ಅಳದಂಗಡಿಯಲ್ಲಿ ‘ಆಮಂತ್ರಣ’ ಸಾಂಸ್ಕೃತಿಕ ದಶಮಾನೋತ್ಸವ ಹಾಗೂ ಜಾನಪದ ಜಾತ್ರೆ

0
17

ವರದಿ ÷ಮಂದಾರ ರಾಜೇಶ್ ಭಟ್,ತುಳುನಾಡು ವಾರ್ತೆ

​ ತುಳುನಾಡು : ಸ್ಥಳೀಯ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ದಶಮಾನೋತ್ಸವ ಸಂಭ್ರಮ ಹಾಗೂ ‘ಜಾನಪದ ಜಾತ್ರೆ’ ಕಾರ್ಯಕ್ರಮವು ಜನೆವರಿ 17ರಂದು ಅಳದಂಗಡಿ ಅರಮನೆ ನಗರಿಯ ಸತ್ಯದೇವತಾ ದೈವಸ್ಥಾನದ ಮುಂಭಾಗದ ಮೈದಾನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಮುಖ್ಯಾಂಶಗಳು :

ಬೆಳಗಿನ ಕಾರ್ಯಕ್ರಮ: ಬೆಳಿಗ್ಗೆ 9:00 ಗಂಟೆಯಿಂದ ಜಾನಪದ ಜಾತ್ರೆ, ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಯಕ್ಷಗಾನ ರಂಗಪ್ರವೇಶ ಮತ್ತು ನೃತ್ಯ ವೈಭವ ಪ್ರಮುಖ ಆಕರ್ಷಣೆಯಾಗಿರಲಿವೆ.

ಸಾಹಿತ್ಯ ಗೋಷ್ಠಿ :

ಮಧ್ಯಾಹ್ನ ಕವಿಗೋಷ್ಠಿ, ಪುಸ್ತಕ ಬಿಡುಗಡೆ ಹಾಗೂ ನೆನಪಿನ ಸಂಚಿಕೆ ಲೋಕಾರ್ಪಣೆಗೊಳ್ಳಲಿದೆ.

ಗೌರವಾರ್ಪಣೆ :

ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಾಂಸ್ಕೃತಿಕ ಪ್ರಶಸ್ತಿ ಹಾಗೂ ಗೌರವ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಲಾಗುವುದು. ಎಂದು ಸಂಘಟಕರು ಆಮಂತ್ರಣ ಪತ್ರದಲ್ಲಿ ತಿಳಿಸಿದ್ದಾರೆ.

​ಸಾಂಸ್ಕೃತಿಕ ವೈಭವ :

ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ ಹಾಗೂ ರಾತ್ರಿ ವೇಳೆ ಸುಸಜ್ಜಿತ ರಂಗವಿನ್ಯಾಸದೊಂದಿಗೆ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಸಾರ್ವಜನಿಕರು ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here