ಆಮಂತ್ರಣ ದಶಮಾನೋತ್ಸವ ಅರುವಶ್ರೀ ಪ್ರಶಸ್ತಿ ಪ್ರಕಟ

0
155

ಅಳದಂಗಡಿ : ಆಮಂತ್ರಣ ಪರಿವಾರ , ಆಮಂತ್ರಣ ಸೇವಾ ಪ್ರತಿಷ್ಠಾನ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಇದರ ವತಿಯಿಂದ ಆಮಂತ್ರಣ ದಶಮಾನೋತ್ಸವದ ಸಮಾರಂಭ ಜ.17 ರಂದು ನಡೆಯಲಿರುವುದು. ಅಳದಂಗಡಿ ಶ್ರೀ ಸೋಮನಾಥೇಶ್ವರೀ ಜಾತ್ರೋತ್ಸವದ ಸಂದರ್ಭದಲ್ಲಿ ಸತ್ಯದೇವತಾ ದೈವಸ್ಥಾನದ ಎದುರು ಮೈದಾನದಲ್ಲಿ
ಆಮಂತ್ರಣ ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಇವರ ನೇತೃತ್ವದಲ್ಲಿ ನಡೆಯಲಿರುವುದು.

ಅರುವಶ್ರೀ ಪುರಸ್ಕೃತರು ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಉಜಿರೆ

ಹಲವಾರು ರಂಗಗಳಲ್ಲಿ ಸೇವೆ ಸಲ್ಲಿಸುವ ವಿವಿಧ ಸಾಧಕರನ್ನು ಸನ್ಮಾನಿಸುವ ನಿರಂತರ ಕಾರ್ಯಕ್ರಮ 10 ವರ್ಷಗಳಿಂದ ಆಮಂತ್ರಣ ಪರಿವಾರ ಮಾಡುತ್ತಾ ಬರುತ್ತಿದ್ದು ಅದರಂತೆ 2026 ರ ಸಾಲಿಗೆ ಅರುವಶ್ರೀ ಎಂಬ ಅಳದಂಗಡಿ ಹೆಸರಿನಲ್ಲಿ ಪ್ರಶಸ್ತಿ ನೀಡಲು ತೀರ್ಮನಿಸಲಾಗಿತ್ತು
ಅದರಂತೆ
ಸಮಾಜಮುಖಿ ಕೆಲಸ ಮಾಡುತ್ತಿರುವ ಶ್ರೇಷ್ಠ ಸಾಧಕ, ಹಲವರಿಗೆ ಉದ್ಯೋಗ ನೀಡುವ ಮೂಲಕ ಅನ್ನದಾತರಾಗಿ,ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಬೆನ್ನೆಲುಬಾಗಿ‌‌ ನಿಂತು ಬದುಕು ಕಟ್ಟೋಣ ಸಂಸ್ಥೆಯ ಮೂಲಕ ಇಡೀ ಜನಸಮೂಹವನ್ನು ಒಂದುಗೂಡಿಸುವ ಶಕ್ತಿ, ಇವರಲ್ಲಿ ಭಕ್ತಿಕೂಡ ಜಾಸ್ತಿ ಇರುವುದರಿಂದ ವಿದ್ಯಾರ್ಥಿ ಸಮುದಾಯಕ್ಕೆ ವಿಭಿನ್ನ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿದ ಸರದಾರ, ಸ್ವರದಲ್ಲಿ ಮೌನವಾದರೂ ಕೂಡ ಸರಸರ ಕಾರ್ಯಕ್ರಮ ಮಾಡುವ ದಿಟ್ಟತನದ ಸ್ಪಷ್ಟ ನುಡಿಯ ಚಿಂತಕ ಹಲವಾರು ಸಮಾಜ ಸೇವೆಗಳನ್ನು ಮಾಡುತ್ತಾ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಗುರುತಿಸಿಕೊಳ್ಳುತ್ತಿರುವ ಮೃದು ಸ್ವಭಾವದ ಉಜಿರೆ ಲಕ್ಷ್ಮೀ ಗ್ರೂಪ್ಸ್ ಕನಸಿನ ಮನೆಯ ಯಜಮಾನ ಮೋಹನ್ ಕುಮಾರ್ ಇವರಿಗೆ ಅರುವಶ್ರೀ ಪ್ರಶಸ್ತಿ ಘೋಷಿಸಲಾಗಿದೆ.

