ಶ್ರೀ ಕಪಿಲೇಶ್ವರ ದೇವಸ್ಥಾನ ಚಾರ್ವಾಕ ಇರ್ವೆರ್ ಉಳ್ಳಾಕುಲ ದೈವಗಳ ಕ್ಷೇತ್ರ ಅಮರ ಕಾಲ್ಪಾಡಿ ಜ : 17-01-2026 ಜ. 25-01-2026ರವರೆಗೆ ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ.
ಕಾರ್ಯಕ್ರಮಗಳ ವಿವರ
ದಿನಾಂಕ 16-01-2026 – ಸಂಜೆ ಗಂಟೆ 6.30 : ದೇವತಾ ಪ್ರಾರ್ಥನೆ, ಪ್ರಾಸಾದ ಶುದ್ದಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿಪೂಜೆ.
ದಿನಾಂಕ 17-01-2026 – ಪೂರ್ವಾಹ್ನ ಗಂಟೆ 9.00 : ಇರ್ವೆರ್ ಉಳ್ಳಾಕುಲ ಕ್ಷೇತ್ರ ಅಮರ ಕಾಸ್ಟಾಡಿಯಿಂದ ದೇವಸ್ಥಾನಕ್ಕೆ ದೈವಗಳ ಭಂಡಾರ ಬರುವುದು. ಪೂರ್ವಾಹ್ನ ಗಂಟೆ 10.00 : ಧ್ವಜಾರೋಹಣ, ದೇವರ ಬಲಿ, ಮಹಾಪೂಜೆ, ಸಂಜೆ ಗಂಟೆ 5.30ರಿಂದ 6.30ರ ವರೆಗೆ : ಭಜನೆ, ರಾತ್ರಿ ಗಂಟೆ 7.00 : ನಿತ್ಯ ಬಲಿ, ವಸಂತಕಟ್ಟೆ ಪೂಜೆ, ಪೇಟೆ ಸವಾರಿ-ನಾಲ್ಕಂಬ ಕಟ್ಟೆಪೂಜೆ ಮತ್ತು ಮುದುವ, ಅಭಿಕಾರ ಬಾರೆಂಗಳಗುತ್ತು, ಜತ್ತೋಡಿ-ಕಲಾಯಿ ಕಟ್ಟಿಪೂಜೆಯಾಗಿ ಹಿಂತಿರುಗಿ ದೇವಸ್ಥಾನಕ್ಕೆ
ದಿನಾಂಕ 18-01-2026 – ಪೂರ್ವಾಹ್ನ ಗಂಟೆ 8.00 : ನಿತ್ಯಬಲಿ, ಮಹಾಪೂಜೆ, ಪೂರ್ವಾಹ್ನ ಗಂಟೆ 9.00 ಏಕದಶರುದ್ರಾಭಿಷೇಕ, ಹಂಸವಾಫೀಶ್ವರೀ ಹೋಮ (ಅಷ್ಠಮಂಗಲದ ಪ್ರಶ್ನಾಚಿಂತನಾ ಪರಿಹಾರದ ಪ್ರಯುಕ್ತ) ಸಂಜೆ ಗಂಟೆ 5.30 ರಿಂದ 6.30ರ ವರೆಗೆ : ಭಜನೆ, ರಾತ್ರಿ ಗಂಟೆ 7.00 : ನಿತ್ಯಬಲಿ, ವಸಂತಕಟ್ಟೆ ಪೂಜೆ, ಪೇಟೆ ಸವಾರಿ, ವಾಲಸರಿ ಕಟ್ಟೆಯಿಂದ ಅಯೋಧ್ಯನಗರ-ದೇವರಗುಡ್ಡೆ-ಎರ್ಕ, ಎಣ್ಣೂರು ಕಟ್ಟೆಯವರೆಗೆ ಸವಾರಿ ಹಿಂತಿರುಗಿ ದೇವಸ್ಥಾನಕ್ಕೆ
ದಿನಾಂಕ 19-01-2026 – ಪೂರ್ವಾಹ್ನ ಗಂಟೆ 8.00 : ನಿತ್ಯಬಲಿ, ಮಹಾಪೂಜೆ, ಪೂರ್ವಾಹ್ನ ಗಂಟೆ 9-00 : ಮೃತ್ಯುಂಜಯ ಹೋಮ (ಅಷ್ಟಮಂಗಲದ ಪ್ರಶ್ನಾಚಿಂತನಾ ಪರಿಹಾರದ ಪ್ರಯುಕ್ತ) 5.00 ರಿಂದ 7.00ರ ವರೆಗೆ : ಸಾಂಸ್ಕೃತಿಕ ಕಾರ್ಯಕ್ರಮ – ಚಾರ್ವಾಕ ಶಾಲಾ ಮಕ್ಕಳಿಂದ, ರಾತ್ರಿ ಗಂಟೆ 7.00 : ಮಹಾರಂಗಪೂಜೆ, ಉತ್ಸವ ಬಲಿ, ಶ್ರೀ ದೇವರ ಪಲ್ಲಕ್ಕಿ ಉತ್ಸವ, ರಾತ್ರಿ ಗಂಟೆ 9.00: ದೇವರ ಚಂದ್ರಮಂಡಲ ರಥೋತ್ಸವ
