ಆಮಂತ್ರಣ ಸೇವಾ ಪ್ರತಿಷ್ಠಾನ (ರಿ), ಅಳದಂಗಡಿ ತುಳು ಸಿಂಗಾರ ಚೆನ್ನಮಣೆ ಸ್ಪರ್ಧೆ – ವಿಜೇತರಿಗೆ ಸನ್ಮಾನ

0
16

ಅಳದಂಗಡಿಯ ಆಮಂತ್ರಣ ಸೇವಾ ಪ್ರತಿಷ್ಠಾನ (ರಿ) ಇವರ ಸಾರಥ್ಯದಲ್ಲಿ , ದಿನಾಂಕ :03-08-2025 ಆದಿತ್ಯವಾರ ಅಳದಂಗಡಿಯ ದೀಪಾ ಸಭಾ ಭವನದಲ್ಲಿ “ತುಳು ಸಿಂಗಾರ ಚೆನ್ನೆಮಣೆ ಸ್ಪರ್ಧೆ” ಯನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆ ಜರುಗಿತು.

ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಬಹುಮಾನ ವಿಜೇತರನ್ನು ಗುರುತಿಸಿ ಸನ್ಮಾನಿಸಲಾಯಿತು. ಚಿತ್ರಕಲೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ 10 ನೇ ತರಗತಿಯ ಮಕ್ಕಳು ಸಮ್ ರಿನ್ ಬಾನು – ಪ್ರಥಮ, ರಿಫಾ ಫಾತಿಮಾ ದ್ವಿತೀಯ ಹಾಗೂ ನುಮಾ ಸಾರ- ತೃತೀಯ ಬಹುಮಾನ ಪಡೆದರು. 6 ನೇ ತರಗತಿಯ ಮಹಾನ್ ಮತ್ತು ಅನುಷ್ಕಾ ಇವರು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರೋತ್ಸಾಹಕ ಬಹುಮಾನಗಳನ್ನು ಗಳಿಸುತ್ತಾರೆ.

ಚೆನ್ನೆಮಣೆ ಸ್ಪರ್ಧೆ ದ್ವಿತೀಯ ಬಹುಮಾನವನ್ನು ಶ್ರೀಮತಿ. ಸರ್ವಾಣಿ ಅವರು ಪಡೆದಿರುತ್ತಾರೆ.

ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹ ನೀಡಿದ ಶಾಲಾ ಸಂಚಾಲಕರಾದ ನಸೀರ್ ಅಹಮ್ಮದ್ ಖಾನ್ ಹಾಗೂ ಮುಖ್ಯೋಪಾಧ್ಯಾಯರು ಶ್ರೀ. ಪ್ರಭಾಕರ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here