ಸದಾನಂದ ಪೂಜಾರಿ ಉಂಗಿಲ ಬೈಲು

ಸದಾ ನಗುಮುಖದಿಂದ ಸಮಾಜದ ಜನರೊಂದಿಗೆ ತನ್ನನ್ನು ತಾನು ತೊಡಗಿಸುತ್ತಾ, ತಾನೂ ಬೆಳೆದು ಬಂದ ದಾರಿಯನ್ನು ಎಂದೂ ಮರೆಯದೇ ಗುರುವಾಯನಕೆರೆ ಜ್ಯೋತಿ ಹೋಟೆಲ್ ಸಿಬ್ಬಂದಿಯಾಗಿ ದುಡಿದು ನಡೆದು ಬಂದ ಸದಾನಂದರ ಹಾದಿ ಆನಂದದಲ್ಲಿ ಹಲವು ರಂಗಗಳಲ್ಲಿ ನೆನಪಿನಲ್ಲಿಡುವಂತಾಗಿದೆ. ಶಿಕ್ಷಣ ಕಡಿಮೆಯಾದರೂ ಎಲ್ಲರನ್ನೂ ಮೀರಿ ಮೆರೆಯುವ ಶಿಕ್ಷಣ ತಜ್ಞರಂತೆ ಶಿಕ್ಷಣ ಪ್ರೇಮಿಯಾಗಿ ಮಕ್ಕಳ ಮೇಲೆ ಅಪಾರ ಪ್ರೀತಿ ಕಂಡುಕೊಂಡು,ಶಿಕ್ಷಣ ಸಂಸ್ಥೆಗಳನ್ನು ಪ್ರೀತಿಯಿಂದ ನೋಡಿ ಸಮೀಪದ ಬಡಗಕಾರಂದೂರು, ಕೆದ್ದು ಪ್ರೌಢಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡುಹೋದವರು,ಧಾರ್ಮಿಕವಾಗಿ ಸಮೀಪದ ಎಲ್ಲಾ ದೇವಸ್ಥಾನಗಳಲ್ಲಿ ಹಲವು ಜವಬ್ದಾರಿ ವಹಿಸಿಕೊಂಡು ರಾಜಕೀಯವಾಗಿ ಹಲವು ಸ್ಥಾನಗಳನ್ನು ಪಡೆದು ಅಹಂ ಇಲ್ಲದೆ ಮಾತಾಡುವ, ಗ್ರಾ.ಪಂ.ಸದಸ್ಯರಾಗಿ ಅಳದಂಗಡಿ ಗ್ರಾ.ಪಂ.ಅಧ್ಯಕ್ಷರಾಗಿ , ಸಹಕಾರಿ ಕ್ಷೇತ್ರದಲ್ಲಿ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ , ಆರ್ಥಿಕವಾಗಿ ಹಿಂದುಳಿದವರಿಗೆ ಗುಟ್ಟಾಗಿ ಸಹಾಯ ಹಸ್ತ ಮಾಡುತ್ತಿರುವ ಊರಿನಲ್ಲಿ ಚಿರಪರಿಚಿತರಾಗಿರುವ ಉಂಗಿಲಬೈಲ್ ಸದಾನಂದರಿಗೆ ಆಮಂತ್ರಣ ಅರುವಶ್ರೀ ಪ್ರಶಸ್ತಿ ಒಲಿದು ಬಂದಿದೆ.

