ಮಾನವ ಕುತೂಹಲವು ನಕ್ಷತ್ರಗಳನ್ನೂ ತಲುಪಬಲ್ಲದು. ಅಂತಹ ಕುತೂಹಲಕ್ಕೆ ದಿಕ್ಕು ತೋರುವ ಬಾಹ್ಯಾಕಾಶ ವಿಜ್ಞಾನಿಯೊಬ್ಬರು ನೇರವಾಗಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ.
ರಾಮಕೃಷ್ಣ ಮಿಷನ್, ಮಂಗಳೂರು ಹಾಗೂ ಸಮತಾ (ರಿ) ಮಹಿಳಾ ಬಳಗ, ಮಂಗಳೂರಿನ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ “ISRO’s Legacy and Beyond” ಎಂಬ ವಿಶಿಷ್ಟ ಉಪನ್ಯಾಸ ಕಾರ್ಯಕ್ರಮ, ಬಾಹ್ಯಾಕಾಶದ ಸಾಧನೆಗಳ ಸುತ್ತಲೂ ಆವರಿಸುವ ವಿಜ್ಞಾನ ಮತ್ತು ಪ್ರೇರಣೆಯ ಮಹೋತ್ಸವವೇ ಸರಿ. ಈ ಕಾರ್ಯಕ್ರಮವನ್ನು ಜೂನ್ ೨೨, ೨೦೨೫ (ಭಾನುವಾರ) ರಂದು ಬೆಳಿಗ್ಗೆ ೯:೩೦ ರಿಂದ ೧:೦೦ ಗಂಟೆಯವರೆಗೆ, ಸ್ವಾಮಿ ವಿವೇಕಾನಂದ ಸಭಾಂಗಣ, ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಪದ್ಮಶ್ರೀ ಡಾ. ಎ. ಎಸ್. ಕಿರಣ್ ಕುಮಾರ್, ಮಾಜಿ ಅಧ್ಯಕ್ಷರು – “ISRO’s Legacy and Beyond”ಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದ ಪ್ರಮುಖ ಅಂಶಗಳು:
•ISROದ ಇತಿಹಾಸ, ಸಾಧನೆಗಳು ಹಾಗೂ ಭವಿಷ್ಯದ ದೃಷ್ಟಿಕೋನದ ಕುರಿತು ಉಪನ್ಯಾಸ
• ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ
• SPACE ON WHEELS– ಯು. ಆರ್. ರಾವ್ ಉಪಗ್ರಹ ಕೇಂದ್ರ, ಬೆಂಗಳೂರು ಇವರು ನಿರ್ವಹಿಸುವ ಚಲಂತ ವಿಜ್ಞಾನ ಪ್ರದರ್ಶನ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಗಣ್ಯರು:
ಈ ವಿಶೇಷ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಿಷನ್À, ಮಂಗಳೂರಿನ ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ ದಿವ್ಯ ಸನ್ನಿಧಾನವನ್ನು ನೀಡಲಿದ್ದು, ಸಮತಾ (ರಿ) ಮಹಿಳಾ ಬಳಗದ ಅಧ್ಯಕ್ಷೆ ಶ್ರೀಮತಿ ಕಾತ್ಯಾಯಿನಿ ಭಿಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕರ್ನಾಟಕ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಶ್ರೀಮತಿ ಸುಮನಾ ಘಾಟೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ISRO ದ Launch Vehicle Programme Office ನ ಮಾಜಿ ನಿರ್ದೇಶಕರಾದ ಹಾಗೂ IISc ಬೆಂಗಳೂರು ನ ಮಾಜಿ ಪ್ರಾಧ್ಯಾಪಕರಾದ ಡಾ. ಎಂ. ಎಂ. ನಾಯಕ್ ಅವರು ಅತಿಥಿ ಭಾಷಣ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಮತಾ ಮಹಿಳಾ ಬಳಗದ ಗೌರವಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ರಾವ್ ಅವರು ಅತಿಥಿಯಾಗಿ ಭಾಗವಹಿಸಲಿದ್ದು, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಅವರು ಧನ್ಯವಾದ ಸೂಚಿಸಲಿದ್ದಾರೆ. ಕಾರ್ಯಕ್ರಮ ಪರಿಚಯವನ್ನು ಶ್ರೀಮತಿ ಕಾತ್ಯಾಯಿನಿ ಭಿಡೆ ಅವರು ನಿರ್ವಹಿಸಲಿದ್ದಾರೆ.
ಸಂವೇದನೆ, ವಿಜ್ಞಾನ, ಹಾಗೂ ಸ್ಪೂರ್ತಿಯ ಸಂಕಲನವಾಗಿರುವ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿದ್ದು, ಬಾಹ್ಯಾಕಾಶ ವಿಜ್ಞಾನಕ್ಕೆ ಆಸಕ್ತರಾಗಿರುವ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿ.
Home Uncategorized “ISRO’s Legacy and Beyond” – ISRO ದ ಶ್ರೇಷ್ಠ ವಿಜ್ಞಾನಿಯೊಂದಿಗೆ ವಿಶೇಷ ಉಪನ್ಯಾಸ ಮತ್ತು...