ಏರಿಕ್‌ ಅಲೆಕ್ಸಾಂಡರ್‌ ಒಝಾರಿಯೋ ನಿಧನಕ್ಕೆ ಐವನ್‌ ಡಿʼಸೋಜಾ ಸಂತಾಪ

0
3

ಭಾರತ ದೇಶದಲ್ಲಿ ಕೊಂಕಣಿ ಸಮುದಾಯವನ್ನು ಒಟ್ಟು ಸೇರಿಸುವ ಕೊಂಕಣಿ ಸಮಾಜಕ್ಕಾಗಿ ಹೋರಾಟ ನಡೆಸಿ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಗೆ ತನ್ನದೇ ಅದ ಕೊಡುಗೆಯನ್ನು ನೀಡಿ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡ ತಮ್ಮ ಜೀವನದುದ್ದಕ್ಕೂ ಕೊಂಕಣಿ ಸಮಾಜಕ್ಕೋಸ್ಕರ ತಮ್ಮ ಜೀವನವನ್ನು ಮುಡುಪಾಗಿಸಿದ,  ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಸಂಗೀತಕ್ಕೋಸ್ಕರ “ಮಾಂಡ್‌ ಸೋಬಾಣ್‌ ”  ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ರಾಜ್ಯದೆಲ್ಲೆಡೆ ಕೊಂಕಣಿ ಭಾಷೆಯನ್ನು  ಶಾಲೆಗಳಲ್ಲಿ ಐಚ್ಛಿಕ ಭಾಷೆಯಾಗಿ ಅಳವಡಿಕೆಯಾಗುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ಸಾಹಿತ್ಯದ ದಾರಿಯನ್ನು ತೋರಿಸಿದ ಎಲ್ಲರ ಜೀವನದ ಬೆಳಕಿಗೆ ಪಾತ್ರರಾಗಿರುವ ಏರಿಕ್‌  ಅಲೆಕ್ಸಾಂಡರ್‌ ಒಝಾರಿಯೋರವರ ನಿಧನಕ್ಕೆ  ಐವನ್‌ ಡಿʼ ಸೋಜಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್‌ ಗುಂಡೂರಾವ್‌ ರವರು ಗೃಹ ಸಚಿವರಾದ ಡಾ| ಜಿ. ಪರಮೇಶ್ವರ್‌, ಮಾಜಿ ಸಚಿವರುಗಳಾದ ಎಂ.ಸಿ ನಾಣಯ್ಯ, ಎಂ.ಎಲ್.ಸಿ. ಮಂಜುನಾಥ ಭಂಡಾರಿ, ಮಾಜಿ ಎಂ.ಎಲ್.ಸಿ ಹರೀಶ್‌ ಕುಮಾರ್‌ ಮುಂತಾದ ಗಣ್ಯರು  ಏರಿಕ್‌  ಅಲೆಕ್ಸಾಂಡರ್‌ ಒಝಾರಿಯೋರವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಂತ್ಯಕ್ರಿಯೆಯು ಆದಿತ್ಯವಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ ಎಂದು ಐವನ್‌ ಡಿʼಸೋಜಾರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here