ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಹತ್ತು ದಿನಗಳ ತುಳು ನಾಟಕ ಕಾರ್ಯಾಗಾರದ ಉದ್ಘಾಟನೆ ನಗರದ ಪಡೀಲ್ ಅಮೃತ ಬಿ.ಎಡ್ ಕಾಲೇಜಿನಲ್ಲಿ ಜೂನ್ 24ರ ಮಂಗಳವಾರ ಅಪರಾಹ್ನ 2.30 ಕ್ಕೆ ನಡೆಯಲಿದೆ.
ಹಿರಿಯ ರಂಗ ತಜ್ಞ ಹಾಗೂ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಉದ್ಘಾಟನೆ ನೆರವೇರಿಸಿ, ‘ತುಳು ನಾಟಕ ಕ್ಷೇತ್ರ ಬೆಳೆದು ಬಂದ ಹಾದಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ವಹಿಸುವರು. ಹಿರಿಯ ರಂಗ ನಟ ಪ್ರಭಾಕರ ಕಾಪಿಕಾಡ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ,ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಹಾಸ ಕಣ್ವತೀರ್ಥ ಉಪಸ್ಥಿತರಿರುವರು. ಹಿರಿಯ ನಟ ಹಾಗೂ ನಿರ್ದೇಶಕರಾದ ಜಗನ್ ಪವಾರ್ ಬೇಕಲ್ ಅವರು ನಾಟಕ ಕಾರ್ಯಾಗಾರದ ನಿರ್ದೇಶಕರಾಗಿರುವ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.