ಜಪ್ಪಿಮೊಗರು ಕಡೇಕಾರ್‌ ವೆಟ್‌ವೆಲ್‌  ದುರ್ನಾತ ಸಮಸ್ಯೆ ವಿಧಾನಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾ ಭೇಟಿ

0
63

ಜಪ್ಪಿನಮೊಗರು ದೃವತತ್ಯಾಜ್ಯ ಸಂಸ್ಕರಣಾ ಘಟಕದ ಸುತ್ತಮುತ್ತ ಅತೀವ ದುರ್ನಾತದಿಂದಾಗಿ ಅಲ್ಲಿ ವಾಸಿಸುವ ನಾಗರೀಕರಿಗೆ ತೊಂದರೆ ಉಂಟಾಗಿರುವ ಬಗ್ಗೆ ದೂರು ಬಂದಿದ್ದು ಕರ್ನಾಟಕ ಸರಕಾರದ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರು ಭೇಟಿ ನೀಡಿದ್ದು, ಅಧಿಕಾರಿಗಳನ್ನು  ಸ್ಥಳಕ್ಕೆ ಕರೆಯಿಸಿ, ಪರಿಶೀಲನೆ ನಡೆಸಿದರು. ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಶ್ರೀ ಶಿವಲಿಂಗಪ್ಪರವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಪ್ರದೇಶಗಳಲ್ಲಿ ಹೊರಗಿನಿಂದ  ತ್ಯಾಜ್ಯ ತುಂಬಿದ ಟ್ಯಾಂಕರ್‌ ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಪಂಪಿಂಗ್‌ ಸಂದರ್ಭದಲ್ಲಿ ಸುಮಾರು 1 ಕಿ.ಮೀ. ವ್ಯಾಪ್ತಿ ಪ್ರದೇಶಕ್ಕೆ  ಅಸಹನೀಯ ದುರ್ನಾತ ಬೀರುತ್ತಿದ್ದು ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ತೊಂದರೆ ಉಂಟಾಗುತ್ತಿದ್ದು ಊರಿನ ನಾಗರಿಕರು ಈ ಬಗ್ಗೆ ಶಾಸಕರಿಗೆ ದೂರು ಸಲ್ಲಿಸಿದರು. ಈ ಬಗ್ಗೆ ಪಾಲಿಕೆಯ ಕಮಿಷನರ್‌ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಐವನ್‌ ಡಿʼಸೋಜಾ ರವರು ಸ್ಥಳೀಯ ನಿವಾಸಿಗಳಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ವಾರ್ಡ್‌ ಅಧ್ಯಕ್ಷರಾದ ಸುಧಾಕರ್‌ ಜೆ., ಅನಿಲ್‌ ಡಿʼಸೋಜಾ, ಐವನ್‌ ರೋಸರಿಯೋ, ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ತಾರಾನಾಥ ಭಂಡಾರಿ, ಶ್ರೀಮತಿ ಲತಾ ಕುಮಾರಿ, ಶ್ರೀಮತಿ ಜಯಶೀಲ ಕುಮಾರಿ, ಸ್ಪೂರ್ತಿ ಸುದೀರ್‌, ಐವನ್‌ ಡಿʼಸೋಜಾ ಕಡೇಕಾರ್‌, ಶ್ರೀಮತಿ ಹೆಲನ್‌ ಡಿʼಸೋಜಾ, ಹಾಗೂ ಸ್ಥಳೀಯ ನಿವಾಸಿಗಳು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here