ಅಮೇರಿಕಾದ ಬೊಸ್ಟನ್‌ನಲ್ಲಿ ನಡೆಯುವ ರಾಜ್ಯ ಶಾಸಕರ ರಾಷ್ಟ್ರೀಯ ಸಮಾವೇಶದಲ್ಲಿ ಐವನ್‌ ಡಿʼಸೋಜ: ಕಾರ್ಯಕರ್ತರರಿಂದ ಗೌರವಾರ್ಪಣೆ

0
46

ಮಂಗಳೂರು: ಅಮೇರಿಕಾದ ಬೊಸ್ಟನ್‌ನಲ್ಲಿ ನಡೆಯುವ ರಾಜ್ಯ ಶಾಸಕರ ರಾಷ್ಟ್ರೀಯ ಸಮಾವೇಶ ಮತ್ತು ರಾಷ್ಟ್ರೀಯ ಶಾಸಕರ ಸಮಾವೇಶ ಸಂಸ್ಥೆಗಳ ಅಶ್ರಯದಲ್ಲಿ ಅಂತರಾಷ್ಟೀಯ ಮಟ್ಟದ ಶಾಸಕರ  ಸಮ್ಮೇಳನಕ್ಕೆ  ಆಯ್ಕೆಗೊಂಡಿರುವ  ವಿಧಾನ ಪರಿಷತ್‌  ಶಾಸಕರಾದ ಐವನ್‌ ಡಿʼಸೋಜಾ ಇವರನ್ನು ಅವರ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರು ನಾಯಕರುಗಳು ಅಭಿನಂದಿಸಿ ಪ್ರಯಾಣ ಶುಭಕರವಾಗಲಿ ಎಂದು ಹಾರೈಸಿದರು.

ಈ ಶೃಂಗ ಸಭೆಯು ಪ್ರಜಾತಂತ್ರ ಗಟ್ಟಿಗೊಳಿಸುವಿಕೆ ಮತ್ತು  ಶಾಸನ ಸಭೆಗಳ ಪಕ್ಷಾತೀತ ನಿರ್ವಹಣೆ ಸೇರಿದಂತೆ ಹಲವಾರು ವಿಷಯಗಳ ವಿಚಾರ ಸಂಕೀರ್ಣ ಸಂವಾದಗಳು ನಡೆಯಲಿದ್ದು ದೇಶದ ಅತ್ಯಂತ ದೊಡ್ಡ ಪ್ರಜಾತಂತ್ರ ದೇಶ ಬಾರತ ಮತ್ತು ಅಮೇರಿಕಾ ಮತ್ತು ಲಂಡನ್‌ ಇನ್ನಿತರ ದೇಶಗಳ ಸಂವಿಧಾನಗಳು ಮತ್ತು ಅದರಲ್ಲಿ ಆಗತಕ್ಕಂತಹ ಪರಿವತ್ತನೆಗಳ ಬಗ್ಗೆ ಈ ಸಮ್ಮೇಳನದಲ್ಲಿ ವಿಚಾರ ಸಂಕೀರ್ಣಗಳು ನಡೆಯಲಿದೆ ಐವನ್‌ ಡಿʼಸೋಜಾ ಇವರು ಈ ಶಾಸಕ ಸಭೆಯ ವಿಧಾನ ಪರಿಷತ್ತಿನ ಮುಖ್ಯಸಚೇತಕರಾಗಿ ಕಾರ್ಯನಿರ್ವಹಿಸಿದ್ದು, ಸಂವಿಧಾನ ಮತ್ತು ಪಕ್ಷಾತೀತಾವಾಗಿ ಕಾರ್ಯನಿರ್ವಹಣೆ ಮಾಡಬೇಕಾಗದಂತಹ ಶಾಸಕರುಗಳು ಯಾವ ರೀತಿಯಲ್ಲಿ ಶಾಸನ ಸಭೆಗಳಲ್ಲಿ ಭಾಗವಹಿಸಬೇಕಾಗುತ್ತದೆ ಮತ್ತು ಅವರ ನಡವಳಿಕೆಗಳ ಬಗ್ಗೆ  ಸಭೆಯಲ್ಲಿ ಐವನ್‌ ಡಿʼಸೋಜಾರವರು ವಿಷಯವನ್ನು ಮಂಡಿಸಲಿದ್ದರೆ.ಎಂದು ಎಂದು ಶಾಸಕರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್‌ ಜೆ. ನಾಗೇಂದ್ರ ಕುಮಾರ್‌, ಸತೀಶ್‌ ಪೆಂಗಲ್‌, ಭಾಸ್ಕರ್‌ ರಾವ್‌, ಗ್ಯಾರಂಟಿ ಜಿಲ್ಲಾ ಸದಸ್ಯರಾದ ಆಲ್ಸ್ಟೀನ್‌ ಡಿಕುಹ್ಹ, ರೀತೇಶ್‌ ಶಕ್ತಿನಗರ, ನೀತು ಡಿಸೋಜಾ, ಹಾಗೂ ಕಾಂಗ್ರೆಸ್‌ ಮುಖಂಡರುಗಳಾದ ಜೇಮ್ಸ್‌ ಪ್ರವೀಣ್‌, ಮನುರಾಜ್‌, ಮನೀಶ್‌ ಬೋಳಾರ್‌, ಸ್ಟ್ಯಾನಿ ಶಕ್ತಿನಗರ್‌, ಪಿಯೂಸ್‌ ಮೊಂತೆರೋ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here