ದಿನಾಂಕ 20-01-2026 – ಪೂರ್ವಾಹ್ನ ಗಂಟೆ 10.00 : ನಿತ್ಯಬಲಿ, ದರ್ಶನ ಬಲಿ, ದೈವಗಳ ಭೇಟಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಸಂಜೆ ಗಂಟೆ 5.30ರಿಂದ : ಜಿಲ್ಲೆಯ ಅಹ್ವಾನಿತ ಭಜನಾ ಮಂಡಳಿಗಳಿಂದ ಕುಣಿತ ಭಜನೋತ್ಸವ, ರಾತ್ರಿ ಗಂಟೆ 8.00 : ದೈವದೇವರ ಭೇಟಿ, ಕಲಾಯಿ ರಥ ಕಟ್ಟೆಪೂಜೆ, ಚಾಮುಂಡಿ ನೇಮ ರಾತ್ರಿ ಗಂಟೆ 9-30 : ಉತ್ಸವ ಬಲಿ, ಅಷ್ಠಾವಧಾನ ಸೇವೆ, ಸುಡುಮದ್ದು ಪ್ರದರ್ಶನ, ಶಯನ
ದಿನಾಂಕ 21-01-2026 – ಪೂರ್ವಾಹ್ನ ಗಂಟೆ 8.30 : ಕವಟೋದ್ಘಾಟನೆ, ಕಲಶಾಭಿಷೇಕ, ಸಂಜೆ ಗಂಟೆ 4.00 : ದೇವಳದಿಂದ ಹೊರಟು ಕಾಸ್ಟಾಡಿ – ದೇವಿನಗರ ಇಡ್ಕಡ್ಕ ಕುಮಾರಧಾರ ನದಿಗೆ ಅವಧೃತ ಸ್ನಾನಕ್ಕೆ ಹೊರಡುವುದು ಹಿಂತಿರುಗಿ ಬಂದು ಬಟ್ಟಲು ಕಾಣಿಕೆ ಧ್ವಜಾವರೋಹಣ ರಾತ್ರಿ ಗಂಟೆ 7.00ರಿಂದ : ಯಕ್ಷಗಾನ ಬಯಲಾಟ ಗೆಜ್ಜೆಗಿರಿ ಮೇಳ ಮತ್ತು ಅತಿಥಿ ಕಲಾವಿದರಿಂದ ಸಂಯೋಜಕರು : ಶ್ರೀ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ರಾತ್ರಿ ಗಂಟೆ 9.00ರಿಂದ : ಧಾರ್ಮಿಕ ಸಭೆ
ದಿನಾಂಕ 22-01-2026 – ಪೂರ್ವಾಹ್ನ ಗಂಟೆ 8.30ರಿಂದ : ಕಲಶಾಭಿಷೇಕ, ಸೀಯಾಳಾಭಿಷೇಕ, ಮಹಾಪೂಜೆ ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ಅಮರ ಕಾಲ್ಪಾಡಿ ಇರ್ವೆರ್ ಉಳ್ಳಾಕುಲ ನೇಮೋತ್ಸವ, ಪೂರ್ವಾಹ್ನ ಗಂಟೆ 8.00 ಗೊನೆ ಕಡಿಯುವುದು, ಪೂರ್ವಾಹ್ನ ಗಂಟೆ 10.00 : ಭಂಡಾರ ತೆಗೆದು ಮುಂಡ್ಯ ಮಜಲಲ್ಲಿ ಮುಂಡ್ಯ ಹಾಕುವುದು, ರಾತ್ರಿ ಗಂಟೆ 7.00 : ಶ್ರೀ ದೈವಗಳ ವಾಲಸರಿ
ದಿನಾಂಕ 23-01-2026 – ರಾತ್ರಿ ಗಂಟೆ 6.30 : ದೈವಗಳ ಬಂಡಿ ಉತ್ಸವ, ಪೂಮಾಣಿ ದೈವ ಮತ್ತು ಪೂವಲಂಕಮ್ಮ ದೆಯ್ಯರೆ ನೇಮೋತ್ಸವ (ಕೀಲೆ ಮಾಡದಲ್ಲಿ )
ದಿನಾಂಕ 24-01-2026 – ಬೆಳಿಗ್ಗೆ ಗಂಟೆ 10.00 : ದೈವಗಳ ಬಂಡಿ ಉತ್ಸವ, ಕಿನ್ನಿಮಾಣಿ ದೈವದ ನೇಮೋತ್ಸವ, ಚಂದುನಾಯರ್, ಮರ್ಲ್ಬಮಾಣಿ, ಹಳ್ಳತ್ತಾಯ ಹಾಗೂ ಇತರ ಉಪದೈವಗಳ ನೇಮೋತ್ಸವ (ಕಳಂಗಾಜೆ ಮಾಡದಲ್ಲಿ )
ದಿನಾಂಕ 25-01-2026 – ಪೂರ್ವಾಹ್ನ ಗಂಟೆ 10.00 : ಅಮ್ಮನವರ ಪೂಜೆ ಮತ್ತು ಶಿರಾಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

