ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರವರ ಶುಭಾಶೀರ್ವಾದಗಳೊಂದಿಗೆ ಆಮಂತ್ರಣ ಸೇವಾ ಪ್ರತಿಷ್ಠಾನ (ರಿ.) ಅಳದಂಗಡಿ ಇದರ ಉದ್ಘಾಟನಾ ಸಮಾರಂಭವು ದಿನಾಂಕ 13-07-2025ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 10-30ಕ್ಕೆ ಮೌಂಟ್ ಕಾರ್ಮೆಲ್ ಕಾಂಪ್ಲೆಕ್ಸ್, ಅಳದಂಗಡಿಯಲ್ಲಿ ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಪತ್ರಕರ್ತ ಮಿತ್ರರಿಗೆ ಸನ್ಮಾನ, ಕವಿಗೋಷ್ಠಿ, ಯಕ್ಷಗಾನ ತರಗತಿ, ಸೇವಾ ಚಟುವಟಿಕೆಗಳು ನಡೆಯಲಿವೆ. ಅಧ್ಯಕ್ಷತೆಯನ್ನು ಶಿವಪ್ರಸಾದ್ ಅಜಿಲರು ಗೌರವಾಧ್ಯಕ್ಷರು, ಆಮಂತ್ರಣ ಸೇವಾ ಪ್ರತಿಷ್ಠಾನ ಅಳದಂಗಡಿ ವಹಿಸಲಿರುವರು. ಹರೀಶ್ ಪೂಂಜ ಶಾಸಕರು, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಇವರು ನೂತನ ಕಚೇರಿ ಉದ್ಘಾಟನೆ ನೆರವೇರಿಸಲಿರುವರು. ಸೇವಾ ಪ್ರತಿಷ್ಠಾನ ಉದ್ಘಾಟನೆಯನ್ನು ಕಿರಣ್ ಚಂದ್ರ ಡಿ. ಪುಷ್ಪಗಿರಿ, ಉರುವಾಲು ಗೌರವ ಸಲಹೆಗಾರು, ಆಮಂತ್ರಣ ಪ್ರತಿಷ್ಠಾನ ಇವರು ನಡೆಸಲಿರುವರು. ಯಕ್ಷಗಾನ ತರಗತಿ ಉದ್ಘಾಟನೆ ಸುಮಂತ್ ಕುಮಾರ್ ಜೈನ್ ಅಧ್ಯಕ್ಷರು, ಎಕ್ಸೆಲ್ ಶಿಕ್ಷಣ ಸಂಸ್ಥೆ ಗುರುವಾಯನಕೆರೆ, ಹಾಗೂ ಮುಖ್ಯ ಅತಿಥಿಗಳಾಗಿ ಡಾ.ಎನ್.ಎಮ್. ತುಳುಪುಳೆ ಶ್ರೀ ಕ್ಲಿನಿಕ್ ಅಳದಂಗಡಿ, ಸುರೇಶ್ ಪೂಜಾರಿ ಉದ್ಯಮಿಗಳು ಮುಂಬಯಿ, ದೇವೆಂದ್ರ ಹೆಗ್ಡೆ, ಕೊಕ್ರಾಡಿ ಉದ್ಯಮಿಗಳು ಬೆಂಗಳೂರು, ಲ| ದೇವದಾಸ್ ಎಲ್. ಶೆಟ್ಟಿ ಹಿಬರೋಡಿ ನಿಕಟಪೂರ್ವ ಅಧ್ಯಕ್ಷರು, ಲಯನ್ಸ್ ಕ್ಲಬ್ ಬೆಳ್ತಂಗಡಿ ಉಪಸ್ಥಿತರಿರಲಿರುವರು.