ಹೆಬ್ರಿ : ಪಡುಕುಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ೩ನೇ ಅವಧಿಗೆ ಜಗದೀಶ ಹೆಗ್ಡೆ ಪಟೇಲರ ಮನೆ ಅವಿರೋಧವಾಗಿ ಬುಧವಾರ ಆಯ್ಕೆಯಾಗಿದ್ದಾರೆ. ಹಿರಿಯ ಸಹಕಾರಿ ದುರೀಣ ಜಗದೀಶ ಹೆಗ್ಡೆ ಪಡುಕುಡೂರು ಡೈರಿಯ ಸ್ಥಾಪನೆಯ ರೂವಾರಿಯಾಗಿದ್ದಾರೆ. ಕಾರ್ಕಳದ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಮಿತ್ರ ಕುಮಾರಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಡೈರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾರದಾ ಚಂದ್ರ ಶೆಟ್ಟಿ ಸಹಕರಿಸಿದರು.
ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ಕಾರ್ಕಳ ತಾಲ್ಲೂಕು ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾಗಿಯೂ ಜಗದೀಶ ಹೆಗ್ಡೆ ಸೇವೆ ಸಲ್ಲಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಅಶೋಕ ಎಂ.ಶೆಟ್ಟಿ, ನಿರ್ದೇಶಕರಾಗಿ ಹೃದಯ ಕುಮಾರ್ ಶೆಟ್ಟಿ, ಸುಕೇಶ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಸಂತೋಷ ಶೆಟ್ಟಿ, ದಿವಾಕರ ಶೆಟ್ಟಿ, ಪ್ರಕಾಶ ಶೆಟ್ಟಿಗಾರ್, ಸುರೇಶ ಪೂಜಾರಿ, ಸುಮತಿ ಶೆಟ್ಟಿ, ಸುಜಾತ ಶೆಟ್ಟಿ ಆಯ್ಕೆಯಾಗಿದ್ದಾರೆ.

