ಕಂಬಳಬೆಟ್ಟು: ಜಲ ಜೀವನ್ ಮಿಷನ್ ವತಿಯಿಂದ ಕಂಬಳಬೆಟ್ಟು ದ.ಕ.ಜಿ.ಪಂ. ಹಿ.ಪ್ರಾ. ಶಾಲೆ ಮಕ್ಕಳಿಗೆ ನೀರು ಸಂರಕ್ಷಣೆ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಯಿತು.
ಚಿತ್ರಕಲಾ ಸ್ಪರ್ಧೆಯಲ್ಲಿ 15 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದರು. ಬಳಿಕ ಐಇಸಿ ಸಮನ್ವಯಧಿಕಾರಿ ಧರ್ಮಶ್ರೀ ನೀರಿನ ಮಹತ್ವ ಕುರಿತಾಗಿ ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಫಾತಿಮತ್ ಅಲಿಫಾ, ದ್ವಿತೀಯ ಫಾತಿಮತ್ ಶೈಮಾ, ತೃತೀಯ ಮಹಮ್ಮದ್ ಶಂಶೀರ್ ಬಹುಮಾನವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲೆ ವಾರಿಜ ಬಿ.ಎ., ಶಿಕ್ಷಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.