ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತ್ರಿಭುವನ್ ಜೆ ಸಿ ವತಿಯಿಂದ ಸಪ್ತಾಹ ಕಾರ್ಯಕ್ರಮ ಪ್ರಾರಂಭವಾಯಿತು. ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ ನಾಳೆ ಮಹಾವೀರ ಕಾಲೇಜಿನಲ್ಲಿ ನಡೆಯಲಿದೆ. ಸಪ್ಟಂಬರ್ 11ರಂದು ಶಟಲ್ ಬ್ಯಾಟ್ಮೆಂಟನ್ ಸ್ಪರ್ಧೆ ಹಾಗೂ ದಂತ ಶಿಬಿರ ನಡೆಯಲಿದೆ. 12ರಂದು ಉದ್ದಿಮೆಗೆ ಸಹಕರಿಸುವ ಶಿಬಿರ, 13 ರಂದು ನಾಗರಿಕ ಜವಾಬ್ದಾರಿಯನ್ನು ಬಿಂಬಿಸುವ ಕಾರ್ಯಕ್ರಮ, 14ರಂದು ಯುವಕರನ್ನು ಜೆಸಿ ತೆಕ್ಕೆಗೆ ಸೇರಿಸುವ ಕಾರ್ಯಕ್ರಮ ನಡೆಯಲಿದೆ. ಸಪ್ತಾಹದ ಕೊನೆಯ ದಿನ ಸಮಾಜ ಮಂದಿರದಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷೆ ವರ್ಷ ಕಾಮತ್, ಕಾರ್ಯದರ್ಶಿ ಶ್ರವಣ್ ಕುಮಾರ್, ಪ್ರದೀಪ್ ಕುಮಾರ್, ಸಂಯೋಜಕ ಸುಧಾಕರ್ ಶೆಟ್ಟಿ, ಶಾಂತಲಾ ಮಾಹಿತಿಯನ್ನು ನೀಡಿದರು.

