ಗುರುವಾಯನಕೆರೆ : ಆಮಂತ್ರಣ ಸೇವಾ ಪ್ರತಿಷ್ಠಾನ ಅಳದಂಗಡಿ ಇದರ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಜು. 6 ರಂದು ಬಿಡುಗಡೆಗೊಂಡಿತು. ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ
ಚಯರ್ ಮೆನ್ ವಿಜಯರತ್ನ ಪುರಸ್ಕಾರ ಪಡೆದ ಸುಮಂತ್ ಕುಮಾರ್ ಜೈನ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಆಮಂತ್ರಣ ಸೇವಾ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿಜಯ ಕುಮಾರ್ ಜೈನ್ ಅಳದಂಗಡಿ, ಟ್ರಸ್ಟಿ ಅರುಣ್ ಅರುವ ಹಾಗೂ ಸದಸ್ಯರಾದ ಸುಪಾರ್ಶ್ವ ಜೈನ್ ಶಿರ್ಲಾಲು ಜತೆಗಿದ್ದರು.
ಇದೇ ಬರುವ ಜು.13 ರಂದು ಅಳದಂಗಡಿ ಮೌಂಟ್ ಕಾರ್ಮೆಲ್ ಕಾಂಪ್ಲೆಕ್ಸ್ ಇಲ್ಲಿ ಆಮಂತ್ರಣ ಸೇವಾ ಪ್ರತಿಷ್ಠಾನದ ಉದ್ಘಾಟನೆ ಹಾಗೂ ವಿವಿಧ ಸೇವಾ ಚಟುವಟಿಕೆ, ಪತ್ರಕರ್ತರಿಗೆ ಸನ್ಮಾನ , ಯಕ್ಷಗಾನ ತರಗತಿ ಪ್ರಾರಂಭ, ಕವಿಗೋಷ್ಠಿ, ನಡೆಯಲಿರುವುದು.