“ಇರಾನ್ ಡ್ರೋನ್ ದಾಳಿ: ಓಮನ್‌ನ ಸಲಾಲಾದ ತೈಲ ಘಟಕಕ್ಕೆ ಭಾರಿ ಹಾನಿ”

0
7

ಮಸ್ಕಟ್ : ಮಧ್ಯಪ್ರಾಚ್ಯದ ಸಂಘರ್ಷ ಈಗ ಹೊಸ ಆಯಾಮವನ್ನು ಪಡೆದುಕೊಂಡಿದೆ. ಶಾಂತಿಪ್ರಿಯ ಮತ್ತು ತಟಸ್ಥ ರಾಷ್ಟ್ರವೆಂದೇ ಗುರುತಿಸಲ್ಪಟ್ಟಿರುವ ಓಮನ್ ಸುಲ್ತಾನೇಟ್‌ನ ಸಲಾಹ್ (Salalah) ಬಂದರಿನ ಮೇಲೆ ಇರಾನ್ ಬೆಂಬಲಿತ ಎನ್ನಲಾದ ಡ್ರೋನ್ ದಾಳಿಗಳು ನಡೆದಿವೆ. ಈ ದಾಳಿಯು ಗಲ್ಫ್ ಪ್ರಾಂತ್ಯದ ಇಂಧನ ಭದ್ರತೆಯನ್ನು ಅಲುಗಾಡಿಸಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ.

ಅಲ್ ಜಜೀರಾ ಮತ್ತು ಓಮನ್ ಟಿವಿಯ ವರದಿಗಳ ಪ್ರಕಾರ, ಸಲಾಹ್ ಬಂದರಿನಲ್ಲಿರುವ ತೈಲ ಸಂಗ್ರಹಣಾ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ಸರಣಿ ಡ್ರೋನ್ ದಾಳಿಗಳನ್ನು ನಡೆಸಲಾಗಿದೆ. ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆ ‘ಅಂಬ್ರೆ’ ಈ ದಾಳಿಯನ್ನು ಖಚಿತಪಡಿಸಿದ್ದು, ಬಂದರಿನ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ತಿಳಿಸಿದೆ. ಆದರೆ, ಅದೃಷ್ಟವಶಾತ್ ಹತ್ತಿರದಲ್ಲಿದ್ದ ವಾಣಿಜ್ಯ ಹಡಗುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here