ಜ.25: ಮಂಗಳೂರು ನಗರದ ಮಹಾಕಾಳಿಪಡ್ಪು ಅಂಡರ್‌ಪಾಸ್‌ ರಸ್ತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಗರಾಭಿವೃದ್ದಿ ಸಚಿವರಿಂದ ಉದ್ಘಾಟನೆ 

0
32

ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿವತಿಯಿಂದ ನಿರ್ಮಾಣಗೊಂಡಂತಹ ಅಂಡರ್‌ಬ್ರಿಡ್ಜ್‌ ರಸ್ತೆ ಮಹಾಕಾಳಿಪಡ್ಪು, ಮಂಗಳೂರು ನಗರದ ಹೆಬ್ಬಾಗಿಲಾಗಿರುಂತಹ ಕೇರಳ ಮತ್ತು ಇತರ ಭಾಗಗಳಿಂದ ಮಂಗಳೂರಿಗೆ ಬರುವಂತಹ ಅತ್ಯುತ್ತಮವಾದಂತಹ ರಸ್ತೆಯನ್ನು ಜನವರಿ 25, 2026ರಂದು ನಡೆಯಲಿದೆ ಈ ಉದ್ಘಾಟನೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದಂತಹ ದಿನೇಶ್‌ ಗುಂಡೂರಾವ್‌ ಹಾಗೂ ನಗರಾಭಿವೃದ್ದಿ ಸಚಿವರಾದಂತಹ ಬಿ.ಎಸ್‌ ಸುರೇಶ್‌ರವರು ನೇರವೇರಿಸಲು ಒಪ್ಪಿಕೊಂಡಿದ್ಧಾರೆ ಎಂದು ಐಐವನ್‌ ಡಿʼಸೋಜಾರವರು ತಿಳಿಸಿದ್ದಾರೆ.

ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ದಿ ಸಚಿವರಾಗಿದ್ದ  ಯುಟಿ ಖಾದರ್‌ ರವರ ಐವತ್ತು ಕೋಟಿ ರೂಪಾಯಿಯನ್ನು ಸ್ಮಾರ್ಟ್‌ ಸಿಟಿ ಮೂಲಕ ಈ ಒಂದು ಯೋಜನೆ ಒದಗಿಸಿ ಮಂಗಳೂರಿಗೆ ಪ್ರವೇಶ ಮಾಡುವಂತಹ ಕೇರಳ ಮತ್ತು ಉಳ್ಳಾಲ ಭಾಗದಿಂದ ಮಂಗಳೂರಿಗೆ ಪ್ರವೇಶ ಮಾಡುವಂತಹ ನಾಲ್ಕು ಪಥದ ದೊಡ್ಡ ಯೋಜನೆಯನ್ನು ಮಂಗಳೂರಿಗೆ ಕೊಡುಗೆಯಾಗಿ ನೀಡಿದ್ಧಾರೆ ಎಂದು ಐವನ್‌ ಡಿʼಸೋಜಾ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ತಿಳಿಸಿದರು.

ಈ ಒಂದು ಕಾರ್ಯಕ್ರಮವು ಐದು ವರ್ಷಗಳ ಹಿಂದೆಯೇ ಈ ಯೋಜನೆಯ ಕನಸುಕಂಡಿದ್ದಂತಹ ಯು.ಟಿ. ಖಾದರ್‌ ರವರು ಈ ಯೋಜನೆಯನ್ನು ರೂಪಿಸಿದವರು ಇಷ್ಟು ವರ್ಷಗಳ ಕಾಲ ನೆನೆಗುದಿಗೆ ಬಿದ್ದು ಇಂದು ಈ ಯೋಜನೆಯು ಜಾರಿಗೊಳುತ್ತಿರುವುದು ಸಂತಸದ ವಿಚಾರ ಎಂದು ಜೆಪ್ಪು ಮಹಾಕಾಳಿ ಪಡ್ಪು ಬ್ರಿಡ್ಜ್‌ನ ಹತ್ತಿರ ಇಂದು ಸಂತೋಷದ ಸುದ್ದಿ ಎಂದು ಮಾತನಾಡುತ್ತಾ ತಿಳಿಸಿದರು.ಎರಡು ತಿಂಗಳುಗಳಲ್ಲಿ ಐದು ಭಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಆಗುವಂತೆ ಸರಕಾರದ ಅಧಿಕಾರಿಗಳ, ಕಾಂಟ್ರೆಕ್ಟರ್‌ಗಳ  ಮೇಲೆ ಒತ್ತಡ ಹೇರಿ ಈ ಕಾಮಗಾರಿಯನ್ನು ಪೂರ್ಣಗೊಳಿಸುವರೆಗೆ ಸತತವಾಗಿ ಈ ಕಾಮಗಾರಿಯ ಬಗ್ಗೆ ಓಂದು ರೀತಿಯ ಹೋರಾಟವನ್ನು ನಡೆಸಿ ಐವನ್‌ ಡಿʼಸೋಜಾ ಇವರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಅಡಿ ಜನರಿಗೆ ಅರ್ಪಣೆ ಯಾಗುವ ತನಕ ನಿರಂತರ ಹೋರಾಟ ಮಾಡಿದ್ದಾರೆ ಎಂದು ಮಂಗಳೂರು  ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಬುಲ್‌ ಸಲೀಂ ಈ ಸಂದರ್ಭದಲ್ಲಿ ಮಾತನಾಡುತ್ತಾ ತಿಳಿಸಿದರು. ಈ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಸದ್ರಿ ಕಾಮಗಾರಿಯಲ್ಲಿ ಯಾವುದೇ ಲೋಪದೋಷಗಳು ಇದ್ದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಮೂಲಕ ಸರಿಪಡಿಸಿಕೊಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರು ಅರಣ್‌ ಪ್ರಭಾರವರೊಂದಿಗೆ ಈ ಯೋಜನೆಯ ಬಗ್ಗೆ ಚರ್ಚಿಸಿದರು. ಈ ಹೋರಾಟದಲ್ಲಿ ಭಾಗವಹಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here