ವರದಿ ರಾಯಿ ರಾಜ ಕುಮಾರ
ಪುತ್ತೂರು ಪಾಲ್ತಾಡಿ ಮನೆತನದ ಈಶಾನ್ ವಿಕ್ರಂ 11ನೇ ವಯಸ್ಸಿನಲ್ಲಿ ಗಂಟೆಗೆ 150 ಕಿಲೋ ಮೀಟರ್ ವೇಗದಲ್ಲಿ ಹಾರುವ ಡ್ರೋನ್ ತಯಾರಿಸಿ ವಿಶ್ವ ದಾಖಲೆಯನ್ನು ಬರೆದಿದ್ದಾನೆ. 5ನೇ ತರಗತಿಯ ರಜೆಯಲ್ಲಿ ಇಂಟರ್ನೆಟ್ ಹಾಗೂ ಯೂಟ್ಯೂಬ್ ಮೂಲಕ ಡ್ರೋನ್ ತಯಾರಿಯ ತಾಂತ್ರಿಕತೆಯನ್ನು ಕಲಿತನು. ತಂದೆಯಿಂದ ಹಣ ಪಡೆದು, ಬಿಡಿ ಭಾಗಗಳನ್ನು ತರಿಸಿಕೊಂಡು 1/2 ಕೆಜಿ ತೂಕದ ಡೋನನ್ನು ತಯಾರಿಸಿದನು. ಸುಮಾರು 50,000 ಖರ್ಚು ಮಾಡಿ ತಯಾರಿಸಿದ ಡ್ರೋನು 150 ಕಿಲೋ ಮೀಟರ್ ವೇಗದಲ್ಲಿ ಹಾಡಬಹುದಾಗಿದೆ.
ತಾಂತ್ರಿಕ ಪರಿಣತಿಯಲ್ಲಿಯೇ ತಲ್ಲಿನನಾಗಿದ್ದು ಏನಾದರೂ ಸಾಧಿಸಬೇಕೆಂಬ ಛಲದಿಂದಾಗಿ ಡ್ರೋನ್ ತಯಾರಿಸಿದ ಈಶಾನ್ ಗೆ “ಸೂಪರ್ ಟ್ಯಾಲೆಂಟೆಡ್ ಕಿಡ್ ಹಾಗೂ ಒನ್ ಇನ್ ಮಿಲಿಯನ್”ಎಂಬ ಪುರಸ್ಕಾರದ ಗೌರವಗಳು ಲಭಿಸಿದೆ. ಅಲ್ಲದೆ ಅಂತರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಯು ದಾಖಲಾಗಿದೆ.
ಈತ ಮಂಗಳೂರು ಎಂ ಆರ್ ಪಿ ಎಲ್ ನ ಉದ್ಯೋಗಿ ವಿಕ್ರಂ ಪಾಲ್ತಾಡಿ ಹಾಗೂ ಸುಷ್ಮಾ ದಂಪತಿಗಳ ಸುಪುತ್ರ. ಮೂಡುಬಿದಿರೆಯಲ್ಲಿ ವಾಸವಿರುವ ಅಜ್ಜ, ನಿವೃತ್ತ ಅಧ್ಯಾಪಕ ಭಾಸ್ಕರ್ ಪಾಲ್ತಾಡಿ ಹಾಗೂ ಸುನಂದಾ ಯವರು ನೀಡಿದ್ದು ಆಟಿಕೆಯ ಡ್ರೋನ್ ಕುರಿತು ಆಸಕ್ತಿ ತಳೆದವನು. ಮಂಗಳೂರು ಸುರತ್ಕಲ್ ನ ಡಿಪಿಎಸ್ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿ. ಇದರಿಂದ ಇನ್ನಷ್ಟು ಮೇರು ಸಾಧನೆ ಮೂಡಿಬಂದು ವಿಶ್ವ ದಾಖಲೆಯ ಇನ್ನಷ್ಟು ಗರಿಗಳು ಈತನ ಮಡಿಲು ಸೇರಲಿ ಎಂಬ ಹಾರೈಕೆ.


