ತುಳುವರ ಹೆಮ್ಮೆಯ ಅಂತಾರಾಷ್ಟ್ರೀಯ ಸಂಸ್ಥೆ ಅಮೆರಿಕಾದಲ್ಲಿರುವ ಆಲ್ ಅಮೆರಿಕಾ ತುಳು ಅಸೋಸಿಯೇಷನ್ ತನ್ನ ನಾಲ್ಕನೆ ಹುಟ್ಟುಹಬ್ಬವನ್ನು ತುಳುಸಿರಿ ಪರ್ಬ ಹೆಸರಲ್ಲಿ ಇದೇ ತಿಂಗಳ 4,5,6 ರಂದು ಮೂರುದಿನಗಳ ಸಂಭ್ರಮಾಚರಣೆಯಲ್ಲಿ ನಡೆಸಲಿದೆ.
ಮೊದಲ ದಿನ ನಾಲ್ಕನೇ ತಾರೀಕು ವಿಶ್ವದ ಎಲ್ಲಾ ತುಳುವರ ಸೇರುವಿಕೆಯೊಂದಿಗೆ ನಾರ್ಥ್ ಕೆರೋಲಿನದ ದಿ ಲೋಟಸ್ ಪಾರ್ಟಿ ಹಾಲ್ ಇಲ್ಲಿ ಔತಣಕ್ಕಾಗಿ ಸೇರುವುದರೊಂದಿಗೆ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭವಾಗಲಿದೆ.
ಐದನೇ ತಾರೀಕು ಮುಖ್ಯ ಕಾರ್ಯಕ್ರಮವು ಆಟ ಸಿರಿಮುಡಿ , ಆಟ ಸನ್ಮಾನ , ಮತ್ತು ಆಟ ಸಿರಿನುಡಿ ಪ್ರಶಸ್ತಿ ಪ್ರದಾನದೊಂದಿಗೆ ಅಲ್ಸ್ಟನ್ ರಿಡ್ಜ್ ಮಿಡ್ಲ್ ಸ್ಕೂಲ್ ಕ್ಯಾರಿ ಕೆರೋಲಿನಾ ಇಲ್ಲಿ ಆಯೋಜನೆಗೊಂಡಿದ್ದು ಇದರಲ್ಲಿ ಕರ್ನಾಟಕದ ವಿಧಾನ ಸಭಾ ಸಭಾಪತಿ ಯು ಟಿ ಖಾದರ್ , ನಿಟ್ಟೆ ವಿಶ್ವ ವಿದ್ಯಾಲಯದ ತುಳು ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸಾಯಿಗೀತ ಹೆಗ್ಡೆ , ಕತಾರ್ ಕನ್ನಡ ಸಂಘದ ಅಧ್ಯಕ್ಷ , ಎ ಟಿ ಎಸ್ ಸಂಸ್ಥೆಯ ಮುಖ್ಯಸ್ಥ ಡಾ. ರವಿ ಶೆಟ್ಟಿ ಮೂಡಂಬೈಲ್ ಮತ್ತು ಎಂ ರಿಸಲ್ಟ್ ಸಂಸ್ಥೆಯ ಸಂಸ್ಥಾಪಕ ಮುಖ್ಯಾಧಿಕಾರಿ ಶೇಖರ್ ನಾಯಕ್ ಮುಖ್ಯ ಅತಿಥಿಗಳಾಗಿ ಪಾಲು ಪಡೆಯುತ್ತಾರೆ . ಕಾರ್ಯಕ್ರಮದಲ್ಲಿ ವಿಶೇಷ ತುಳುನಾಡ ಖಾದ್ಯಗಳು ಮತ್ತು ನೆಲ ಸಂಸ್ಕೃತಿಯ ಮನರಂಜನಾ ಕಾರ್ಯಕ್ರಮಗಳು, ಚರ್ಚೆಗಳು ನಡೆಯಲಿವೆ .
ಆರನೇ ತಾರೀಕು ಕಾರ್ಯಕ್ರಮದ ಅಂತಿಮ ದಿನದಲ್ಲಿ ವಿಶೇಷ ಮಿಲನ ಕೂಟವನ್ನು ಆಯೋಜಿಸಿರುವ ಸಂಸ್ಥೆ ಅಲ್ಲಿ ನಮ್ಮ ಬಾಲ್ಯದ ಆಟೋಟಗಳನ್ನು , ಹಾಡು ಹಸೆ ಮನರಂಜನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 01High House Road Cary NC ಇಲ್ಲಿ ನಡೆಸಲಿದೆ .
ವಿಶ್ವದ ತುಳುವರನ್ನು ಸೇರಿಸಿಕೊಂಡು ಮೊದಲ ಬಾರಿಗೆ ಆರಂಭಿಸಿರುವ ಈ ಸಿರಿಪರ್ಬ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡ ಬೇಕೆಂದು ಕಾರ್ಯಕ್ರಮದ ಮುಖ್ಯ ಕಾರ್ಯಕಾರಿ ಸಚೇತಕೆ ರಂಜನಿ ಅಸೈಗೋಳಿ , ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್ , ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಮತ್ತು ಆಟ ಸಂಸ್ಥೆಯ ಸರ್ವ ಸದಸ್ಯರು ಅದರಪೂರ್ವಕವಾಗಿ ಭಿನ್ನವಿಸಿಕೊಂಡಿದ್ದಾರೆ