ಮೂಡುಬಿದಿರೆ: ಇಲ್ಲಿಯ ಜೈನ ಮಠದ ಪೂಜ್ಯ ಡಾ.ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳ ಸಾರಥ್ಯದಲ್ಲಿ ,ಭಾರತೀಯ ಸಂತ ಮಹಾ ಪರಿಷತ್ತು ಮತ್ತು ಧವಳತ್ರಯ ಟ್ರಸ್ಟ್ (ರಿ)ಶ್ರೀ ದಿಗಂಬರ ಜೈನ ಮಠ ಜಂಟೀ ಆಯೋಜನೆಯಲ್ಲಿ ಮಹಾವೀರ ಭವನದಲ್ಲಿ ನಡೆಯಲಿರುವ ಸಂತ ಸಮ್ಮೇಳನದ ಅಂಗವಾಗಿ ಆಮಂತ್ರಣ ಪತ್ರಿಕೆಯನ್ನು ಡಾ.ಚಾರುಕೀರ್ತಿ ಸ್ವಾಮಿಗಳು ಮಠದಲ್ಲಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಎಂ ಬಾಹುಬಲಿ ಪ್ರಸಾದ್,ಸಹ ಸಂಚಾಲಕ ಎಂ ದಯಾನಂದ ಪೈ ಅಲಂಗಾರು,ಪ್ರದಾನ ಕಾರ್ಯದರ್ಶಿ ಎಂ ಶಾಂತಾರಾಮ ಕುಡ್ವ, ಜಂಟೀ ಕಾರ್ಯದರ್ಶಿಗಳಾದ ಎಂ ರಾಘವೇಂದ್ರ ಭಂಡಾರ್ಕರ್,ಕೆ.ಶಿವ ಭಂಡಾರ್ಕರ್, ಡಾ ಪ್ರಸನ್ನ ಕಾಕುಂಜೆ ನಮಿರಾಜ್ ಜೈನ್, ನ್ಯಾಯವಾದಿಗಳಾದ ಕೆ ಆರ್ ಪಂಡಿತ್,ಚೇತನ್ ಕುಮಾರ್ ಶೆಟ್ಟಿ,ಶ್ರೀ ಕಾಳಿಕಾಂಬ ದೇವಳದ ಮೊಕ್ತೇಸರ ಶಿವರಾಂ ಆಚಾರ್ಯ, ಕೋಟೆಬಾಗಿಲು ಶ್ರೀ ವೀರ ಮಾರುತಿ ದೇವಳದ ಮೊಕ್ತೇಸರ ದಯಾನಂದ ಹೆಗ್ಡೆ,ಉದ್ಯಮಿ ಯೋಗೀಶ್ ಆಚಾರ್ಯ,ಬಿಲ್ಲವ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ,ಮತ್ತಿತರರು ಉಪಸ್ಥಿತರಿದ್ದರು.