ಅರುವ ದಿ| ನಾರಾಯಣ ಶೆಟ್ಟಿ ಮರಣೋತ್ತರ ಪ್ರಶಸ್ತಿ

ಯಕ್ಷಗಾನ ರಂಗದ ಮೇರು ಪರ್ವತ ಅಳದಂಗಡಿಯ ಅರುವ ನಾರಾಯಣ ಶೆಟ್ಟಿ ಎಂದೇ ಚಿರಪರಿಚಿತರು.
ಅರುವ ಎನ್ನುವ ಊರಿಗೆ ಹೆಸರು ತಂದ ಯಕ್ಷಗಾನ ಕಲಾವಿದ
ಈ ಹೆಸರಲ್ಲೆ ಅರುವಶ್ರೀ ಪ್ರಶಸ್ತಿ ಆಮಂತ್ರಣ ಸಿದ್ದಮಾಡಿಕೊಂಡಿದ್ದು ಈ ಪ್ರಶಸ್ತಿ ಕೀರ್ತಿಶೇಷ ಅರುವ ನಾರಾಯಣ ಶೆಟ್ಟರಿಗೆ ಸಮರ್ಪಿಸಲು ತೀರ್ಮಾನಿಸಿದೆ. ಯಕ್ಷಗಾನದ ದಿಗ್ಗಜರ ಮೂಲಕ ಬೆಳೆದು ರಂಗವನ್ನೇ ಉಸಿರಾಗಿಸಿದ ಹೆಮ್ಮೆಯ ಕಲಾವಿದ ಶ್ರೀ ದೇವಿ ಸೋಮನಾಥೇಶ್ವರೀ ಯಕ್ಷಗಾನ ಮಂಡಳಿ ಅರುವ ಹೆಸರಲ್ಲಿ ಮೇಳ ಮಾಡಿಕೊಂಡು ಹಲವು ಪ್ರಸಂಗಗಳನ್ನು ರಂಗಕ್ಕೆ ಅರ್ಪಿಸಿ ಯಕ್ಷಗಾನ ಮೇಳವನ್ನು ಮುನ್ನಡೆಸಿ ನಂತರ ಹಲವಾರು ಮೇಳಗಳಲ್ಲಿ ನೆನಪಿನಲ್ಲಿ ಉಳಿಯುವ ವೇಷಗಳನ್ನು ಮಾಡಿ ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ನಾರಾಯಣ ಶೆಟ್ಟರು ರಂಗಸ್ಥಳದಲ್ಲಿ ವೇಷದಲ್ಲಿರುವಾಗಲೇ ನಿಧನ ಹೊಂದಿದ್ದು ಎಂದೂ ಮರೆಯದ ದುಖದ ನೆನಪು. 2012 ರಲ್ಲಿ ಮರಣ ಹೊಂದಿದ ಇವರಿಗೆ 2026 ರಲ್ಲಿ ಕುಟುಂಬದವರ ಮಾತು ಕತೆಯೊಂದಿಗೆ ಒಪ್ಪಿಗೆ ಪಡೆದು ದಶಮಾನೋತ್ಸವ ಸಮಿತಿ , ಆಮಂತ್ರಣ ಪ್ರತಿಷ್ಠಾನ ಯಕ್ಷಪ್ರಿಯರ ಕಣ್ಣುಗಳಲ್ಲಿ‌ ನೆನಪಾಗಿ‌ ಮಿನುಗುತ್ತಿರುವ ಅರುವ ದಿ| ನಾರಾಯಣ ಶೆಟ್ಟಿ
ಇವರಿಗೆ ಅರುವಶ್ರೀ
ಮರಣೋತ್ತರ ಪ್ರಶಸ್ತಿ‌‌ .

ಈ ಸಮಾರಂಭ ಜನವರಿ 17 ರಂದು ಸಂಜೆ 7-00 ಗಂಟೆಗೆ ಮೂಡುಬಿದಿರೆ ಸ್ವಾಮೀಜಿ, ನಿಪ್ಪಾಣಿ ಸ್ವಾಮೀಜಿ, ಅಳದಂಗಡಿ ಅರಸರು, ಸಂಸದರು, ಶಾಸಕರು, ಗಣ್ಯಮಾನ್ಯರು ಇದ್ದು ನಡೆಯಲಿರುವುದು.

ಎಂದು ಆಮಂತ್ರಣ ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಹರೀಶ್ ಪೂಂಜ, ಆಮಂತ್ರಣ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶಿವಪ್ರಸಾದ್ ಅಜಿಲರು, ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್,
ಹಾಗೂ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here