ಶ್ರೀ ಗಾಯತ್ರಿ ಪರಿವಾರದಿಂದ ಸಾರ್ವಜನಿಕವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಗೆ ಆಹ್ವಾನ

0
24

ದಾವಣಗೆರೆಯ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಬೆಳ್ಳಿಹಬ್ಬದ ಪ್ರಯುಕ್ತ 07-12-2025 ರಂದು ಭಾನುವಾರ ನಗರದ ಎಂ.ಸಿ.ಸಿ `ಎ’ ಬ್ಲಾಕ್‌ನ ಶ್ರೀ ಸುಕೃತೀಂದ್ರ ಕಲಾಮಂದಿರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಪರಿವಾರದ ಅಧ್ಯಕ್ಷರಾದ ಡಾ|| ರಮೇಶ್ ಪಟೇಲ್ ತಿಳಿಸಿದ್ದಾರೆ.
ಯಾವುದೇ ಜಾತಿ, ಮತ, ಬೇಧವಿಲ್ಲದೇ ಸಾರ್ವಜನಿಕರು ಈ ಮಹತ್ವಪೂರ್ಣ ಪೂಜೆಯಲ್ಲಿ ಭಾಗವಹಿಸುವವರು ಸಂಕಲ್ಪಕ್ಕೆ ಈ ಕೆಳಗಿನ ಸನೀಹವಾಣಿಗಳಿಗೆ ಸಂಪರ್ಕಿಸಬಹುದು ಎಂದು ಪರಿವಾರದ ಕೋಶಾಧ್ಯಕ್ಷರಾದ ಪುರುಷೋತ್ತಮ ಡಿ.ಪಟೇಲ್ ಪ್ರಕಟಿಸಿದ್ದಾರೆ. ಶ್ರೀ ಗಾಯತ್ರಿ ಪರಿವಾರ 2000 ಇಸವಿಯಲ್ಲಿ ಪ್ರಾರಂಭವಾಗಿ 25 ವರ್ಷಗಳ ಕಾಲ ನಿರಂತರವಾಗಿ ಪ್ರತೀ ಹುಣ್ಣಿಮೆಯಂದು ಸಾರ್ವಜನಿಕವಾಗಿ ಯಾವುದೇ ಜಾತಿ, ಮತ, ಲಿಂಗಭೇದವಿಲ್ಲದೇ ಸಾಮೂಹಿಕ ಗಾಯತ್ರಿ ಪೂಜೆ, ಉಪಾಸನೆ ನಡೆಯುತ್ತಿರುವ ಈ ಗಾಯತ್ರಿ ಮಂತ್ರ ಪಠಣ ನಡೆಯುತ್ತಿರುವುದು ದಾವಣಗೆರೆಯ ಶ್ರೀ ಕೃಷ್ಣ ಸೇವಾ ಟ್ರಸ್ಟ್ನ ಸಹಯೋಗದಲ್ಲಿ ನಡೆಯುತ್ತಿರುವ ಈ ರಜತ ಮಹೋತ್ಸವಕ್ಕೆ ಭಾಗವಹಿಸುವವರು 9845277088, 9448979957, 9538732777, 9342441194 ಈ ಸನೀಹವಾಣಿಗಳಿಗೆ ಸಂಪರ್ಕಿಸಿ ಹೆಸರು ನೊಂದಾಯಿಸಬೇಕಾಗಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ಹಾಗೂ ಸಂಚಾಲಕರಾದ ಭಾವನ್ನಾರಾಯಣರವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here