ಉಡುಪಿ ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜೋಗಿ ಸಮಾಜ ಸೇವಾ ಸಮಿತಿ (ರಿ) ಉಡುಪಿ ಕಾರ್ಕಳ ಘಟಕ, ಇದರ 16ನೇ ವಾಷಿಕೋತ್ಸವವು ಅಧ್ಯಕ್ಷರಾದ ಗೋವಿಂದ ಜೋಗಿ ಪಳ್ಳಿ ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಆದಿತ್ಯವಾರ ಜರುಗಿತು.
ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಬಳಿಕ ಸಭಾ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ಮತ್ತು ಸಮಾಜದ ಏಳಿಗೆಗೆ ಶ್ರಮಿಸಿರುವ ಕೆ. ಎನ್. ಶ್ರೀನಿವಾಸ ಜೋಗಿ ಬೆಂಗಳೂರು ರವರಿಗೆ “ಜೋಗಿ ರತ್ನ” ಶ್ರೀ ದೇವರಾಜ ಬಳೆಗಾರ್ ಬೈಂದೂರು “ಜೋಗಿ ಭಾರ್ಗವ” ಹಾಗೂ ಪುರುಶೋತ್ತಮ ಹೆಚ್.ಕೆ ಮಂಗಳೂರು ರವರಿಗೆ “ಜೋಗಿ ಸಾಮ್ರಾಟ್” ಬಿರುದು ಸಹಿತ ಸನ್ಮಾನ ಏರ್ಪಡಿಸಲಾಗಿತ್ತು. ಅಲ್ಲದೇ ಸಮಾಜದಲ್ಲಿ ವಿವಿಧ ಕ್ಷೆತ್ರ ದಲ್ಲಿ ಸೇವೆ ಸಲ್ಲಿಸಿರುವ ಹಾಗೂ ಸಮಾಜದ ಹಿರಿಯ ವ್ಯಕ್ತಿಗಳಿಗೆ ಮತ್ತು ಅತೀ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಗೌರವವನ್ನು ಅಲ್ಲದೇ ಉಡುಪಿಯ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ವಿಶು ಶೆಟ್ಟಿ ಯವರುಗಳಿಗೆ ಸಮಾಜದ ಮುಖಂಡರಾದ ನವೀನಚಂದ್ರ ಜೋಗಿ ಮತ್ತು ಕೆ.ಎನ್. ಮುರಲೀಧರ ಜೋಗಿ ಕಮ್ಮರಡಿ ಇವರಿಂದ ಸನ್ಮಾನ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಕೆ.ಎನ್. ಚಂದ್ರಶೇಖರ ಜೋಗಿ ಬೆಂಗಳೂರು. ಸ್ಥಾಪಕಾಧ್ಯಕ್ಷ ರಾದ ನವೀನ ಚಂದ್ರ ಜೋಗಿ, ಮಾಜಿ ಅಧ್ಯಕ್ಷರಾದ ಪಿ. ಸುರೇಶ್ ಕುಮಾರ್ ಹೆಬ್ರಿ, ಗೌರವಾಧ್ಯಕ್ಷರಾದ ಹರೀಶ್ಚಂದ್ರ ಜೋಗಿ ಕಟಪಾಡಿ, ಕರ್ನಾಟಕ ಜೋಗಿ ಸುಧಾರಕ ಸಂಘದ ಅಧ್ಯಕ್ಷರಾದ ಕಿರಣ್ ಕುಮಾರ್ ಜೋಗಿ ಮಂಗಳೂರು, ಶ್ರೀಕಾಂತ್ ಹಿಂದುಳಿದ ವರ್ಗಗಳ ವಿಸ್ತರಣಾ ಅಧಿಕಾರಿ ಉಡುಪಿ, ಕುಂದಾಪುರ ಸಂಘದ ಅಧ್ಯಕ್ಷರಾದ ರಮೇಶ್ ಜೋಗಿ ಹೆಮ್ಮಾಡಿ, ಮಹಿಳಾ ಸಂಘದ ಅಧ್ಯಕ್ಷ ರಾದ ರಜನಿ ಜೋಗಿ ಸೂಡಾ, ಉದ್ಯಮಿ ಉದಯಕುಮಾರ್ ಜೋಗಿ ಬೆಂಗಳೂರು, ಮಾಜಿ ಅಧ್ಯಕ್ಷರಾದ ರವೀಂದ್ರ ಜೋಗಿ ಉಡುಪಿ, ಉದ್ಯಮಿ ಉದಯ ಜೋಗಿ ಗೋಳಿಯಂಗಡಿ, ಉ.ಕ. ಅಧ್ಯಕ್ಷರಾದ ಶಿವರಾಮ ಜೋಗಿ ಮುರ್ದೆಶ್ವರ , ವೈ, ದಿಲೀಪ್ ಜೋಗಿ , ಉಡುಪಿ ಜೋಗಿ ವಿವಿದೋದ್ದೇಶ ಸ. ಅಧ್ಯಕ್ಷರಾದ ವಸಂತ ಜೋಗಿ ಏರ್ಮಾಳು, ಕುಂದಾಪುರ ಜೋಗಿ ವಿವಿದೋದ್ದೇಶ ಸ. ಅಧ್ಯಕ್ಷರಾದ ಶೇಖರ ಜೊಗಿ ಪ್ರಧಾನ ಕಾರ್ಯದರ್ಶಿ ಅಶೋಕ ಜೋಗಿ ಕಾರ್ಕಳ, ಕೋಶಾಧಿಕಾರಿ ರಾಕೇಶ್ ಜೋಗಿ ನಿಟ್ಟೂರು ಪ್ರಾಸ್ತಾವಿಕ ನುಡಿದರು. ಪ್ರಭಾಕರ ಜೋಗಿ ಬಂಟಕಲ್ಲು ನಿರೂಪಿಸಿದರು.

