ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿದ್ಯಾರ್ಥಿಗಳಾದ ಕವಿತಾ ರೈ ಕೆ, ಧನ್ಯಶ್ರೀ ಬಿ. ಮತ್ತು ಕವಿತಾ ಎನ್. ಪ್ರಾರ್ಥಿಸಿದರೆ, ಧನ್ಯಶ್ರೀ ಕೆ. ಸ್ವಾಗತಿಸಿದರು. ಹಾಗೂ ರಶ್ಮಿ ವಂದಿಸಿದರೆ, ಸಾರ್ಥಕ್ ಟಿ. ಕಾರ್ಯಕ್ರಮದ ನಿರೂಪಣೆಗೈದರು.

LEAVE A REPLY

Please enter your comment!
Please enter your name here