ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕಳೆದ ೩೫ ವರ್ಷಗಳಿಂದ ನಿರಂತರವಾಗಿ ಕನ್ನಡ ಮಕ್ಕಳ ಕಾರ್ಯಕ್ರಮ, ಉಚಿತವಾಗಿ ಚಿತ್ರ ಬರೆಯುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ದಾವಣಗೆರೆ ಗೃಹಿಣಿ ಸ್ಪರ್ಧೆ, ಕಥಾ ಸ್ಪರ್ಧೆ ಹೀಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಕುರಿತು ಸಾರ್ವಜನಿಕವಾಗಿ ತಮ್ಮ ತಮ್ಮ ಅನಿಸಿಕೆಗಳ ಲೇಖನವನ್ನು ಉಚಿತವಾಗಿ ಬರೆದು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳಿಸಬೇಕಾಗಿ ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಪ್ರತೀ ವರ್ಷ ಎಸ್.ಎಸ್.ಎಲ್.ಸಿ. ಪ್ರತಿಭಾವಂತ ವಿದ್ಯಾರ್ಥಿ ಮಕ್ಕಳಿಗೆ “ಕನ್ನಡ ಕುವರ-ಕುವರಿ” “ಕನ್ನಡ ಕೌಸ್ತುಭ”, “ಸರಸ್ವತಿ ಪುರಸ್ಕಾರ” ಪ್ರಶಸ್ತಿಗಳನ್ನು ಈಗಾಗಲೇ ೩೯ ಸಾವಿರ ಮಕ್ಕಳಿಗೆ ಪ್ರಧಾನ ಮಾಡಿದ್ದು ಪರೀಕ್ಷೆಗೆ ಮೊದಲೇ ಪ್ರತೀ ಶಾಲೆಗಳಿಗೆ ಹಳ್ಳಿ ಹಳ್ಳಿಗಳಿಗೆ ಹೋಗಿ “ಪರೀಕ್ಷಾ ಪೂರ್ವಭಾವಿ ಉಚಿತ ಕಾರ್ಯಾಗಾರ” ಮಾಡುತ್ತಿದ್ದು ಪ್ರಶಸ್ತಿ ಪಡೆದ ಮಕ್ಕಳು, ಪೋಷಕರು ವಿವಿಧ ವಿದ್ಯಾಸಂಸ್ಥೆಗಳ ಶಿಕ್ಷಕರು ಲೇಖನ ಬರೆಯಬಹುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ. “ಕುಂಚ ಕೈಪಿಡಿ” ಪುಸ್ತಕಕ್ಕೆ ಲೇಖನ ಬರೆದು ಕಳಿಸುವ ವಿಳಾಸ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಕುವೆಂಪು ರಸ್ತೆ, ಕಸ್ತೂರ್ಬಾ ಬಡಾವಣೆ, ದಾವಣಗೆರೆ-೫೭೭೦೦೨.