ಕೆ.ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್(ರಿ) ಮೂಡಬಿದ್ರಿ ಇದರ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

0
317

ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿ, ಸ್ವಕ್ಷೇತ್ರದಲ್ಲಿ ಅಭಿವೃದ್ದಿಗೆ ಹೊಸ ಛಾಪು ಕೊಟ್ಟ ದಿವಂಗತ ಕೊಡ್ಮಾನ್ ಅಮರನಾಥ್ ಶೆಟ್ಟಿ ಅವರ ಸವಿನೆನಪಿಗಾಗಿ ಕೆ.ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್(ರಿ) ಮೂಡಬಿದ್ರಿ ಇದರ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ನೆರ್ಕೆರೆ ಇಲ್ಲಿನ ಮಕ್ಕಳಿಗೆ ಬರವಣಿಗೆ ಪುಸ್ತಕವನ್ನು ದಿನಾಂಕ 10-06-2025ರ ಮಂಗಳವಾರದಂದು ವಿತರಿಸಲಾಯಿತು.

ಕೆ.ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್(ರಿ) ಮೂಡಬಿದ್ರಿ ವತಿಯಿಂದ ನಡೆದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮರಿಯಡ್ಕ ರಮೇಶ್ ಶೆಟ್ಟಿ, ತುಳು ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ, ಬಿ.ಎಸ್.ಜೆ.ಎಂ ಅಧ್ಯಕ್ಷರಾದ ಆಸೀಫ್ ಇಕ್ಬಾಲ್, ಪಂಚಾಯತ್ ಸದಸ್ಯರುಗಳಾದ ಹಸನಬ್ಬ, ಹರಿಪ್ರಸಾದ್ ಶೆಟ್ಟಿ ತೊಡಾರ್ ಹಾಗೂ ನೇಮಿರಾಜ್ ಶೆಟ್ಟಿ ಭಾಗವಹಿಸಿದ್ದರು. ಇದರ ಜೊತೆಗೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಜಯಲಕ್ಷ್ಮೀ ಶೆಟ್ಟಿಗಾರ್, ಶಾಲಾ ಮುಖ್ಯೋಪಾಧ್ಯಯರು ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಿದರು.

ಕೆ.ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್(ರಿ)ನ ಟ್ರಸ್ಟಿಗಳಾದ ಡಾ. ಅಮರಶ್ರೀ ಶೆಟ್ಟಿ, ಆಶ್ರೀತಾ ಪಿ ಶೆಟ್ಟಿ, ಹಾಗೂ ಜಯಶ್ರೀ ಶೆಟ್ಟಿ ಭಾಗವಹಿಸಿ ಮಕ್ಕಳಿಗೆ ಪುಸ್ತಕ ವಿತರಣೆಯ ಕಾರ್ಯಕ್ರಮಕ್ಕೆ ಸಹಕರಿಸಿದರು. ಈ ಟ್ರಸ್ಟ್ ವತಿಯಿಂದ ಇನ್ನೂ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯನ್ನು ಟ್ರಸ್ಟಿ ಗಳು ಹಾಕಿಕೊಂಡಿದ್ದು ಇದರ ಮೊದಲ ಹಂತವಾಗಿ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ನಡೆಸಲಾಗಿದೆ. ಈ ಕಾರ್ಯಕ್ರಮವನ್ನು ಇನ್ನೂ ಕೆಲವು ಹಂತಗಳಲ್ಲಿ ನಡೆಸಲಾಗುವುದು ಎಂದು ಟ್ರಸ್ಟಿಗಳು ತಿಳಿಸಿದ್ದು ಎರಡನೇ ಹಂತದಲ್ಲಿ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ವರ್ಣಾಬೆಟ್ಟು ಹಾಗೂ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಕೆಮಾರ್ ಇಲ್ಲಿನ ಮಕ್ಕಳಿಗೆ ಉಚಿತ ಪುಸ್ತಕವನ್ನು ವಿತರಣೆ ಮಾಡಲು ನಿರ್ಧಾರಿಸಲಾಗಿದೆ. ಅಧಿಕೃತವಾಗಿ ಟ್ರಸ್ಟ್ ನ ಲೋಕಾರ್ಪಣೆ ಕಾರ್ಯಕ್ರಮ ಮುಂದಿನ ದಿನದಲ್ಲಿ ನಡೆಯಲಿದ್ದು ಆ ಬಳಿಕ ಮತ್ತಷ್ಟು ಹೆಚ್ಚಿನ ಲೋಕ ಕಲ್ಯಾಣ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದು ಟ್ರಸ್ಟ್ ನ ಪ್ರಮುಖರು ತಿಳಿಸಿದ್ದಾರೆ.

ಮೂಡಬಿದ್ರೆ ಪರಿಸರದಲ್ಲಿ ಅಭಿವೃದ್ದಿಗೆ ಹೊಸ ಮುನ್ನುಡಿ ಬರೆದಿದ್ದ ಕೆ.ಅಮರನಾಥ್ ಶೆಟ್ಟಿಯವರ ಸವಿನೆನಪಿನಲ್ಲಿ ಇನ್ನೂ ಹೆಚ್ಚಿನ ಐತಿಹಾಸಿಕ ಕಾರ್ಯಕ್ರಮಗಳು ನಡೆಯಲಿದೆ ಎಂಬುದೇ ಖುಷಿ.

LEAVE A REPLY

Please enter your comment!
Please enter your name here