ಜೆಸಿಐ ಶಾಂಭವಿ ಮುಲ್ಕಿ ಇದರ ಜೆಸಿ ಸಪ್ತಾಹದ ಸಮಾರೋಪ ಸಮಾರಂಭವು ದಿನಾಂಕ 15-09-2025 ರಂದು ಸಂಜೆ ರೋಟರಿ ಕ್ಲಬ್ ಕಾರ್ನಾಡು ಇಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಲೋಕೇಶ್ ಅಮೀನ್ ಸಿವಿಲ್ ಕಾಂಟ್ರಾಕ್ಟರ್, ಹೆಜಮಾಡಿ, ಲಯನ್ಸ್ ಪುಷ್ಪರಾಜ್ ಚೌಟ ಹಾಗೂ ಜೆಸಿ. ಬಾಲಚಂದ್ರ ಸನಿಲ್ ಇವರ ಸಮ್ಮುಖದಲ್ಲಿ ಮಾಜಿ ಯೋಧರಾದ ಮಾದವ್ ಪೂಜಾರಿ ಕಿಲ್ಪಾಡಿ ಹಾಗೂ ಕ್ರೀಡೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ವಿಜೇತ ಕುಮಾರ್ ದೀಕ್ಷಿತ್ ಇವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿಗಾರ್ ಸ್ವಾಗತಿಸಿದರು. ಜೆಸಿ.ಅಶೋಕ್ ಕುಮಾರ್ ಶೆಟ್ಟಿ ನಿರೂಪಿಸಿದರು. ಜೆಸಿ ಸಪ್ತದ ಮಹಾನಿರ್ದೇಶಕರಾದ ವಾಸು ಪೂಜಾರಿ ಚಿತ್ರಪು ಜೆಸಿ ಸಪ್ತಾಹದ ನಡೆದ ಕಾರ್ಯಕ್ರಮದ ವಿವರಣೆ ನೀಡಿದರು, ಕಾರ್ಯದರ್ಶಿ ಜೆಸಿ.ಕೇಶವ ಸುವರ್ಣ ರವರು ಧನ್ಯವಾದ ನೀಡಿದರು.

