ಜೆಸಿಐ ಪರ್ಕಳ ವತಿಯಿಂದ SSLC ವಿದ್ಯಾರ್ಥಿಗಳಿಗೆ ““HOW TO FACE EXAM” ತರಬೇತಿ

0
13

ಪರ್ಕಳ, ಫೆಬ್ರವರಿ 06 : ಪರ್ಕಳದ ಬಿ.ಎಂ. ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್‌ನಲ್ಲಿ SSLC ವಿದ್ಯಾರ್ಥಿಗಳಿಗಾಗಿ ಜೆಸಿಐ ಪರ್ಕಳ ಘಟಕದ ವತಿಯಿಂದ “HOW TO FACE EXAM” ಎಂಬ ಪರೀಕ್ಷಾ ಸಿದ್ಧತಾ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಜೆಸಿಐ ಇಂಡಿಯಾ ಯ ರಾಷ್ಟ್ರೀಯ ತರಬೇತಿದಾರರಾದ ಜೆಸಿ ಅರುಣಾ ಎಸ್. ಐತಾಳ್ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸುವ ವಿಧಾನ, ಸಮಯ ನಿರ್ವಹಣೆ ಹಾಗೂ ಮಾನಸಿಕ ಒತ್ತಡ ನಿಯಂತ್ರಣದ ಕುರಿತು ಉಪಯುಕ್ತ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮವನ್ನು ಬಿ.ಎಂ. ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷೆ ವಿನಯಾ ಸರೋಜಾ ಕುಮಾರಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಪರ್ಕಳದ ಅಧ್ಯಕ್ಷರಾದ ಜೆಸಿ HGF ಭರತ್ ಕೆ. ಕುಲಾಲ್ ಅವರು ವಹಿಸಿದ್ದರು.

ಶಾಲೆಯ ಪ್ರಾಂಶುಪಾಲರಾದ ಸುಮಲತಾ, ಜೆಸಿಐ ಪರ್ಕಳದ ಪೂರ್ವಾಧ್ಯಕ್ಷರಾದ ಜೆಸಿ ಮರಿಯಪ್ಪ, ಜೆಸಿ ಸುಧೀರ್ ಕುಮಾರ್, ತರಬೇತಿ ನಿರ್ದೇಶಕರಾದ ಜೆಸಿ ಪ್ರಶಾಂತ್ ಎಸ್, ಹಾಗೂ ಜೂನಿಯರ್ ಜೇಸೀ ಚೇರ್‌ಪರ್ಸನ್ JJC ಧನುಷ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ಜೆಸಿಐ ಪರ್ಕಳ ಕಾರ್ಯದರ್ಶಿ ಜೆಸಿ ನಿತೀಶ್ ಅವರು ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here