ಜುಲೈ 13: ಪಡುಕೋಣಾಜೆಯ ಬಾಕ್ಯಾರುಗದ್ದೆಯಲ್ಲಿ “ಕೆಸರ್‌ಡೊಂಜಿ ದಿನ” ವಿಶೇಷ ಕಾರ್ಯಕ್ರಮ

0
30

ಮೂಡುಬಿದಿರೆ: ಪಡು-ಮೂಡುಕೊಣಾಜೆ ಯುವಕರ ಆಶ್ರಯದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಕೆಸರಿನ ಆಟ ಎರಡನೇ ವರ್ಷದ ಕೆಸರ್‌ಡೊಂಜಿ ದಿನ-2025 ಕಾರ್ಯಕ್ರಮವು ಜುಲೈ 13ರಂದು ಪಡುಕೋಣಾಜೆಯ ದೊಡ್ಡಮನೆ ಬಾಕ್ಯಾರುಗದ್ದೆಯಲ್ಲಿ ನಡೆಯಲಿವೆ.
ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್‌, ಮಹಿಳೆಯರಿಗೆ ತ್ರೋಬಾಲ್‌, ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿದ್ದು, ಜುಲೈ 10 ರ ಮುಂಚಿತವಾಗಿ ತಂಡದ ಹೆಸರನ್ನು ನೊಂದಾಯಿಸಬೇಕು.
ಕೆಸರ್‌ಡೊಂಜಿ ದಿನ ಕ್ರೀಡಾಕೂಟದಲ್ಲಿ ವಿಶೇಷವಾಗಿ ಕಂಬಳ ಕ್ಷೇತ್ರದ ಸಾಧಕವೀರ ಪದವು ಕಾನಡ್ಕ ಫ್ರಾನ್ಸಿಸ್‌ ಫ್ಲೇವಿ ಡಿʼಸೋಜ ಇವರ ಹಗ್ಗ ಹಿರಿಯ ವಿಭಾಗದ ಕಂಬಳದ ಕೋಣ ದೂಜನಿಗೆ ಸನ್ಮಾನ ನಡೆಯಲಿದೆ. ಕ್ರೀಡಾಕೂಟವು ಪಡು-ಮೂಡುಕೋಣಾಜೆ, ಮರಿಯಾಡಿ, ಶಿರ್ತಾಡಿ, ಅಳಿಯೂರು, ವಾಲ್ಪಾಡಿ, ಜೋಗೊಟ್ಟು ಗ್ರಾಮಸ್ಥರಿಗೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದ್ದು, ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಸಂಪತ್‌ ಹೌದಾಲ್‌ – 7760422305, ಸಂತೋಷ್‌ ಶೆಟ್ಟಿ – 7090193462, ಆನಂದ ಕೆ. ಕಂಚಲಗುಡ್ಡೆ – 8970508269, ಸುಜಿತ್‌ ಆಚಾರ್ಯ- 9663610378 ಇವರನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here