ಜನಜಾಗ್ರತಿ ಜಾಥಾ ಕಾರ್ಯಕ್ರಮ ರೋಟರಿ ಕ್ಲಬ್ ಕಾರ್ಕಳ – ಸಂಯುಕ್ತ ಆಶ್ರಯ

0
50

ವಿಶ್ವ ಏಡ್ಸ್ ದಿನಾಚರಣೆ – 2025 :

ಕರ್ಣಾಟಕ ಸರ್ಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಾರ್ಕಳ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ಸರಕಾರಿ ಶುಶ್ರೂಷ ಮಹಾವಿದ್ಯಾಲಯ ಕಾರ್ಕಳ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಶಾಖೆ ಮತ್ತು ರೋಟರಿ ಕ್ಲಬ್ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ – 2025ರ ಅಂಗವಾಗಿ ಜನಜಾಗ್ರತಿ ಜಾಥಾ ಕಾರ್ಕಳದಲ್ಲಿ ಜರುಗಿತು.

ಕಾರ್ಯಕ್ರಮದ ಭಾಗವಾಗಿ, ಜಾಥಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳದಿಂದ ಪ್ರಾರಂಭವಾಗಿ ಬಸ್ ಸ್ಟ್ಯಾಂಡ್ ಸರ್ಕಲ್, ನಂತರ ಅನಂತಶಯನ ಸರ್ಕಲ್ ಮೂಲಕ ಸಾಗುತ್ತಾ ಪುನಃ ಆಸ್ಪತ್ರೆ ಆವರಣಕ್ಕೆ ತಲುಪಿತು. ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿಗಳು, ಸ್ವಯಂಸೇವಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉತ್ಸಾಹಭರಿತವಾಗಿ ಭಾಗವಹಿಸಿದರು.

ಕಾರ್ಯಕ್ರಮವನ್ನು ಶ್ರೀಮತಿ ಶರ್ಮಿಳಾ ಸಿ.ಎಸ್., ಗೌರವಾನ್ವಿತ ಹಿರಿಯ ಸಿವಿಲ್ ಜಡ್ಜ್ ಮತ್ತು ACJM ನ್ಯಾಯಾಧೀಶರು, ಕಾರ್ಕಳ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕುಮಾರಿ ಕೋಮಲ ಆರ್.ಸಿ. ಪ್ರಧಾನ ಸಿವಿಲ್ ಜಡ್ಜ್ ಮತ್ತು JMF ನ್ಯಾಯಾಧೀಶರು ಕಾರ್ಕಳ, ಶ್ರೀಮತಿ ಗೀತಾ ಗೌರವಾನ್ವಿತ ಹೆಚ್ಚುವರಿ ಸಿವಿಲ್ ಜಡ್ಜ್ &JMFC ನ್ಯಾಯಾಧೀಶರು ಕಾರ್ಕಳ. ಡಾ. ಸಂದೀಪ್ ಕುಡ್ವ , ತಾಲೂಕು ಆರೋಗ್ಯಾಧಿಕಾರಿಗಳು, ಡಾ. ಕೆ.ಆರ್. ಜೋಶಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಶಾಖೆ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರು ಶ್ರೀ ಕೆ. ನವೀನ್ ಚಂದ್ರ ಶೆಟ್ಟಿ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ, ಸರಕಾರಿ ಶುಶ್ರೂಷ ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಸಜನಿ ಸುಬ್ರಮಣ್ಯ, ಲೈಲಾ ಥಾ ಮಸ್ ಆರೋಗ್ಯ ನಿರೀಕ್ಷಣಾಧಿ ಕಾರಿ ಪುರಸಭೆ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಉಪನ್ಯಾಸಕ ಶ್ರೀ ಶ್ರೀಧರ್ ಪ್ರಭು ಸಹಕಾರ ವ್ಯಕ್ತಪಡಿಸಿದರು. ಈ ವರ್ಷದ ವಿಶ್ವ ಏಡ್ಸ್ ದಿನದ ಘೋಷವಾಕ್ಯ: “ಎಚ್‌ಐವಿ/ಏಡ್ಸ್ ರೋಗ ಹರಡುವಿಕೆಯನ್ನು ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ.” ಜಾಗೃತಿಯೇ ಏಡ್ಸ್ ನಿಯಂತ್ರಣದ ಪ್ರಮುಖ ಆಯುಧ ಎಂಬ ಸಂದೇಶದೊಂದಿಗೆ ಜಾಥಾ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ರೋಟರಿ ಕ್ಲಬ್ ಕಾರ್ಕಳ ಮತ್ತು ಸಹಭಾಗಿತ್ವ ಸಂಸ್ಥೆಗಳು ಸಂಘಟಿತವಾಗಿ ನಡೆಸಿಕೊಟ್ಟವು. ಕಾರ್ಕಳ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಸುಶೀಲ ಕೆ ಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

– ರೋಟರಿ ಕ್ಲಬ್ ಕಾರ್ಕಳ

LEAVE A REPLY

Please enter your comment!
Please enter your name here