ಡಿ. 4ರಂದು ಮಂಗಳೂರು ಪುರಭವನದಲ್ಲಿ “ಜೈ ಹನುಮಾನ್” ಸಿನಿನಾಟಕ ಪ್ರದರ್ಶನ, ಗೌರವ ಸನ್ಮಾನ ಕಾರ್ಯಕ್ರಮ

0
60

ವರದಿ : ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ

ತುಳುನಾಡು : ಹಿಂದೂ ಯುವ ಸೇನೆ ಕೋಡಿಯಲ್‌ಬೈಲ್ ಮಂಗಳೂರು ಇವರು ಅರ್ಪಿಸುವ ವಿಧಾತ್ರೀ ಕಲಾವಿದೆರ್ ಕುಡ್ಲ (ರಿ) ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಚಿದಾನಂದ ಅದ್ಯಪಾಡಿ ಸಾರಥ್ಯದ ಅದ್ಧೂರಿ ರಂಗ ವಿನ್ಯಾಸದ ಸಿನಿನಾಟಕ “ಜೈ ಹನುಮಾನ್” ದಿನಾಂಕ 4 ಡಿಸೆಂಬರ್ ಗುರುವಾರ ಸಂಜೆ ಗಂಟೆ 5 ಗಂಟೆಗೆ ಮಂಗಳೂರು ಪುರಭವನ ಪ್ರಥಮ ಪ್ರದರ್ಶನ ಕಾಣಲಿದೆ
ಕಾರ್ಯಕ್ರಮದ ವೀಕ್ಷಣೆ ಸಂಪೂರ್ಣ ಉಚಿತವಾಗಿದ್ದು, ಕ್ಲಪ್ತ ಸಮಯಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಆಸಕ್ತರು 15 ನಿಮಿಷ ಮುಂಚಿತವಾಗಿ ಉಪಸ್ಥಿತರಿರುವಂತೆ ಆಯೋಜಕರು ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9844023564 ಸಂಪರ್ಕಿಸುವಂತೆ ಕೋರಲಾಗಿದೆ

ಗೌರವ ಸನ್ಮಾನಿತರು ಪ್ರಕಾಶ್ ಕುಂಪಲ, ಉದ್ಯಮಿ,ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ರೂಪೇಶ್ ಶೆಟ್ಟಿ ,ಚಲನಚಿತ್ರ ನಟ ಅರ್ಜುನ್ ಭಂಡಾರ್ಕರ್
ಸೇವಾ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಸ್ಥಾಪಕ ಅಧ್ಯಕ್ಷರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರರಸ್ಕೃತರು ಜಾನಪದ ಪರಿಷತ್ತು ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಲ್ ಬೈಲ್ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ್ದು, ಕಲಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವಂತೆ ಆಯೋಜಕರು ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here