ಮೂಡುಬಿದಿರೆ: ದಿನಾಂಕ 11/9/2025 ರಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಪೂಪಾಡಿಕಲ್ಲು ಕಡಂದಲೆಯಲ್ಲಿ ಜೇಸಿಐ ಮುಂಡ್ಕೂರು ಭಾರ್ಗವದ ಜೇಸಿ ಸಪ್ತಾಹ-2025 ” ವಸಂತ ಪರ್ವ” 3ನೇ ದಿನದ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷರು JFM ವಸಂತ್ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾದ ಪದ್ಮನಾಭ ಅಮೀನ್ ಕಡೆಕಾರು ಇವರು ಜೇಸಿಯಿಂದ ಆಗುವ ಉಪಯೋಗಳ ಬಗ್ಗೆ ಹೇಳಿದರು, ಸುಚರಿತ ಶೆಟ್ಟಿ( ನಿರ್ದೇಶಕರು ಕೆ. ಎಮ್ ಎಫ್ ಮಂಗಳೂರು) ಇವರು ಜೇಸಿ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿದರು. ಮುಖ್ಯ ಅತಿಥಿಗಳು ಲೀಲಾಧರ ಪೂಜಾರಿ , ಶ್ರೀಧರ್ ಗೌಡ, ಸುಧಾಕರ ಅಂಚನ್ ಕುಂಕ್ಕುಜೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಉಮೇಶ್ ನಾಯ್ಕ್ ಧನ್ಯವಾದ ಮಾಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಡಂದಲೆ ಪಾಲಡ್ಕ ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಮಹಿಳಾ ಸದಸ್ಯರಿಂದ ಮತ್ತು ಜೇಸಿಐ ಮುಂಡ್ಕೂರು ಭಾರ್ಗವದ ಸದಸ್ಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ವರದಿ: ಜಗದೀಶ್ ಪೂಜಾರಿ ಕಡಂದಲೆ

