ವಿದ್ಯಾರ್ಥಿಗಳ ಸರ್ವತೋಮುಖ ಪ್ರತಿಭೆ ಅರಳಿಸುವುದು ಶಿಕ್ಷಕರ ಕೆಲಸ: ಶಿವಪ್ರಸಾದ್ ಶೆಟ್ಟಿ

0
25

ಕಲ್ಲಡ್ಕ: ಶಿಕ್ಷಣದಿಂದ ಪ್ರಪಂಚ ಬದಲಾಯಿಸಲು ಸಾಧ್ಯ. ಜಗತ್ತಿನ ಹೊರ ಕಣ್ಣನ್ನು ತೆಗೆದು ವಿದ್ಯಾರ್ಥಿಗಳ ಸರ್ವತೋಮುಖ ಪ್ರತಿಭೆಯನ್ನು ಅರಳಿಸುವುದು ಶಿಕ್ಷಕರ ಕೆಲಸ. ಪ್ರಾಥಮಿಕ ಹಂತದಲ್ಲಿ ವೈಯಕ್ತಿಕವಾಗಿ ಹುರಿದುಂಬಿಸಿ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಇದರ ಜಿಲ್ಲಾಧ್ಯಕ್ಷರು ಹಾಗೂ ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ಇಲ್ಲಿ ಹದಿನಾಲ್ಕು ವರ್ಷಗಳಿಂದ ಶಿಕ್ಷಕಿಯಾಗಿ ಸೇವಿ ಸಲ್ಲಿಸಿ ವಯೋ ನಿವೃತ್ತಿ ಹೊಂದುತ್ತಿರುವ ಶಿಕ್ಷಕಿ ಶಕುಂತಳಾ ಎಂ.ಬಿ ರವರಿಗೆ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ವತಿಯಿಂದ ಗೌರವಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಟ್ಲ ಗ್ರಾಮೀಣ ಸರಕಾರಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಎಂ. ಮಾತನಾಡಿ, ಜ್ಞಾನವೇ ಬೆಳಕು ಶಿಕ್ಷಕರೇ ಬೆಳಕಿನ ಮೂಲ ಅಜ್ಞಾನದ ಕತ್ತಲೆಯನ್ನು ತೊಲಗಿಸಲು ಶಿಕ್ಷಕರೇ ಆಧಾರ, ಈ ನಿಟ್ಟಿನಲ್ಲಿ ಶಿಕ್ಷಕಿ ಶಕುಂತಳಾ ರವರ ಸೇವೆ ಅಪಾರವಾಗಿದೆ ಎಂದರು.

ಶಿಕ್ಷಕರ ಸಂಘ, ಶಾಲಾ ಶಿಕ್ಷಕರು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ನಿವೃತ್ತ ಶಿಕ್ಷಕರು ಫಲ ಪುಷ್ಪ ಹೂಹಾರ ಅಭಿನಂದನಾ ಪತ್ರಗಳನ್ನು ನೀಡಿ ಶಿಕ್ಷಕಿ ಶಕುಂತಳಾ ರವರನ್ನು ಗೌರವಿಸಿದರು.
ಶಿಕ್ಷಕಿ ಶಕುಂತಳಾ ತನ್ನ ಜೊತೆ ಕಾರ್ಯನಿರ್ವಹಿಸಿದ ಎಲ್ಲಾ ಸಹೋದ್ಯೋಗಿ ಶಿಕ್ಷಕರಿಗೆ, ಶಾಲಾ ಅಡುಗೆ ಸಿಬ್ಬಂದಿಗಳಿಗೆ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಗಳಿಗೆ, ಶಾಲೆಯ ಎಲ್ಲಾ ಮಕ್ಕಳಿಗೆ ಉಡುಗೊರೆಗಳನ್ನು ನೀಡಿದರು. ಮಜಿ ಶಾಲೆಯ ಲ್ಯಾಬಿಗೆ ಬೇಕಾದ ಗೋದ್ರೇಜ್ ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಂಟ್ವಾಳ ಇದರ ಅಧ್ಯಕ್ಷರಾದ ಜಯರಾಮ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಯತೀಶ್, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ರಾಜೇಂದ್ರ ರೈ, ವೀರಕಮ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ ಗೋಳಿಮಾರ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಈಶ್ವರ ಭಟ್ ರಾಕೋಡ್, ಕಲ್ಲಡ್ಕ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಜಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಾರಾಯಣ ಪೂಜಾರಿ, ಶಕುಂತಳಾ,ನಿವೃತ್ತ ಶಿಕ್ಷಣ ಸಂಯೋಜಕೀ ಪುಷ್ಪ, ನಿವೃತ್ತ ಶಿಕ್ಷಕಿ ಸಿಸಿಲಿಯ, ಬೇರೆ ಬೇರೆ ಶಾಲೆಯ ಶಿಕ್ಷಕ,ಶಿಕ್ಷಕಿಯರಾದ ಜೆಸಿಂತಾ, ನೇತ್ರಾವತಿ, ಗೀತಾ, ರೇವತಿ, ಸೇಸಪ್ಪ ನಾಯ್ಕ, ಮಾತೃಶ್ರೀ ಗೆಳೆಯ ಬಳಗದ ಅಧ್ಯಕ್ಷ ರಮೇಶ್ ಗೌಡ ಮೈರ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಸಂಘ ಸಂಸ್ಥೆ ಗಳ ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

, ಶಿಕ್ಷಕಿಯರಾದ ಅನುಷಾ, ಜಯಲಕ್ಷ್ಮೀ, ಸಂಗೀತ ಶರ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ನೆನಪಿನ ಕಾಣಿಕೆಯನ್ನು ನೀಡಿ, ವಿದಾಯಗೀತೆ ಹಾಡಿದರು. ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ಶಿಕ್ಷಕಿ ಮುರ್ಷೀದಾಭಾನು ಸನ್ಮಾನ ಪತ್ರ ವಾಚಿಸಿ, ಶಿಕ್ಷಕಿ ಸಂಪ್ರಿಯಾ ವಂದಿಸಿದರು, ಶಿಕ್ಷಕಿ ಸಂಗೀತ ಶಮ೯ ಪಿ ಜಿ ಕಾಯ೯ಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here