ಜಗದ್ಗುರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಸಮ್ಮೇದ ಶಿಖರ್ ತೀರ್ಥಯಾತ್ರೆ

0
10

ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿಗಳವರಿಂದ ಬಿಹಾರ್, ಜಾರ್ಖoಡ್ ರಾಜ್ಯ ದ ತೀರ್ಥ ಕ್ಷೇತ್ರ ಗಳ ದರ್ಶನ 27.11.25 ರಿಂದ ಐದು ದಿನಗಳ ತೀರ್ಥ ಯಾತ್ರೆಗಾಗಿ ಮಧ್ಯಾಹ್ನ ರಾಂಚಿ ಕ್ಷೇತ್ರ ದಿಂದ ಜೈನರ ಪವಿತ್ರ ಶಾಶ್ವತ ಸಿದ್ದ ಕ್ಷೇತ್ರ ಸಮ್ಮೇದ ಶಿಖರ್ಜಿಗೆ ಬಂದು 28.11.25 ರ ಬೆಳಿಗ್ಗೆ 27ಕೀ.ಮಿ ಒಟ್ಟು ಪರ್ವತ ಪರಿ ಕ್ರಮ ಇರುವ 20 ಕೂಟ ಗಳ ಮುಕ್ತಿ ಪಡೆದ ತೀರ್ಥoಕರ ರ ಚರಣ ದರ್ಶನ ಮಾಡಿದರು. ಅಪರಾಹ್ನ ಬೀಸ್ ಪಂಥಿ ಕೋಠಿಯ ಸಿದ್ದ ಚಕ್ರ ವಿಧಾನದಲ್ಲಿ ಪಾಲ್ಗೊಂಡರು. ಈ ಸಂಧರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆಚಾರ್ಯ ಗಿರಿ ನಾರ ಸಾಗರ್, ಸಂಘದ ಮುನಿ ಗಳು ಉಪಸ್ಥಿತರಿದ್ದರು. ಮೂಡುಬಿದಿರೆ ಸ್ವಾಮೀಜಿಯವರನ್ನು ಅಧ್ಯಕ್ಷ ಅಜಯ್ ಬಾಬು,ಅರಾ ಪಾದ ಪೂಜೆ ಮಾಡಿ ಗೌರವಿಸಿದರು. ಗುಣ ಯತನ್ ತೀರ್ಥದಲ್ಲಿ 108ಮುನಿ ಸಮತಾ ಸಾಗರ್, ಆಚಾರ್ಯ 108 ಶಂಭವ ಸಾಗರ್ ಮೂಲತ: ಉಡುಪಿ ಜಿಲ್ಲೆ ಬಸರೂರು ನವರು ಹಾಗೂ ಶಿಖರ್ಜಿ ಅದಿನಾಥ್ ಸ್ವಾಮಿ ಪಂಚ ಕಲ್ಯಾಣ ಎರಡನೇ ದಿನ ಸಮಾರಂಭದಲ್ಲಿ ಆಚಾರ್ಯ ತನ್ಮಯ ಸಾಗರ್ ಮುನಿ ಮಹಾರಾಜ್ ಗೌರವಿಸಿ ಹರಸಿ ಆಶೀರ್ವಾದ ಮಾಡಿದರು.

ಈ ಸಂಧರ್ಭ ದೀಕ್ಷಾ ಕಲ್ಯಾಣದ ಬಗ್ಗೆ ಮಾತನಾಡಿದ ಮೂಡುಬಿದಿರೆ ಸ್ವಾಮೀಜಿ ಸಂಸಾರ ಜೀವನದಲ್ಲಿ ಗೃಹ ಸ್ಥ ಜೀವನ ಸನ್ಯಾಸ ಜೀವನ ಎಂಬ ಎರಡು ವಿಭಾಗ ವಿದ್ದು ಸನ್ಯಾಸ ಜೀವನ ಸಂಚಿತ ಕರ್ಮ ನಾಶ ಮಾಡಿ ಮುಕ್ತಿ ಪಡೆಯಲು ಮಹಾ ವ್ರತಗಳು ನೇರವಾಗುದು ಹಾಗಾಗಿ ಭಾರತೀಯ ಸಂಸ್ಕೃತಿಯಲ್ಲಿ ಯತಿ ದೀಕ್ಷೆ ಗೆ ವಿಶೇಷ ಮಹತ್ವ ನೀಡಲಾಗಿದೆ ಎಂದು ನುಡಿದರು. ಮನೋಜ್ ಜೈನ್, ಪಂಡಿತ್ ಪ್ರದೀಪ್, ಮಹೇಶ್ ಪಂಡಿತ್, ದಿಲೀಪ್, ಮೊದಲಾದವರು ಉಪಸ್ಥಿತರಿದ್ದರು ಬಳಿಕ ಸ್ವಾಮೀಜಿ ಶೀತಲ್ ನಾಥ ತೀರ್ಥ o ಕರ ಜನ್ಮ ಭೂಮಿ ಜೈನ,ಹಿಂದೂ, ಬೌದ್ಧ ಧರ್ಮದ ತ್ರಿವೇಣಿ ಸಂಗಮಜಾರ್ಕoಡ್ ರಾಜ್ಯ ದ,ಇಟ್ ಕೋರಿ, ಬದ್ಧಲ್ ಪುರ ಕ್ಷೇತ್ರ ದರ್ಶನ ಮಾಡಿದರು.

LEAVE A REPLY

Please enter your comment!
Please enter your name here